Film News

ಡಿಫರೆಂಟ್ ಲುಕ್ ನಲ್ಲಿ ವಿಜಯ್ ದೇವರಕೊಂಡ: ಟೈಟಲ್ & ಫಸ್ಟ್ ಲುಕ್ ರಿವೀಲ್

ಹೈದರಾಬಾದ್: ಟಾಲಿವುಡ್‌ನ ಸೆನ್ಸೇಷನಲ್ ನಟ ಎಂದೇ ಪ್ರಖ್ಯಾತಿ ಪಡೆದ ವಿಜಯ್ ದೇವರಕೊಂಡ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಂಬಂಧ ಹೊಸ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.

ಟಾಲಿವುಡ್ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸಾರಥ್ಯದಲ್ಲಿ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯ ಪಾಂಡೆ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ನಟ ವಿಜಯ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲಿಗೆ ಈ ಚಿತ್ರಕ್ಕೆ ಫೈಟರ್ ಎಂದು ಹೆಸರಿಡಲಾಗಿದ್ದು, ಇದೀಗ ಟೈಟಲ್ ಬದಲಾಗಿದ್ದು, ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇನ್ನೂ ಈ ಚಿತ್ರಕ್ಕೆ ಲೈಗರ್ ಎಂಬ ಹೆಸರಿಡಲಾಗಿದ್ದು, ಸಾಲಾ ಕ್ರಾಸ್ ಬ್ರೀಡ್ ಎಂಬ ಟ್ಯಾಗ್ ಲೈನ್ ಇಟ್ಟಿದ್ದಾರೆ. ಅಂದಹಾಗೆ ಈಗಾಗಲೇ ಈ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದೆ.

ಇನ್ನೂ ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಾಲಿವುಡ್ ಸ್ಟಾರ್ ಹೃತಿಕ ರೋಷನ್ ಅಭಿನಯದ ಫೈಟರ್ ಎಂಬ ಸಿನೆಮಾ ಘೋಷಣೆಯಾದ ಬಳಿಕ ಪೂರಿ ಜಗನ್ನಾಥ್ ತಮ್ಮ ಚಿತ್ರದ ಟೈಟಲ್ ಬದಲಾಯಿಸಿದ್ದಾರೆ. ಈ ಚಿತ್ರದ ಮೂಲಕ ನಟ ವಿಜಯ್ ದೇವರಕೊಂಡ ಬಾಲಿವುಡ್ ಗೂ ಸಹ ಕಾಲಿಡುತ್ತಿದ್ದಾರೆ. ಇನ್ನೂ ಈ ಚಿತ್ರ ಹೇಗಿರಲಿದೆ ಎಂಬ ಕೌತಯಕ ವಿಜಯ್ ಅಭಿಮಾನಿಗಳಿಗೆ ಮೂಡಿದೆ.

ಅಂದಹಾಗೆ ಲೈಗರ್ ಎಂಬ ಪದದ ಅರ್ಥ ಹೆಣ್ಣು ಸಿಂಗ ಹಾಗೂ ಗಂಡು ಹುಲಿಯಿಂದ ಜನಿಸಿದ ಪ್ರಾಣಿಗೆ ಲೈಗರ್ ಎನ್ನುತ್ತಾರೆ. ಪಕ್ಕಾ ಆಕ್ಷನ್ ಸಿನೆಮಾ ಇದಾಗಿದ್ದು, ಈ ಹಿಂದೆ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ್ ಮಿಂಚಲಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನ ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಹಾಗೂ ಕರಣ್ ಜೋಹರ್ ಎಂಬುವವರು ಬಂಡವಾಳ ಹೂಡಿದ್ದಾರೆ. ಅಷ್ಟೇ ಅಲ್ಲದೇ ನಿರ್ದೇಶಕ ಪೂರಿ ಜಗನ್ನಾಥ್ ಸಹ ಈ ಬಂಡವಾಳದಲ್ಲಿ ಪಾಲು ಹೊಂದಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್ ನ ಅನನ್ಯಾ ಪಾಂಡೆ ಅಭಿನಯಿಸಲಿದ್ದು, ಮೊದಲ ಬಾರಿಗೆ ಅನನ್ಯ ಪಾಂಡೆ ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಟಿ ರಮ್ಯಕೃಷ್ಣ ಸಹ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಲಿದ್ದು, ಖ್ಯಾತ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

Trending

To Top