Film News

ನವರಸ ಸಿನೆಮಾದಲ್ಲಿ ಸೂರ್ಯ ನ್ಯೂ ಲುಕ್!

ಚೆನೈ: ಖ್ಯಾತ ನಟ ಸೂರ್ಯ ಹಾಗೂ ಗೌತಮ್ ಮೆನನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನವರಸ ಸಿನೆಮಾದಲ್ಲಿ ಸೂರ್ಯ ನ್ಯೂ ಲುಕ್ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಉದ್ಬವವಾಗಿದೆ.

ಗೌತಮ್ ಮೆನನ್ ಹಾಗೂ ಸೂರ್ಯ ಜೋಡಿಯ ಈ ಚಿತ್ರವನ್ನು ಹಲವು ನಿರ್ದೇಶಕರು ಸೇರಿ ನಿರ್ದೇಶಿಸುತ್ತಿರುವುದು ವಿಶೇಷವಾಗಿದ್ದು, ಇದನ್ನು ಅಂತಾಲಜಿ ಸಿನೆಮಾ ಎಂತಲೂ ಕರೆಯಲಾಗುತ್ತಿದೆ. ಇನ್ನೂ ಸೂರ್ಯ ಈ ಸಿನೆಮಾದಲ್ಲಿ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಚಿತ್ರದಲ್ಲಿ ಒಟ್ಟು 9 ಕಿರು ಚಿತ್ರಗಳಿರಲಿವೆಯಂತೆ. ಈ ಎಲ್ಲಾ ಸಿನಿಮಾಗಳಲ್ಲಿ ಸೂರ್ಯ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇನ್ನೂ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ರವರು ನಿರ್ಮಾಣ ಮಾಡುತ್ತಿದ್ದಾರೆ.

ಇಲ್ಲಿಯವರೆಗೂ ಕಾಣದಂತಹ ಅವತಾರದಲ್ಲಿ ಸೂರ್ಯ ಕಾಣಿಸಿಕೊಳ್ಳಲಿದ್ದು, ಉದ್ದ ಕೂದಲು, ಮೀಸೆ ಇರದ ಪೋಸ್, ರಾಕ್ ಸ್ಟಾರ್ ಮಾದರಿಯ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಗೌತಮ್ ಮೆನನ್ ಸಿನೆಮಾಗಳು ನಿಜ ಜೀವನಕ್ಕೆ ಹತ್ತಿರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸೂರ್ಯ ರವರು ಎಂತಹ ಸಿನೆಮಾ ಮಾಡಲಿದ್ದಾರೆ ಎಂಬ ಕೌತುಕ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

Trending

To Top