Film News

ಕಾಲಿವುಡ್ ಸ್ಟಾರ್ ಸೂರ್ಯ 40ನೇ ಸಿನೆಮಾದಲ್ಲಿ ಪ್ರಿಯಾಂಕ ಮೋಹನ್ ನಾಯಕಿ!

ಚೆನೈ: ತಮಿಳು ಸಿನಿರಂಗದ ಖ್ಯಾತ ನಟ ಅನೇಕ ಸಿನೆಮಾಗಳ ಮೂಲಕ ಸೂಪರ್ ಹಿಟ್ ಹೊಡೆದ ಸೂರ್ಯ ರವರ 40ನೇ ಸಿನೆಮಾ ಘೋಷಣೆಯಾಗಿದ್ದು, ಈ ಚಿತ್ರದಲ್ಲಿ ಯುವ ನಟಿ ಪ್ರಿಯಾಂಕ ಮೋಹನ್ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

ಇತ್ತೀಚಿಗಷ್ಟೆ ಬಿಡುಗಡೆಯಾದ ಸೂರರೈ ಪೊಟ್ರು ಚಿತ್ರ ಸಿನಿರಂಗದಲ್ಲಿ ಸೂಪರ್ ಹಿಟ್ ಹೊಡೆದಿದ್ದು, ಈ ಸಿನೆಮಾ ಆಸ್ಕರ್ ಪ್ರಶಸ್ತಿಯನ್ನು ಸಹ ಪಡೆಯಲಿದೆ. ಇದೀಗ ಸೂರ್ಯ ತಮ್ಮ 40ನೇ ಸಿನೆಮಾ ಘೋಷಣೆ ಮಾಡಿದ್ದು, ಚಿತ್ರದ ಟೈಟಲ್ ಇನ್ನೂ ಬಹಿರಂಗ ಮಾಡಿಲ್ಲ. ಇನ್ನೂ ಈ ಸಿನೆಮಾದಲ್ಲಿ ನಾಯಕಿ ಯಾರಾಗಲಿದ್ದಾರೆ? ಯಾರು ನಿರ್ದೇಶನ ಮಾಡಲಿದ್ದಾರೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆತಿದ್ದು, ಸೂರ್ಯ 40ನೇ ಸಿನೆಮಾವನ್ನು ಕಾಲಿವುಡ್ ಖ್ಯಾತ ನಿರ್ದೇಶಕ ಪಾಂಡಿರಾಜ್ ನಿರ್ದೇಶನ ಮಾಡುತ್ತಿದ್ದು, ನಾಯಕಿಯಾಗಿ ಪ್ರಿಯಾಂಕ ಮೋಹನ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ನಟಿ ಪ್ರಿಯಾಂಕ ಮೋಹನ್ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಸಕ್ರಿಯರಾಗಿದ್ದು, ತಮಿಳುನಲ್ಲಿ ಶಿವಕಾರ್ತಿಕೇಯನ್ ಜೊತೆ ಅಭಿನಯಿಸಿರುವ ಡಾಕ್ಟರ್ ಚಿತ್ರ ಸಹ ಬಿಡುಗಡೆಗೆ ಸಿದ್ದವಾಗಿದ್ದು, ಸನ್ ಪಿಕ್ಚರ್ಸ್ ಬಂಡವಾಳ ಹಾಕುತ್ತಿರುವ ಸೂರ್ಯ ೪೦ನೇ ಸಿನೆಮಾದಲ್ಲಿ ಪ್ರಿಯಾಂಕ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಅನೇಕ ಪ್ರಾಜೆಕ್ಟ್‌ಗಳನ್ನು ಕೈಲಿಟ್ಟುಕೊಂಡಿರುವ ಸೂರ್ಯ ನಿರ್ದೇಶಕ ಹರಿ ಸಾರಥ್ಯದಲ್ಲಿ ಮೂಡಿಬರಲಿರುವ ಅರುವಾ ಎಂಬ ಚಿತ್ರದಲ್ಲಿ ಸಹ ನಟಿಸಲಿದ್ದಾರೆ. ಜೊತೆಗೆ ನಿರ್ದೇಶಕ ವೆಟ್ರಿಮಾರನ್ ರವರ ಚಿತ್ರದಲ್ಲೂ ಸಹ ಸೂರ್ಯ ನಟಿಸಲಿದ್ದು, ಈವರೆಡಕ್ಕೂ ಮೊದಲು ಸೂರ್ಯ ೪೦ನೇ ಸಿನೆಮಾ ಪ್ರಾರಂಭವಾಗುವ ಸೂಚನೆಯಿದೆ ಎನ್ನಲಾಗಿದೆ.

Trending

To Top