ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಯ್ತು ಸಿದ್ದಾರ್ತ್ ಅದಿತಿ ಪೊಟೋಸ್ …!

ದಕ್ಷಿಣ ಭಾರತದ ಯಂಗ್ ನಟ ಸಿದ್ದಾರ್ತ್ ಹಾಗೂ ಯಂಗ್ ನಟಿ ಅದಿತಿ ರಾವ್ ರವರ ಬಗ್ಗೆ ಅನೇಕ ರೂಮರ್‍ ಗಳು ಹುಟ್ಟಿಕೊಂಡಿವೆ. ಆದರೆ ಈ ರೂಮರ್‍ ಗಳ ಬಗ್ಗೆ ಸಿದ್ದಾರ್ತ್ ಆಗಲಿ ಅಥವಾ ಅದಿತಿ ರಾವ್ ಆಗಲಿ ಈ ಕುರಿತು ಎಲ್ಲೂ ಹೇಳಿಕೊಂಡಿಲ್ಲ, ಜೊತೆಗೆ ಯಾವುದೇ ಕ್ಲಾರಿಟಿ ಸಹ ನೀಡಿಲ್ಲ. ಇನ್ನೂ ಈ ಜೋಡಿ ಇತ್ತೀಚಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಆ ಪೊಟೋಗಳು ಸಖತ್ ವೈರಲ್ ಆಗಿದೆ. ಇನ್ನೂ ಅಲ್ಲಿದ್ದ ಕೆಲವರು ಪೊಟೋಗಳನ್ನು ತೆಗೆಯಲು ಮುಂದಾಗಿದ್ದು, ಸಿದ್ದಾರ್ತ್ ಅವರ ಮೇಲೆ ಕೋಪಗೊಂಡು ವಾರ್ನಿಂಗ್ ಸಹ ನೀಡಿದ್ದಾರೆ.

ನಟ ಸಿದ್ದಾರ್ತ್ ಕಾಣಥಿಲ್ ಮುತ್ತಮಿಟಲ್ ಎಂಬ ತಮಿಳು ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಬೊಮ್ಮರಿಲ್ಲು, ನುವ್ವೋಸ್ತಾನಂಟೆ ನೆನೊದ್ದಂಟಾನಾ ಮೊದಲಾದ ಅನೇಕ ಹಿಟ್ ಸಿನೆಮಾಗಳ ಮೂಲಕ ಸಿನಿರಸಿಕರ ಮನಸ್ಸಿನಲ್ಲಿ ಬೇರೂರಿದ್ದಾರೆ. ಆದರೆ ಇತ್ತೀಚಿಗೆ ಆತನ ಸಿನೆಮಾಗಳು ಹೆಚ್ಚಾಗಿ ಹಿಟ್ ಆಗುತ್ತಿಲ್ಲ. ಸುಮಾರು ದಿನಗಳ ಬಳಿಕ ಮಹಾಸಮುದ್ರಂ ಎಂಬ ಸಿನೆಮಾದ ಮೂಲಕ ಕಾಣಿಸಿಕೊಂಡರೂ ಸಹ ಆ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದೀಗ ಸಿದ್ದಾರ್ತ್ ಹಾಗೂ ಅದಿತಿ ರಾವ್ ಹೈದರಿ ರವರ ಬಗ್ಗೆ ದೊಡ್ಡದಾಗಿ ರೂಮರ್‍ ಗಳು ಹುಟ್ಟಿಕೊಂಡಿವೆ. ಈ ಜೋಡಿ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ರೂಮರ್‍ ಗಳು ಈ ಹಿಂದೆ ಹುಟ್ಟಿಕೊಂಡಿತ್ತು. ಇದೀಗ ಮತ್ತೊಮ್ಮೆ ಇವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಇನ್ನೂ ಈಗಾಗಲೇ ಸಿದ್ದಾರ್ತ್ ಹಾಗೂ ಅದಿತಿ ರಾವ್ ಇಬ್ಬರೂ ಅವರವರ ಪತಿ ಪತ್ನಿಯರೊಂದಿಗೆ ವಿಚ್ಚೇದನ ಪಡೆದುಕೊಂಡಿದ್ದಾರೆ. ಸಿದ್ದಾರ್ತ್ ಹಾಗೂ ಅದಿತಿ ರಾವ್ ಇಬ್ಬರೂ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮುಂಬೈನಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಅವರ ಬಗೆಗಿನ ರೂಮರ್‍ ಗೆ ಮತ್ತಷ್ಟು ಬಲ ಬಂದಂತಾಗಿದೆ. ಇನ್ನೂ ಮಹಾಸಮುದ್ರಂ ಎಂಬ ಸಿನೆಮಾದಲ್ಲಿ ಸಿದ್ದಾರ್ತ್ ಹಾಗೂ ಅದಿತಿ ಜೋಡಿಯಾಗಿ ನಟಿಸಿದ್ದರು. ಸಿದ್ದಾತ್ ಸಿನೆಮಾಗಳಿಂದ ದೂರವಿದ್ದ ಮೂರು ವರ್ಷಗಳ ಬಳಿಕ ಈ ಸಿನೆಮಾ ಬಿಡುಗಡೆಯಾಗಿತ್ತು. ಅಜಯ್ ಭೂಪತಿ ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬಂದಿದ್ದು, ಈ ಸಿನೆಮಾದಲ್ಲಿ ಶರ್ವಾನಂದ್ ಸಹ ನಟಿಸಿದ್ದರು. ಇನ್ನೂ ಈ ಸಿನೆಮಾ ಶೂಟಿಂಗ್ ಸಮಯದಲ್ಲೇ ಸಿದ್ದಾರ್ತ್ ಹಾಗೂ ಅದಿತಿ ರಾವ್ ಪ್ರೀತಿಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಸಿದ್ದಾರ್ತ್ ಹಾಗೂ ಅದಿತಿ ರಾವ್ ಮುಂಬೈನ ಸೆಲೂನ್ ನಿಂದ ಹೊರಬರುವಾಗ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದಾರೆ. ಅವರನ್ನು ನೋಡಿದ ಕೂಡಲೇ ಅವರನ್ನು ಪೊಟೋಗಳನ್ನು ತೆಗೆಯಲು ಮುಂದಾಗಿದ್ದು. ಇದರಿಂದ ಆಗ್ರಹಗೊಂಡ ಸಿದ್ದಾರ್ತ್ ಪೊಟೋಗಳನ್ನು ತೆಗೆಯಬೇಡಿ ಎಂದು ಎಚ್ಚರಿಕೆ ನೀಡಿದ್ದರು. ನಾನು ಇಲ್ಲಿಯವನ್ನಲ್ಲ. ಬೇರೆ ಪ್ರಾಂತ್ಯಕ್ಕೆ ಸೇರಿದವನು. ನೀವು ಇಲ್ಲಿಯವರನ್ನು ಪೊಟೋ ತೆಗೆಯಿರಿ. ಮುಂದಿನ ಬಾರಿ ಈ ರೀತಿಯಾದರೇ ನಾನು ಇಷ್ಟೊಂದು ಮರ್ಯಾದೆಯಿಂದ ಹೇಳುವುದಿಲ್ಲ ಗೊತ್ತಾಯ್ತಾ ಎಂದು ಸ್ಟ್ರಾಂಗ್ ವಾರ್ನಿಂಗ್ ಸಹ ಕೊಟ್ಟಿದ್ದಾರೆ.

Previous articleಶೀಘ್ರದಲ್ಲೇ ಎರಡನೇ ಮದುವೆಯಾಗದಲಿದ್ದಾರಂತೆ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್…!
Next articleಸೋಷಿಯಲ್ ಮಿಡಿಯಾದಲ್ಲಿ ಹವಾ ಎಬ್ಬಿಸಿದ ಸೀನಿಯರ್ ನಟಿ ರಮ್ಯಕೃಷ್ಣ….!