ಮುಂಬೈ: ಜಗತ್ತಿನ ಅತೀ ಎತ್ತರದ ಕಟ್ಟಡ ಹಾಗೂ ದುಬಾರಿ ಕಟ್ಟಡ ಎಂದೇ ಪ್ರಸಿದ್ದಿ ಪಡೆದಿರುವ ಬುರ್ಜಾ ಖಲೀಫಾ ಹೊಟೆಲ್ನಲ್ಲಿ ಹಾಗೂ ದುಬೈನಲ್ಲಿ ಶಾರುಖ್ ಖಾನ್ ಅಭಿನಯಿಸಲಿರುವ ಪಠಾಣ್ ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಕಳೆದೆರಡು ದಿನಗಳ ಹಿಂದೆಯಷ್ಟೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ರವರ ೨೫ ವರ್ಷಗಳ ಸಿನಿಮಾ ಪ್ರಯಾಣ ಹಾಗೂ ವಿಕ್ರಾಂತ್ ರೋಣ ಚಿತ್ರದ ಲೊಗೋ ಅನಾವರಣ ಹಾಗೂ ಟೀಸರ್ ಬಿಡುಗಡೆ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಕ್ರಿಯೇಟ್ ಮಾಡಿದ್ದು, ಇದೀಗ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಹಲವು ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.
ಹಾಲಿವುಡ್ ನ ಮಿಷನ್ ಇಂಪಾಸಿಬಲ್ ಹಾಗೂ ಫಾಸ್ಟ್ ಅಂಡ್ ಪ್ಯೂರಿಯಸ್ ಸೇರಿದಂತೆ ಕೆಲವೊಂದು ಸಿನೆಮಾಗಳು ಬುರ್ಜಾ ಖಲೀಫಾ ಹೋಟೆಲ್ನಲ್ಲಿ ಚಿತ್ರೀಕರಣ ಮಾಡಿದ್ದವು. ಇದೀಗ ಬಾಲಿವುಡ್ನ ಪಠಾಣ್ ಚಿತ್ರ ಇದೇ ಕಟ್ಟಡದಲ್ಲಿ ನಡೆಯಲಿದ್ದು, ಬುರ್ಜಾ ಖಲೀಫಾದಲ್ಲಿ ಚಿತ್ರೀಕರಣ ಮಾಡಲಿರುವ ಭಾರತೀಯ ಮೊದಲ ಸಿನೆಮಾ ಎಂಬ ಖ್ಯಾತಿಯನ್ನು ಸಹ ಪಠಾಣ್ ಚಿತ್ರ ಪಡೆಯಲಿದೆ ಎನ್ನಲಾಗಿದೆ.
ಬಾಲಿವುಡ್ನ ಖ್ಯಾತ ನಿರ್ದೇಶಕ ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರಲಿರುವ ಪಠಾಣ್ ಚಿತ್ರ ಚಿತ್ರೀಕರಣ ಜೂನ್ ವೇಳೆಗೆ ಪೂರ್ಣಗೊಳ್ಳಲಿದ್ದು, ಮುಂಬರುವ ನವೆಂಬರ್ ಮಾಹೆಯೊಳಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇನ್ನೂ ಈ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ. ಇನ್ನೂ ಬುರ್ಜಾ ಖಲೀಫಾ ಕಟ್ಟಡದ ಮೇಲೂ ಶಾರುಖ್ ಖಾನ್ ರವರ ಪೋಟೊ ಹಾಗೂ ಸಿನೆಮಾಗಳ ಕೆಲವೊಂದು ದೃಶ್ಯಗಳನ್ನು ಪ್ರಸಾರ ಮಾಡಲಾಗಿತ್ತು.
