Film News

ಕಾಲಿವುಡ್ ಗೆ ಸತೀಶ್ ನೀನಾಸಂ ಎಂಟ್ರಿ!

ಬೆಂಗಳೂರು: ಸ್ಯಾಂಡಲ್ ವುಡ್ ನ ಸ್ಟಾರ್ ನಟ ಸತೀಶ್ ನೀನಾಸಂ ಕಾಲಿವುಡ್ ಗೆ ಎಂಟ್ರಿ ನೀಡಲಿದ್ದಾರಂತೆ. ಮುಂದಿನ ವರ್ಷ ಜನವರಿ ಮಾಹೆಯಲ್ಲಿ ತಮಿಳು ಚಿತ್ರದಲ್ಲಿ ಸತೀಶ್ ನಟಿಸಲಿದ್ದಾರಂತೆ. ಪ್ರಸ್ತುತ ಸತೀಶ್ ರವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ತಮಿಳು ರಂಗದಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಲು ರೆಡಿಯಾಗಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನೆಮಾಗಳು ಹೆಚ್ಚಾಗುತ್ತಿದ್ದು, ಕೇವಲ ಒಂದು ಭಾಷೆಗೆ ಸೀಮಿತವಾಗದೇ ದೇಶದ ವಿವಿಧ ಭಾಷೆಗಳಲ್ಲೂ ನಟಿಸುವ ಅವಕಾಶ ಜೊತೆಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಗಳಿಸಿಕೊಳ್ಳುತ್ತಿದ್ದಾರೆ ನಟರು. ಪ್ರಸ್ತುತ ಕನ್ನಡ ಸಿನಿರಂಗದ ಸಾಕಷ್ಟು ಹಿಟ್ ಗಳನ್ನು ಹೊಂದಿರುವ ಸತೀಶ್ ನೀನಾಸಂ ರವರು ತಮಿಳು ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

‘ಪಗೆಮನುಕ್ಕು ಅರುಲ್ವಾಯ್’ ಎಂಬ ಚಿತ್ರದಲ್ಲಿ ನಾಯಕನಾಗಿ ಸತೀಶ್ ನಟಿಸಲಿದ್ದು, ಈಗಾಗಲೇ ಶೂಟಿಂಗ್ ಸಹ ಪ್ರಾರಂಭವಾಗಿದ್ದು, ಮುಂದಿನ ಜನವರಿಯಿಂದ ಸತೀಶ್ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಇನ್ನೂ ಸತೀಶ್ ಅವರೊಂದಿಗೆ ಖ್ಯಾತ ನಟ ಸಸಿಕುಮಾರ್ ನಟಿಸುತ್ತಿದ್ದು, ಇವರಿಬ್ಬರ ನಡುವೆ ನೇರ ಹಣಾಹಣೆ ನಡೆಯಲಿದೆಯಂತೆ. ಇನ್ನೂ ಈ ಚಿತ್ರದ ಬಹುತೇಕ ಚಿತ್ರೀಕರಣ ಜೈಲಿನಲ್ಲೇ ನಡೆಯಲಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಸತೀಶ್ ರವರು ಖೈದಿ ವೇಶದಲ್ಲಿ ನಟಿಸಲಿದ್ದು, ಈ ಪಾತ್ರವನ್ನು ಪೋಷಿಸಲು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ.

Trending

To Top