Film News

ನಟ ಸೈಫ್ ಅಲಿ ಖಾನ್ ವಿವಾದಾತ್ಮಕ ಹೇಳಿಕೆ: ನೆಟ್ಟಿಗರ ತರಾಟೆ : ಸೈಫ್ ಅಲಿ ಖಾನ್ ಕ್ಷಮೆ

ಮುಂಬೈ: ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಪ್ಯಾನ್ ಇಂಡಿಯಾದಡಿ ರೀಲಿಸ್ ಆಗಲಿರುವ ಆದಿಪುರುಷ್ ಚಿತ್ರದಲ್ಲಿ ರಾವಣ ಪಾತ್ರದಲ್ಲಿ ಅಭಿನಯಿಸಿರುವ ಖ್ಯಾತ ನಟ ಸೈಫ್ ಅಲಿ ಖಾನ್ ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ನೆಟ್ಟಿಗರ ಆಕ್ರೋಷಕ್ಕೆ ಗುರಿಯಾಗಿದ್ದಾರೆ.

ನಟ ಸೈಫ್ ಅಲಿ ಖಾನ್ ಮಾದ್ಯಮವೊಂದಕ್ಕೆ ನೀಡಿದ ಹೇಳಿಕೆಯೊಂದರ ಪ್ರಕಾರ, ನಾನು ರಾಕ್ಷಸರ ರಾಜನ ಪಾತ್ರ ಮಾಡಲು ತುಂಬಾ ಆಸಕ್ತಿ ಹೊಂದಿದ್ದೇನೆ. ಇದರಲ್ಲಿ ಯಾವುದೇ ಮಿತಿ, ಚೌಕಟ್ಟು ಇರುವುದಿಲ್ಲ. ಆದರೆ ಮನರಂಜನೆ ದೃಷ್ಟಿಯಿಂದ ಸ್ವಲ್ಪ ಮಾನವೀಯತೆ ಅಂಶಗಳನ್ನು ತುಂಬುತ್ತೇವೆ. ರಾವಣನ ಸಹೋದರಿ ಶೂರ್ಪನಕಿಯ ಮೂಗನ್ನು ರಾಮನ ತಮ್ಮ  ಲಕ್ಷಣ ಕತ್ತರಿಸಿದ್ದಾಕ್ಕಾಗಿಯೇ ರಾವಣ ಸೀತೆಯನ್ನು ಅಪಹರಣ ಮಾಡಿದ್ದು, ರಾಮನೊಂದಿಗೆ ಯುದ್ದ ಮಾಡಿದ ಅಂತ ತೋರಿಸಲಿದ್ದೇವೆ ಎಂದು ಹೇಳಿದ್ದರು.

ರಾಕ್ಷಸ ರಾಜ ರಾವಣನ ಪರವಾಗಿ ಸೈಫ್ ಅಲಿ ಖಾನ್ ಮಾತನಾಡಿರುವುದು ನೆಟ್ಟಿಗರನ್ನು ಕೆರಳಿಸಿದೆ. ಸೀತಾ ಅಪಹರಣವನ್ನು ಸಮರ್ಥಿಸಿಕೊಳ್ಳುವುದು ಅಂದರೇ ಏನು? ರಾಕ್ಷಸನಲ್ಲಿ ಮಾನವೀಯ ಗುಣಗಳನ್ನು ತುಂಬುವುದಾದರೂ ಏತಕೆ? ಮಹಾಕಾವ್ಯವನ್ನು ತಿರುಚಿ ಸಿನೆಮಾ ಮಾಡುತ್ತಿದ್ದೀರಾ ಎಂದು ಸೋಷಿಯಲ್ ಮೀಡಿಯಾಗಳಲ್ಲಿ #BoycottAdipurush ಹ್ಯಾಶ್ ಟ್ಯಾಗ್ ನ ಮೂಲಕ ತರಾಟೆಗೆ ತೆಗೆದುಕೊಂಡಿದ್ದು, ಸೈಫ್ ಅಲಿ ಖಾನ್ ರವರನ್ನು ಕೂಡಲೇ ಚಿತ್ರದಿಂದ ಕೈಬಿಡಿ ಎಂಬ ಒತ್ತಾಯಗಳು ಸಹ ಬಂದಿದೆ. ಇದರ ಜೊತೆಗೆ ಸೈಫ್ ಪಾತ್ರಕ್ಕೆ ಗೋಪಿಚಂದ್, ಕಾರ್ತಿಕೇಯ, ರಾಣಾ ದಗ್ಗುಬಾಟಿ ಅಥವಾ ರಾಕಿಂಗ್ ಸ್ಟಾರ್ ಯಶ್ ರವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆಗಳು ವ್ಯಕ್ತವಾಗಿದೆ ಎನ್ನಲಾಗಿದೆ.

ಇನ್ನೂ ಸೊಷಿಯಲ್ ಮಿಡೀಯಾಗಳಲ್ಲಿ ನೆಟ್ಟಿಗರ ಆಕ್ರೋಷ ಹೆಚ್ಚಾಗುತ್ತಿದ್ದಂತೆ, ಸೈಫ್ ಅಲಿ ಖಾನ್ ಕ್ಷಮೆ ಕೋರಿದ್ದು, ನಾನು ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನೀಡಿದ ಹೇಳಿಕೆಯಿಂದ ಜನರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ನನಗೆ ಅರಿವಾಗಿದೆ. ನನಗೆ ಬೇರೆಯವರ ಭಾವನೆಗಳಿಗೆ ನೋವನ್ನುಂಟು ಮಾಡುವ ಉದ್ದೇಶವಿರಲ್ಲಿಲ್ಲ. ಪ್ರತಿಯೊಬ್ಬರಲ್ಲೂ ನಾನು ಕ್ಷಮೆ ಕೇಳುತ್ತೇನೆ ಎಂದು ಎಲ್ಲರಲ್ಲಿ ಕ್ಷಮೆ ಕೋರಿದ್ದಾರೆ.

Trending

To Top