ಲವ್ ಫೇಲ್ಯೂರ್ ಬಗ್ಗೆ ನಗು ನಗುತ್ತಾ ಉತ್ತರ ಕೊಟ್ಟ ರಕ್ಷಿತ್ ಶೆಟ್ಟಿ…

ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಫೇಮಸ್ ಆದ ನಟರಲ್ಲಿ ರಕ್ಷಿತ್ ಶೆಟ್ಟಿ ಸಹ ಒಬ್ಬರಾಗಿದ್ದಾರೆ. ಕಿರಿಕ್ ಪಾರ್ಟಿ ಸಿನೆಮಾದ ಬಳಿಕ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಪ್ರೇಮಾಂಕುರ ಏರ್ಪಟ್ಟು, ಎಂಗೇಜ್ ಮೆಂಟ್ ವರೆಗೂ ಬಂದು ಬಳಿಕ ಬ್ರೇಕ್ ಅಪ್ ಆಗಿತ್ತು. ಇದರಿಂದಾಗಿ ಎಲ್ಲರೂ ರಕ್ಷಿತ್ ಶೆಟ್ಟಿ ರವರಿಗೆ ಲವ್ ಫೇಲ್ಯೂರ್‍ ಆಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ರಕ್ಷಿತ್ ಶೆಟ್ಟಿ ಇದಕ್ಕೆ ನಗುನಗುತ್ತಾ ಉತ್ತರ ನೀಡಿದ್ದಾರೆ.

ಸದ್ಯ ನಟ ರಕ್ಷಿತ್ ಶೆಟ್ಟಿ ಬಹುನಿರೀಕ್ಷಿತ ಚಾರ್ಲಿ 777 ಸಿನೆಮಾ ಪ್ರೊಮೊಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಸಿನೆಮಾ ಸಂಬಂಧ ಹೆಚ್ಚು ಹೆಚ್ಚು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದರ ಭಾಗವಾಗಿಯೇ ಸಂದರ್ಶನವೊಂದರಲ್ಲಿ ನಟ ರಕ್ಷಿತ್ ಶೆಟ್ಟಿ ಲವ್ ಫೇಲ್ಯೂರ್‍ ಬಗ್ಗೆ ಮಾತನಾಡಿದ್ದಾರೆ.  ಕನ್ನಡ ನಟಿ ಹಾಗೈಆಂಕರ್‍ ಅನುಶ್ರೀ ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ರಕ್ಷಿತ್ ಶೆಟ್ಟಿ ಯವರನ್ನು ಸಂದರ್ಶನ ಮಾಡಿದ್ದಾರೆ. ವಿಶೇಷವಾಗಿ ಈ ಸಂದರ್ಶನದಲ್ಲಿ ಕ್ರೇಜಿಸ್ಟಾರ್‍ ರವಿಚಂದ್ರನ್ ಸಹ ಭಾಗಿಯಾಗಿದ್ದಾರೆ. ಈ ಸಂದರ್ಶನದಲ್ಲಿ ರವಿಚಂದ್ರನ್ ಹಾಗೂ ರಕ್ಷಿತ್ ಶೆಟ್ಟಿಯವರು ಮಾತನಾಡಿಕೊಂಡಿದ್ದಾರೆ. ಜೊತೆಗೆ ಹರಟೆ ಹೊಡಿದಿದ್ದಾರೆ. ಸದ್ಯ ಈ ಸಂದರ್ಶನ ಕೇವಲ ಪ್ರೊಮೋ ಮಾತ್ರ ಬಿಡುಗಡೆಯಾಗಿದೆ. ಪ್ರೊಮೋಗೆ ಉತ್ತಮ ರೆಸ್ಪಾನ್ಸ್ ದೊರೆತಿದೆ.

ಇನ್ನೂ ಈ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ರವಿಚಂದ್ರನ್ ರವರಿಗೆ, ರವಿಚಂದ್ರನ್ ರಕ್ಷಿತ್ ಶೆಟ್ಟಿಯವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿಕೊಂಡಿದ್ದಾರೆ. ಈ ಪ್ರಶ್ನೆಗಳಿಗೂ ಇವರಿಬ್ಬರೂ ಫನ್ ಆಗಿ ಉತ್ತರಗಳನ್ನು ನೀಡಿದ್ದಾರೆ. ಈ ಹಾದಿಯಲ್ಲಿ ರವಿಚಂದ್ರನ್ ರಕ್ಷಿತ್ ಶೆಟ್ಟಿಯವರಿಗೆ ಲವ್ ಫೇಲ್ಯೂರ್‍ ಬಗ್ಗೆ ಕೇಳಿದ ಪ್ರಶ್ನೆ ಎಲ್ಲರ ಕೂತೂಹಲ ಕೆರಳಿಸುವುದರ ಜೊತೆಗೆ ವೈರಲ್ ಆಗುತ್ತಿದೆ. ರವಿಚಂದ್ರನ್ ಕೇಳುತ್ತಾ ನಿಮಗೆ ಲವ್ ಫೇಲ್ಯೂರ್‍ ಆಗಿರೋದಕ್ಕೆ ಇಷ್ಟೊಂದು ಫೇಮಸ್ ಆಗಿರುವುದಾ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಗುನಗುತ್ತಲೇ ಉತ್ತರ ನೀಡಿದ ರಕ್ಷಿತ್ ಶೆಟ್ಟಿ ನನ್ನ ಪ್ರಕಾರ ನನಗೆ ಲವ್ ಫೇಲ್ಯೂರ್‍ ಆಗಿಲ್ಲ. ಆದರೆ ಈ ಜಗತ್ತು ನನಗೆ ಲವ್ ಫೇಲ್ಯೂರ್‍ ಆಗಿದೆ ಎಂದು ಭಾವಿಸಿದ್ದಾರೆ ಎಂದು ಫನ್ ಆಗಿ ಉತ್ತರ ನೀಡಿದ್ದಾರೆ. ಸದ್ಯ ಈ ಪ್ರೊಮೋ ಸಖತ್ ವೈರಲ್ ಆಗುತ್ತಿದೆ.

https://www.facebook.com/watch/?v=996373057678921&ref=sharing

ಇನ್ನೂ ಈ ಸಂದರ್ಶನದಲ್ಲಿ ತುಂಬಾ ಫನ್ ಆಗಿ ಪ್ರಶ್ನೆಗಳು ಹೊರಬಂದಿದ್ದು, ಅನುಶ್ರೀ ಪ್ರಶ್ನೆ ಮಾಡುತ್ತಾ ರಕ್ಷಿತ್ ಶೆಟ್ಟಿಯವರೇ ನೀವು ಬಹಳ ರೊಮ್ಯಾಂಟಿಕ್ ಅಂತೆ ಹೌದಾ ಎಂದು ಕೇಳಿದ್ದಾರೆ ಇದಕ್ಕೆ ರಕ್ಷಿತ್ ಶೆಟ್ಟಿ ಬೆಡ್ ರೂಂ ಒಳಗಾ ಅಥವಾ ಹೊರಗಾ ಎಂಬ ನಾಟಿ ಉತ್ತರದಂತಹ ಪ್ರಶ್ನೆಯನ್ನು ಹೇಳಿದ್ದಾರೆ. ಇನ್ನೂ ಇದೇ ರೀತಿಯ ಅನೇಕ ಪ್ರಶ್ನೆಗಳು ಈ ಸಂದರ್ಶನದಲ್ಲಿ ಬಂದಿದ್ದು, ಪೂರ್ಣ ಸಂದರ್ಶನದ ಬಳಿಕ ಎಲ್ಲಾ ತಿಳಿಯಲಿದೆ. ಸದ್ಯ ರಕ್ಷಿತ್ ಶೆಟ್ಟಿ ಬಹುನಿರೀಕ್ಷಿತ ಚಾರ್ಲಿ 777 ಸಿನೆಮಾ ಜೂನ್ 10 ರಂದು ಬಿಡುಗಡೆಯಾಗಲಿದ್ದು, ಸಿನೆಮಾ ಪ್ರೋಮೋಷನ್ ಕೆಲಸಗಳು ಭರ್ಜರಿಯಾಗಿ ಸಾಗುತ್ತಿವೆ.

Previous articleಕೆಜಿಎಫ್-3 ಬಗ್ಗೆ ಸ್ಪಷ್ಟನೆ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರು….
Next articleಫೋರ್ಕ್ ಹಿಡಿದು ಜಾನ್ವಿ ಮಾಡಿದ್ರು ಮರ್ಡರ್.. ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್…