ಚೆನೈ: ಕಾಲಿವುಡ್ನ ಖ್ಯಾತ ನಟ ಆರ್.ಮಾಧವನ್ ಸುಮಾರು ದಶಕಗಳಿಂದ ಸಿನೆಮಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಇದೀಗ ಅವರು ಸಿನೆಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಅನ್ನು ನೀಡಲಾಗಿದೆ.
ನಟ ಮಾಧವನ್ ಸುಮಾರು ಎರಡು ದಶಕಗಳಿಂದ ಸಿನೆಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿದ ಮಹಾರಾಷ್ಟ್ರದ ಕೊಲ್ಲಾಪುರದ ಡಿ.ವೈ.ಪಾಟಿಲ್ ಎಜುಕೇಶನ್ ಸೊಸೈಟಿ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿದೆ. ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆರ್.ಮಾಧವನ್ ಈ ಗೌರವ ನೀಡಿದಕ್ಕೆ ನಿಮಗೆ ಧನ್ಯವಾದಗಳು, ಈ ಗೌರವ ಪಡೆದು ನನ್ನನ್ನು ಮತಷ್ಟು ಜವಾಬ್ದಾರಿಯಿಂದ ವರ್ತಿಸುವಂತೆ ಮಾಡಿದೆ ಎಂದಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಸಿನಿರಂಗದಲ್ಲಿ ಕೆಲಸ ಮಾಡುತ್ತಿರುವ ಆರ್.ಮಾಧವನ್ 60 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇಅಲ್ಲದೇ ಕೆಲವೊಂದು ಸಿನೆಮಾಗಳಿಗೆ ಕಥೆಯನ್ನು ಬರೆದಿದ್ದು, 2 ಸಿನೆಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೆಲ್ಲದರ ಜೊತೆ ಕೆಲವೊಂದು ಡಾಕ್ಯುಮೆಂಟರಿ ಹಾಗೂ ವೆಬ್ಸೀರಿಸ್ಗಳಲ್ಲೂ ಸಹ ನಟಿಸಿದ್ದಾರೆ.
ಎಂ.ಎಸ್.ಸಿ ಕಂಪ್ಯೂಟರ್ ಸೈನ್ಸ್ ಪದವಿಧರನಾದ ಮಾಧವನ್ ವಿದ್ಯಾರ್ಥಿ ದಿಸೆಯಲ್ಲೇ ಪ್ರತಿಭಾವಂತರಾಗಿದ್ದರು, ಸ್ಯಾಂಡಲ್ವುಡ್ನ ಶ್ರದ್ದಾ ಶ್ರೀನಾಥ್ ರವರೊಂದಿಗೆ ಮಾರಾ ಸಿನೆಮಾದಲ್ಲಿ ನಟಿಸಿದ್ದು, ಸಿನೆಮಾ ಸಹ ಪ್ರದರ್ಶನವಾಗುತ್ತಿದೆ. ಜೊತೆಗೆ ಮಾಧವನ್ ರವರೇ ನಿರ್ಮಾಣ ಹಾಗೂ ನಿರ್ದೇಶನ ಮಾಡುತ್ತಿರುವ ರಾಕೆಟ್ರಿ ದಿ ನಂಬಿ ಎಫೆಕ್ಟ್ ಎಂಬ ಸಿನೆಮಾದ ಚಿತ್ರೀಕರಣ ನಡೆಯುತ್ತಿದೆ.
