ಡಿಕೆಡಿ ಶೋ ನಲ್ಲಿ ಪುನೀತ್ ರಾಜ್‌ಕುಮಾರ್ ಭರ್ಜರಿ ಸ್ಟೆಪ್ಸ್?

ಬೆಂಗಳೂರು: ಕಿರುತರೆಯ ಪಾಪ್ಯುಲರ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಲ್ಲಿ ಪುನೀತ್ ರಾಜ್‌ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದು, ಈ ಶೋ ನಲ್ಲಿ ಅಪ್ಪು ಭರ್ಜರಿಯಾಗಿ ಸ್ಟೆಪ್ಸ್‌ಗಳನ್ನು ಹಾಕಿದ್ದಾರೆಯೇ ಎಂಬುದು ಶನಿವಾರದ ಶೋನಲ್ಲಿ ತಿಳಿಯಲಿದೆ.

ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಎಂದೇ ಕರೆಯುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಕಾರ್ಯಕ್ರಮದಲ್ಲಿ ಅಪ್ಪು ಸ್ಪೆಷಲ್ ಗೆಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಡ್ಜ್‌ಗಳಾಗಿ ರಕ್ಷಿತಾ, ವಿಜಯ ರಾಘವೇಂದ್ರ ಹಾಗೂ ಅರ್ಜುನ್ ಜನ್ಯ ರವರುಗಳು ಕಾಣಿಸಿಕೊಳ್ಳುತ್ತಾರೆ. ಈ ವಾರದ ಶೋ ನಲ್ಲಿ ಮುಖ್ಯ ಅತಿಥಿಯಾಗಿ ಪುನೀತ್ ರಾಜ್‌ಕುಮಾರ್ ಎಂಟ್ರಿ ಕೊಟ್ಟಿದ್ದು, ಅಲ್ಲಿನ ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಕಾರ್ಯಕ್ರಮದ ಜಡ್ಜ್‌ಗಳ ಜೊತೆ ನಿಂತು ತೆಗೆಸಿಕೊಂಡ ಪೊಟೋಗಳೂ ಸಹ ವೈರಲ್ ಆಗಿದೆ.

ಇನ್ನೂ ಪುನೀತ್ ಜೇಮ್ಸ್ ಚಿತ್ರದ ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಶೂಟಿಂಗ್ ಗೆ ತೆರಳಿದ ಅಪ್ಪು ಕಾಶ್ಮೀರದ ಜನರ ಜೊತೆ ಮಾತನಾಡುವ ಪೊಟೋಗಳು ಸಹ ವೈರಲ್ ಆಗಿತ್ತು. ಅಂದಹಾಗೆ ಜೇಮ್ಸ್ ಚಿತ್ರದ ಶೂಟಿಂಗ್‌ಗಾಗಿ ಕಾಶ್ಮೀರಕ್ಕೆ ತೆರಳುವುದಕ್ಕೂ ಮುನ್ನವೇ ಈ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಗೆಸ್ಟ್ ಆಗಿ ಹೋಗಿದ್ದರು ಎನ್ನಲಾಗಿದೆ.

ಇನ್ನೂ ಪುನೀತ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಯುವರತ್ನ ಸಿನೆಮಾ ಏಪ್ರಿಲ್ 1 ರಂದು ತೆರೆಗೆ ಬರಲಿದ್ದು, ಪ್ರೀ ರಿಲೀಸ್ ಕಾರ್ಯಕ್ರಮ ನಡೆಸಲು ಚಿತ್ರತಂಡ ಪ್ಲಾನ್ ಹಾಕುತ್ತಿದೆ. ಅಭಿಮಾನಿಗಳಂತೂ ಅಪ್ಪು ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

Previous articleರಶ್ಮಿಕಾ ಮಂದಣ್ಣ ತಲೆಯಲ್ಲಿ ಹೂವಿಟ್ಟ ಅಭಿಮಾನಿ!
Next articleನೋರಾ ಫತೇಹಿ ಹಳೇಯ ಘಟನೆ ನೆನೆದು ಕಣ್ಣೀರಿಟ್ಟರು!