Film News

ಪುನೀತ್ ರಾಜ್ ಕುಮಾರ್ ಬ್ಯಾಕ್ ಡೈ ವಿಡಿಯೋ ವೈರಲ್!

ಬೆಂಗಳೂರು: ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮುದ್ರದಲ್ಲಿ ಬ್ಯಾಕ್ ಡೈ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ಸಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಟ ಪುನೀತ್ ಆಗಾಗ ವರ್ಕೌಟ್, ಡ್ಯಾನ್ಸ್, ಸೈಕ್ಲಿಂಗ್ ಮೊದಲಾದ ವಿಡಿಯೋಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳನ್ನು ಫಿದಾ ಮಾಡುತ್ತಿರುತ್ತಾರೆ. ಇದೀಗ ಸಮುದ್ರದಲ್ಲಿ ಬ್ಯಾಕ್ ಡೈ ಮಾಡುವ ಮೂಲಕ ಅಭಿಮಾನಗಳನ್ನು ಫಿದಾ ಮಾಡುವುದರ ಜೊತೆಗೆ ಥ್ರಿಲ್ ಸಹ ಮಾಡಿದ್ದಾರೆ. ಇನ್ನೂ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಲೈಕ್ಸ್ ಕಾಮೆಂಟ್ಸ್ ಗಳು ಹರಿದು ಬರುತ್ತಿದೆ. ಜೊತೆಗೆ ಅಭಿಮಾನಿಗಳ ಮೆಚ್ಚುಗೆಯ ಕಾಮೆಂಟ್‌ಗಳು ಹೆಚ್ಚಾಗಿವೆ.

ಇನ್ನೂ ಇತ್ತೀಚಿಗಷ್ಟೆ ನಟ ಪುನೀತ್ ಮರುಡೇಶ್ವರ ಕಡೆ ಪ್ರವಾಸ ಕೈಗೊಂಡಿದ್ದು, ಸಮುದ್ರ ತೀರದಲ್ಲಿನ ಪುನೀತ್ ರಾಜ್‌ಕುಮಾರ್ ರವರ ಪೊಟೋಗಳು ವೈರಲ್ ಆಗಿತ್ತು. ಇದೀಗ ನೇತ್ರಾಣಿ ಎಂಬಲ್ಲಿ ಬ್ಯಾಕ್ ಡೈ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಇನ್ನೂ ವಿಡಿಯೋ ಜೊತೆಗೆ ಸಂದೇಶವೊಂದನ್ನು ಸಹ ಅಪ್ಪು ರವಾನಿಸಿದ್ದು, ಬ್ಯಾಕ್ ಡೈ ನೆನಪು, ವಿಭಿನ್ನ ಪ್ರಪಂಚಕ್ಕೆ ಡೈ ಮಾಡುತ್ತಿರುವುದು ಎಂದು ಬರೆದುಕೊಂಡಿದ್ದು, ಇದಕ್ಕೂ ಮೊದಲು ಯಾರು ಕೂಡ ಈ ರೀತಿಯ ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಸಲಹೆ ನೀಡಿದ್ದಾರೆ.

ಅಷ್ಟೇ ಅಲ್ಲದೇ ಪುನೀತ್ ರಾಜ್‌ಕುಮಾರ್ ರವರ ಪ್ರಯತ್ನಕ್ಕೆ ಅಭಿಮಾನಿಗಳಿಂದ ಪ್ರಶಂಸೆಗಳು ಹರಿದುಬರುತ್ತಿದ್ದು, ಈ ಹಿಂದೆ ಪುನೀತ್ ವರ್ಕೌಟ್ ವಿಡಿಯೋ ಒಂದನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು. ಅಂದಹಾಗೆ ಪುನೀತ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯುವರತ್ನ ಏಪ್ರಿಲ್ 1, 2021 ರಂದು ತೆರೆಮೇಲೆ ಬರಲಿದೆ.

Trending

To Top