ಚೆನೈ: ದಕ್ಷಿಣ ಭಾರತದ ಸಿನಿರಂಗದಲ್ಲಿ ಬಹುಬೇಡಿಕೆ ನಟರಲ್ಲೊಬ್ಬರಾದ ಪ್ರಕಾಶ್ ರಾಜ್ ಕೆಜಿಎಫ್-೨ ಚಿತ್ರದ ಬಳಿಕ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಿದ್ದು, ಇದು ಸಹ ಬಿಗ್ ಬಜೆಟ್ ಸಿನೆಮಾ ಆಗಿದೆಯಂತೆ.
ಟಾಲಿವುಡ್ ಖ್ಯಾತ ನಿರ್ದೇಶಕ ಮಣಿರತ್ನಂ ರವರ ಕಾಲಿವುಡ್ ಚಿತ್ರ ಪೊನ್ನಿಯನ್ ಸೆಲ್ವನ್ ಎಂಬ ಚಿತ್ರದಲ್ಲಿ ಪ್ರಕಾಶ್ ರೈ ನಟಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೆಜಿಎಫ್-೨ ಚಿತ್ರದಲ್ಲಿ ಅಭಿನಯಿಸಿರುವ ಪ್ರಕಾಶ್ ರಾಜ್ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ನಟಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ.
ಬಹುಭಾಷ ನಟ ಪ್ರಕಾಶ್ ರಾಜ್ ಈ ಕುರಿತು ಟ್ವಿಟರ್ ನಲ್ಲಿ ಬರೆದುಕೊಂಡಿದ್ದು, ಸುಮಾರು ವರ್ಷಗಳ ಬಳಿಕ ಮಣಿರತ್ನಂ ಜೊತೆ ಕೆಲಸ ಮಾಡುತ್ತಿರುವುದು ಸಂತಸದ ವಿಚಾರವಾಗಿದ್ದು, ಪೊನ್ನಿಯನ್ ಸೆಲ್ವನ್ ಎಂಬ ಚಿತ್ರದಲ್ಲಿ ನಟಿಸಲಿದ್ದೇನೆ. 25 ವರ್ಷಗಳ ಹಿಂದೆ ಮಾಸ್ಟರ್ ಜೊತೆಗೆ ಇರುವರ್ ಸಿನೆಮಾದಿಂದ ಶುರುವಾದ ಪ್ರಯಾಣ ಮುಂದುವರೆಯುತ್ತಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಕೆಜಿಎಫ್-2 ಚಿತ್ರದ ಬಳಿ, ಪೊನ್ನಿಯನ್ ಸೆಲ್ವನ್ ಎಂಬ ದೊಡ್ಡ ಬಜೆಟ್ ಪ್ಯಾನ್ ಇಂಡಿಯಾ ಸಿನೆಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗಿದ್ದಾರೆ ಪ್ರಕಾಶ್ ರಾಜ್. ಈ ಹಿಂದೆ ಇರುವರ್ ಚಿತ್ರದಲ್ಲಿ ಉತ್ತಮ ನಟನೆಗಾಗಿ ಅತ್ಯುತ್ತಮ ಪೋಷಕ ನಟ ಎಂಬ ದೊಡ್ಡ ಮಟ್ಟದ ಪ್ರಶಸ್ತಿ ಸಹ ಪಡೆದುಕೊಂಡಿದ್ದರು. ಇದೀಗ ಮಣಿರತ್ನಂ ಜೊತೆ ಮಾಡುತ್ತಿರುವ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಪ್ರಕಾಶ್ ರಾಜ್ ರವರ ಪಾತ್ರವಾದರೂ ಏನು? ಅದು ಹೇಗಿರಲಿದೆ ಎಂಬೆಲ್ಲಾ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ. ಅಂದಹಾಗೆ ಐತಿಹಾಸಿಕ ಕಾದಂಬರಿಯೊಂದನ್ನು ಆಧರಿಸಿ ಈ ಚಿತ್ರ ಮೂಡಿಬರುತ್ತಿದ್ದು, ಈಗಾಗಲೇ ಹೈದರಾಬಾದ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.
