Film News

ಬಾಲಿವುಡ್ ಆಕ್ಷನ್ ನಿರ್ದೇಶಕರ ಸಿನೆಮಾದಲ್ಲಿ ಪ್ರಭಾಸ್!

ಹೈದರಾಬಾದ್: ಟಾಲಿವುಡ್‌ನ ಖ್ಯಾತ ನಟ ಬಾಹುಬಲಿ ಪ್ರಭಾಸ್ ಇದೀಗ ಪ್ಯಾನ್ ಇಂಡಿಯಾದ ಸ್ಟಾರ್ ಹಿರೋ ಆಗಿದ್ದಾರೆ. ಈಗಾಗಲೇ ಅನೇಕ ದೊಡ್ಡ ಬಜೆಟ್ ಸಿನೆಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸುವಂತೆ ಬಾಲಿವುಡ್ ಆಕ್ಷನ್ ನಿರ್ದೇಶಕ ಪ್ರಭಾಸ ಹಿಂದೆ ಬಿದಿದ್ದಾರಂತೆ.

ಬಾಲಿವುಡ್ ಆಕ್ಷನ್ ನಿರ್ದೇಶಕ ಸಿದ್ದಾರ್ಥ್ ಆನಂದ್ ಪ್ರಭಾಸ್ ರವರೊಂದಿಗೆ ಸ್ಟೈಲಿಶ್ ಚಿತ್ರವೊಂದನ್ನು ನಿರ್ದೇಶನ ಮಾಡಲು ಆಸಕ್ತಿ ಹೊಂದಿದ್ದು, ಈಗಾಗಲೇ ಚಿತ್ರಕಥೆಯನ್ನು ಸಹ ಪ್ರಭಾಸ್ ರವರಿಗೆ ತಿಳಿಸಿದ್ದಾರೆ. ಜೊತೆಗೆ ಪ್ರಭಾಸ್ ಕೂಡ ಕಥೆ ಕೇಳಿ ಒಪ್ಪಿದ್ದು, ಪೂರ್ಣ ಪ್ರಮಾಣದಲ್ಲಿ ಕಥೆ ರೆಡಿ ಮಾಡಿಕೊಳ್ಳಲು ಸಿದ್ದಾರ್ಥ್ ರವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಎಲ್ಲಾ ಪ್ರಕ್ರಿಯೆಗಳು ನಡೆದರೇ ಮತ್ತೊಂದು ಬಿಗ್ ಬಜೆಟ್ ಸಿನೆಮಾದಲ್ಲಿ ಪ್ರಭಾಸ್ ಅಭಿನಯಿಸಲಿದ್ದಾರೆ.

ನಿರ್ದೇಶಕ ಸಿದ್ದಾರ್ಥ್ ಆನಂದ್ ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ಹೃತಿಕ್ ರೋಷನ್, ಟೈಗರ್ ಶ್ರಾಫ್ ಸೇರಿದಂತೆ ಅನೇಕರಿಗೆ ಹೊಂದಾಣಿಕೆಯಾಗುವಂತಹ ಆಕ್ಷನ್ ಸಿನೆಮಾಗಳನ್ನು ನಿರ್ದೇಶಿಸಿದ್ದು, ಇದೀಗ ಪ್ರಭಾಸ್ ರವರೊಂದಿಗೆ ಹೊಸ ಆಕ್ಷನ್ ಸಿನೆಮಾಗೆ ಕೈ ಹಾಕಿದ್ದಾರೆ. ಪ್ರಸ್ತುತ ಪಠಾನ್, ಫೈಟರ್ ಸಿನೆಮಾಗಳನ್ನು ನಿರ್ದೇಶಿಸುತ್ತಿದ್ದಾರೆ.

Trending

To Top