ಬಾಹುಬಲಿ ಪ್ರಭಾಸ್ ತಂಗಿ ಪ್ರಶಿದ ರವರಿಗೆ ಕಹಿ ಅನುಭವ…..!

ಟಾಲಿವುಡ್ ನಲ್ಲಿ ರೆಬೆಲ್ ಸ್ಟಾರ್‍ ಕೃಷ್ಣಂ ರಾಜು ಸಿನಿರಂಗದ ವಾರಸುದಾರನಾಗಿ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಪ್ರಭಾಸ್ ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಪ್ರಭಾಸ್ ದೊಡ್ಡಪ್ಪನವರ ಮಗಳಾದ ಪ್ರಭಾಸ್ ಸಹೋದರಿ ಪ್ರಶಿದ ಸಿನಿಮಾರಂಗದಲ್ಲಿ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಪ್ರಶಿದ ರವರಿಗೆ ಕಹಿ ಅನುಭವವೊಂದಾಗಿದ್ದು, ಈ ಕುರಿತು ಸೋಷಿಯಲ್ ಮಿಡಿಯಾ ಮೂಲಕ ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ನಿರ್ಮಾಪಕಿ ಪ್ರಶಿದಾ ವಿದೇಶದಲ್ಲಿ ವ್ಯಾಸಂಗ ಮುಗಿಸಿ ಬಂದಿದ್ದು, ಗೋಪಿಕೃಷ್ಣ ಮೂವಿಸ್ ಎಂಬ ಸಂಸ್ಥೆಯ ಮೂಲಕ ನಿರ್ಮಾಪಕಿಯಾಗಿ ಪರಿಚಯವಾದರು. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ನಲ್ಲಿ ಮೂಡಿಬಂದ ರಾಧೆಶ್ಯಾಮ್ ಸಿನೆಮಾ ಮೂಲಕ ನಿರ್ಮಾಪಕಿಯಾಗಿ ಟಾಲಿವುಡ್ ಗೆ ಎಂಟ್ರಿಕೊಟ್ಟರು. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಪ್ರಶಿದಾ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ಆಕೆ ಅನುಭವಿಸಿದ ಕಹಿ ಅನುಭವವೊಂದನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ನಟಿ ಪ್ರಶಿದಗೆ ಆದ ಕಹಿ ಅನುಭವವಾದರೂ ಏನು ಎಂಬ ವಿಚಾರಕ್ಕೆ ಬಂದರೇ ಪುಡ್ ಡಿಲಿವರಿ ಸಂಸ್ಥೆಯೊಂದರ ವಿರುದ್ದ ಪ್ರಶಿದಾ ಕೋಪಗೊಂಡಿದ್ದಾರೆ. ಈ ಸಂಸ್ಥೆಯ ಕುರಿತು ತಮಗಾದ ಕಹಿ ಅನುಭವವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಸದ್ಯ ಈ ಬ್ಯುಸಿ ಕಾಲದಲ್ಲಿ ಎಲ್ಲರೂ ಪುಡ್ ಡಿಲಿವರಿ ಆಪ್ ಗಳನ್ನು ಬಳಸುವುದು ಹೆಚ್ಚಾಗಿದೆ. ಈ ಹಾದಿಯಲ್ಲಿ ಪ್ರಶಿದಾ ಸಹ ಪುಡ್ ಡಿಲಿವರಿ ಸಂಸ್ಥೆಯ ಮೊರೆ ಹೋಗಿದ್ದಾರೆ. ಇತ್ತೀಚಿಗೆ ಆಕೆ ಸ್ವಿಗ್ಗಿ ಮೂಲಕ ಪುಡ್ ಆರ್ಡ್‌ರ್‍ ಮಾಡಿದ್ದರಂತೆ. ಆದರೆ ಆಕೆ ಆರ್ಡರ್‍ ಮಾಡಿದ ಪುಡ್ ಡಿಲಿವರಿ ಆದ ಪುಡ್ ಬೇರೆಯಾಗಿತ್ತಂತೆ. ಈ ಕುರಿತು ದೂರು ನೀಡಿದರೇ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶಿದ ಕೋಪಗೊಂಡು ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಇತ್ತೀಚಿಗೆ ಎಲ್ಲರೂ ಸ್ವಿಗ್ಗಿ, ಜೊಮ್ಯಾಟೋ ಮೊದಲಾದ ಪುಡ್ ಡಿಲಿವರಿ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಎಲ್ಲರಂತೆ ನಿರ್ಮಾಪಕಿ ಪ್ರಶಿದಾ ಸಹ ಪುಡ್ ಆರ್ಡರ್‍ ಮಾಡಿದ್ದಾರೆ. ಆದರೆ ಆಕೆ ಬುಕ್ ಮಾಡಿದ ಪುಡ್ ಬದಲಿಗೆ ಬೇರೆ ಪುಡ್ ಡಿಲಿವರಿಯಾಗಿದ್ದು, ಈ ಕುರಿತು ಕಂಪನಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲವಂತೆ. ಜೊತೆಗೆ ಪುಡ್ ಆರ್ಡರ್‍ ಮಾಡಿದ್ದು ಡಿಲವರಿ ತುಂಬಾ ತಡವಾಗಿ ಮಾಡಿದ್ದಾರೆ. ಜೊತೆಗೆ ಅವರು ನೀಡಿದ ಊಟ ಸಹ ಗುಣಮಟ್ಟವಾಗಿಲ್ಲ. ಆದ್ದರಿಂದ ಈ ಆಪ್ ಅನ್ನು ನಾನು ಡಿಲಿಟ್ ಮಾಡುತ್ತಿದ್ದೇನೆ ಎಂದು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದಾರೆ.

Previous articleಮತ್ತೊಮ್ಮೆ ಸೌಂದರ್ಯ ಪ್ರದರ್ಶನ ಮಾಡಿದ ಯುವ ನಟಿ ಅನನ್ಯ ನಾಗಳ್ಳ….!
Next articleನಟಿ ಸೋನಾಲ್ ಚೌಹಾನ್ ಹಂಚಿಕೊಂಡ ಪೊಟೋಗಳು ವೈರಲ್….