Film News

ರಾಮಮಂದಿರ ನಿರ್ಮಾಣಕ್ಕೆ 30 ಲಕ್ಷ ದೇಣಿಗೆ ನೀಡಿದ ಪವನ್ ಕಲ್ಯಾಣ್

ಹೈದರಾಬಾದ್: ಎಲ್ಲಾ ವಿಘ್ನಗಳನ್ನು ನಿವಾರಿಸಿಕೊಂಡು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಇಡೀ ದೇಶದಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದ್ದು, ನಟ ಹಾಗೂ ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ೩೦ ಲಕ್ಷ ದೇಣಿಗೆಯನ್ನು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕೆಲಸಗಳು ನಡೆಯುತ್ತಿದ್ದು, ಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಈ ಹಾದಿಯಲ್ಲಿ ಈಗಾಗಲೇ ಅನೇಕ ನಟರು ಸೇರಿದಂತೆ ಸಿನಿರಂಗದ ಸ್ಟಾರ್ ನಟರು ಸಹ ಈ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್, ಕನ್ನಡದ ನಟಿ ಪ್ರಣತಿ ಸೇರಿದಂತೆ ಅನೇಕರು ದೇಣಿಗೆ ನೀಡುವ ಮೂಲಕ ಎಲ್ಲರೂ ದೇಣಿಗೆ ನೀಡಿ ಎಂದು ಮನವಿ ಸಹ ಮಾಡಿದ್ದಾರೆ. ಇದೀಗ ನಟ ಪವನ್ ಕಲ್ಯಾಣ್ ಸಹ ೩೦ ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ ಅವರೊಂದಿಗೆ ಇರುವ ಸಿಬ್ಬಂದಿಯೂ ಸಹ ೧೧ ಸಾವಿರ ದೇಣಿಗೆಯನ್ನು ನೀಡಿದ್ದಾರೆ.

ಇನ್ನೂ ಇತ್ತೀಚಿಗೆ ದೇವಾಲಯಗಳ ಮೇಲಿನ ದಾಳಿಯನ್ನು ಖಂಡಿಸಿದ ಪವನ್ ಕಲ್ಯಾಣ್, ಹಿಂದೂ ದೇವಾಲಯಗಳ ಮೇಲೆ ಇತ್ತೀಚಿಗೆ ದಾಳಿ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ವೈ.ಎಸ್.ಆರ್. ಪಕ್ಷ ಈ ದಾಳಿಯನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. ಮುಂದಿನ ಚುನಾವಣೆಗಳಲ್ಲಿ ವೈ.ಎಸ್.ಆರ್. ಪಕ್ಷಕ್ಕೆ ತಕ್ಕ ಪಾಠವನ್ನು ಜನತೆ ಕಲಿಸಬೇಕಿದೆ ಎಂದಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಎಲ್ಲರೂ ಮಂದಿರ ನಿರ್ಮಾಣಕ್ಕೆ ಕೈಜೋಡಿಸೋಣ. ಎಲ್ಲರೂ ವಾನರರಾಗೋಣ, ಅಳಿಲು ಆಗೋಣ, ಆ ಮೂಲಕ ನಮ್ಮ ಕೈಯಾಲಾದ ಸಹಾಯ ಮಾಡೋಣ ಎಂದು ಮನವಿ ಮಾಡಿದ್ದರು. ಅದೇ ರೀತಿ ಪ್ರಣಿತಾ ಸುಭಾಷ್ ರವರು ಸಹ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ, ಎಲ್ಲರೂ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.

Trending

To Top