ಹೈದರಾಬಾದ್: ಟಾಲಿವುಡ್ನ ಯಂಗ್ ಹಿರೋ, ಅನೇಕ ಹಿಟ್ ಸಿನೆಮಾಗಳಲ್ಲಿ ಅಭಿನಯಿಸಿರುವ ನಿತಿನ್ ನಾಯಕನಾಗಿ ತಯಾರಾಗಿರುವ ಚೆಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟೂಬ್ ನಲ್ಲಿ ಎಲ್ಲರೂ ಆಕರ್ಷಿಸುತ್ತಾ ಟ್ರೆಂಡಿಂಗ್ ಕ್ರಿಯೇಟ್ ಮಾಡುತ್ತಿದೆ.
ಟಾಲಿವುಡ್ನ ಖ್ಯಾತ ಡೈರೆಕ್ಟರ್ ಚಂದ್ರಶೇಖರ್ ಯಲೇಟಿ ನಿರ್ದೇಶಕತ್ವದಲ್ಲಿ ಚೆಕ್ ಚಿತ್ರ ಮೂಡಿಬಂದಿದ್ದು, ಟ್ರೈಲರ್ ಬಿಡುಗಡೆಯಾಗಿದೆ. ಇನ್ನೂ ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಬಹುಬೇಡಿಕೆ ನಟಿ ರಕುಲ್ ಪ್ರೀತ್ ಸೀಂಗ್, ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಿದ್ದಾರೆ. ಟ್ರೈಲರ್ ನಲ್ಲಿ ನಿತಿನ್ ಖೈದಿಯಾಗಿ ಜೈಲಿಗೆ ಹೊರಟಿರುವ ದೃಶ್ಯಗಳು ಕಾಣಿಸುತ್ತಿದ್ದು, ಸಿನೆಮಾ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದ್ದಾರೆ ನಿತಿನ್. ಇನ್ನೂ ಟ್ರೈಲರ್ನಲ್ಲಿ ಕೆಲವೊಂದು ಡೈಲಾಗ್ಗಳು ಸಹ ವೈರಲ್ ಆಗುತ್ತಿದೆ.
ಇನ್ನೂ ಚೆಕ್ ಸಿನೆಮಾದ ಟ್ರೈಲರ್ ಬಿಡುಗಡೆಯಾದರೂ ಕೂಡ ಚಿತ್ರದ ಕಾನ್ಸೆಪ್ಟ್ ಮಾತ್ರ ಎಲ್ಲೂ ರಿವೀಲ್ ಮಾಡಲಾಗಿಲ್ಲ. ನಿತಿನ್ ಜೈಲಿಗೆ ಏತಕಾಗಿ ಹೊರಟ ಎಂಬುದು ತುಂಬಾ ಕುತೂಹಲದಿಂದ ಸಿನೆಮಾದಲ್ಲಿ ತೊರಿಸಲಾಗುತ್ತಂತೆ. ಇನ್ನೂ ನಟಿ ರಕುಲ್ ಪ್ರೀತ್ ಸಿಂಗ್ ನಿತಿನ್ ಪರವಾಗಿ ಕೋರ್ಟ್ನಲ್ಲಿ ವಾದಿಸುತ್ತಾರೆ. ಮತ್ತೊಂದು ಇಂಟ್ರಸ್ಟಿಂಗ್ ವಿಚಾರವೆಂದರೇ, ಇಡಿ ಟ್ರೈಲರ್ ಚೆಸ್ ಗೇಮ್ ಸುತ್ತಲೂ ಇರುವ ಹಾಗೆ ಇದೆ. ನಟ ನಿತಿನ್ ಚೆಸ್ ಆಟಗಾರರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನೂ ಡೈಲಾಗ್ಗಳ ವಿಷಯಕ್ಕೆ ಬಂದರೇ, ಚೆಸ್ ಆಟದಲ್ಲಿ ಒಂದೊಂದು ಪಾನ್ಗೂ ಒಂದೊಂದು ಕ್ಯಾರೆಕ್ಟರ್ ನೊಂದಿಗೆ ಹೋಲಿಕೆ ಮಾಡುತ್ತಾ ಹೇಳುವ ಡೈಲಾಗ್ಗಳು ವೈರಲ್ ಆಗುತ್ತಿದೆ. ಆನೆಗೆ ಎದುರು ಹೋಗಬೇಕೆಂದರೇ ಧಮ್ ಇರಬೇಕು. ಒಂಟೆ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರಬೇಕು ಎಂಬ ಡೈಲಾಗ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
