Film News

ಮತ್ತೊಮ್ಮೆ ತೆರೆಮೆಲೆ ಒಂದಾಗಿ ಕಾಣಿಸಲಿದ್ದಾರೆ ನಾನಿ-ಸಾಯಿಪಲ್ಲವಿ

ಹೈದರಾಬಾದ್: ಟಾಲಿವುಡ್ ನ ಸ್ಟಾರ್ ನಟ ನಾನಿ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಚಿತ್ರವೊಂದರಲ್ಲಿ ಮತ್ತೊಮ್ಮೆ ತೆರೆಮೇಲೆ ಜೋಡಿಯಾಗಿ ಕಾಣಿಸಲಿದ್ದಾರೆ.

ನಟ ನಾನಿ ಹಾಗೂ ಸಾಯಿ ಪಲ್ಲವಿ ಈ ಹಿಂದೆ ತೆಲುಗು ಭಾಷೆಯ ಎಂ.ಸಿ.ಎ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಪ್ರಸ್ತುತ ಟ್ಯಾಕ್ಸಿವಾಲಾ ಚಿತ್ರದ ನಿರ್ದೇಶಕ ರಾಹುಲ್ ನಿರ್ದೇಶನದಲ್ಲಿ ಮೂಡಿಬರಲಿರುವ ಶ್ಯಾಮ್ ಸಿಂಗ್ ರಾಯ್ ಎಂಬ ಸಿನೆಮಾದಲ್ಲಿ ನಾನಿ ಹಾಗೂ ಸಾಯಿ ಪಲ್ಲವಿ ನಟಿಸಲಿದ್ದಾರೆ. ಇನ್ನೂ ಈಗಾಗಲೇ ಸಿನೆಮಾದ ಮೂಹೂರ್ತ ಸಹ ನೆರವೇರಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಮುಖ್ಯವಾಗಿ ನಾನಿ ತಂದೆ ಘಂಟ ರಾಂಬಾಬು ರವರು ಈ ಚಿತ್ರಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಾಷಯ ಕೋರಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆ ಮಲಯಾಳಂ ಕೃತಿ ಶೆಟ್ಟಿ ಕೂಡ ಅಭಿನಯಿಸಲಿದ್ದಾರೆ.

ಬಹುಬೇಡಿಕೆಯ ನಟಿ ಸಾಯಿ ಪಲ್ಲವಿ ಅನೇಕ ಸಿನೆಮಾಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಸಾಯಿ ಪಲ್ಲವಿ ಅಷ್ಟು ಸಲೀಸಾಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಬದಲಿಗೆ ಪಾತ್ರವನ್ನು ಅಳೆದು ತೂಗಿ ನಂತರ ಒಪ್ಪಿಗೆ ಸೂಚಿಸುತ್ತಾರೆ. ನಾಗಚೈತನ್ಯ ಅಭಿನಯದ ಲವ್ ಸ್ಟೋರಿ ಹಾಗೂ ರಾಣಾದಗ್ಗುಬಾಟಿ ಅಭಿನಯದ ವಿರಾಟಪರ್ವಂ ಚಿತ್ರದ ಜೊತೆಗೆ ವೆಬ್ ಸೀರಿಸ್ ಒಂದರಲ್ಲಿ ಬ್ಯುಸಿಯಾಗಿದ್ದಾರಂತೆ.

Trending

To Top