ಬ್ರಹ್ಮಾಸ್ತ್ರ ಚಿತ್ರದ ಕುರಿತು ನಾಗಾರ್ಜುನ ಕ್ರೇಜಿ ಟ್ವೀಟ್ಸ್!

ಹೈದರಾಬಾದ್: ಬಹುನಿರೀಕ್ಷಿತ ಪಾನ್ ಇಂಡಿಯಾದಡಿ ಬಿಡುಗಡೆಯಾಗಲಿರುವ ಬ್ರಹ್ಮಾಸ್ತ್ರ ಸಿನೆಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಟಾಲಿವುಡ್ ಸ್ಟಾರ್ ನಾಗಾರ್ಜುನ ಸಹ ನಟಿಸುತ್ತಿದ್ದು, ತನ್ನ ಪಾತ್ರದ ಶೂಟಿಂಗ್ ಮುಗಿಸಿರುವ ನಾಗಾರ್ಜುನ ಚಿತ್ರದ ಕುರಿತು ಕ್ರೇಜಿಯಾಗಿ ಟ್ವೀಟ್ ಮಾಡಿದ್ದಾರೆ.

ನಟ ನಾಗಾರ್ಜುನ ತನ್ನ ಪಾತ್ರಕ್ಕೆ ಸಂಬಂಧಿಸಿದ ಶೂಟಿಂಗ್ ಮುಗಿಸಿದ್ದು, ಈ ಕುರಿತು ತನ್ನ ಅಧಿಕೃತ ಟ್ವಿಟರ್ ನಲ್ಲಿ ಪೊಟೋಗಳನ್ನು ಶೇರ್ ಮಾಡಿದ್ದು, ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನನ್ನ ಪಾತ್ರಕ್ಕೆ ಸಂಬಂಧಿಸಿದ ಬ್ರಹ್ಮಾಸ್ತ್ರ ಶೂಟಿಂಗ್ ಮುಗಿದಿದ್ದು, ಈ ಚಿತ್ರದಲ್ಲಿ ಅದ್ಬುತವಾಗಿ ಅಭಿನಯಿಸಿರುವ ರಣ್‌ಭೀರ್, ಅಲಿಯಾ ಭಟ್ ರವರೊಂದಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಿರುವುದು ಅದ್ಬುತವಾದ ಅನುಭವವಾಗಿದೆ. ನಿರ್ದೇಶಕ ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರ ಸಿನೆಮಾ ಥಿಯೇಟರ್‌ನಲ್ಲಿ ಕಾಣಲು ಕಾಯುತ್ತಿದ್ದೇನೆ ಎಂದು ಕ್ರೇಜಿಯಾಗಿ ಟ್ವೀಟ್ ಮಾಡಿದ್ದಾರೆ.

ಇನ್ನೂ ಭಾರಿ ಬಜೆಟ್‌ನಲ್ಲಿ ಸಿನೆಮಾ ರೆಡಿಯಾಗುತ್ತಿದ್ದು, ಚಿತ್ರದಲ್ಲಿ ರಣ್ಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್, ನಾಗಾರ್ಜುನ ಸೇರಿದಂತೆ ದೊಡ್ಡ ತಾರಬಳಗವೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಧರ್ಮ ಪ್ರೊಡಕ್ಷನ್ ಮತ್ತು ಫಾಕ್ಸ್ ಸ್ಟಾರ್ ಪ್ರೊಡಕ್ಷನ್ ನಲ್ಲಿ ಸಿನೆಮಾ ನಿರ್ಮಾಣ ಮಾಡುತ್ತಿದ್ದು, ಅಯನ್ ಮುಖರ್ಜಿ ನಿರ್ದೇಶನ ಮಾಡುತ್ತಿದ್ದಾರೆ.

ಕಳೆದ 2019 ರಲ್ಲೇ ಶೂಟಿಂಗ್ ಪ್ರಾರಂಭವಾಗಿದ್ದ ಬ್ರಹ್ಮಾಸ್ತ್ರ ಚಿತ್ರ ಈಗಾಗಲೇ ತೆರೆಗೆ ಬರಬೇಕಿತ್ತು ಆದರೆ ಕೊರೋನಾ ಕಾರಣದಿಂದ ವಿಳಂಭವಾಗಿದ್ದು, ಹಿಂದಿ ಸೇರಿದಂತೆ ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಆದಷ್ಟೂ ಶೀಘ್ರದಲ್ಲೇ ಚಿತ್ರ ತೆರೆಮೇಲೆ ಬರಲಿದೆ.

Previous articleನಟ ದರ್ಶನ್ ಹುಟ್ಟುಹಬ್ಬಕ್ಕೆ ಹರಿದುಬಂದ ಶುಭಾಷಯಗಳ ಸುರಿಮಳೆ!
Next articleಶಿವರಾತ್ರಿ ಹಬ್ಬದಂದು ಸರ್ಕಾರು ವಾರಿ ಪಾಟ ತಂಡದಿಂದ ಸ್ಪೆಷಲ್ ವಿಡಿಯೋ!