ಹೈದರಾಬಾದ್: ಟಾಲಿವುಡ್ನ ಟಾಪ್ ಹಿರೋ, ಪ್ರಿನ್ಸ್ ಮಹೇಶ್ ಬಾಬು ಸದ್ಯ ಸರ್ಕಾರುವಾರಿ ಪಾಠ ಎಂಬ ಸಿನೆಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಮಹಿಳಾ ನಿರ್ದೇಶಕಿಯ ಚಿತ್ರವೊಂದರಲ್ಲೂ ನಟಿಸಲಿದ್ದಾರೆ ಎನ್ನಲಾಗಿದೆ.
ಕಾಲಿವುಡ್ನಲ್ಲಿ ಇತ್ತೀಚಿಗಷ್ಟೆ ಹಿಟ್ ಹೊಡೆದು ಆಸ್ಕರ್ ಪ್ರಶಸ್ತಿಗೂ ಆಯ್ಕೆಯಾಗಿರುವ ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನೆಮಾ ನಿರ್ದೇಶನ ಮಾಡಿರುವ ಕಾಲಿವುಡ್ ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನದಲ್ಲಿ ಬರಲಿರುವ ಸಿನೆಮಾ ಒಂದರಲ್ಲಿ ಮಹೇಶ್ ಬಾಬು ಅಭಿನಯಿಸಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಕಾಲಿವುಡ್ನ ಯಂಗ್ ಹಿರೋ ಧನುಷ್ ರವರೊಂದಿಗೆ ಸುಧಾ ಸಿನೆಮಾ ಮಾಡಲಿದ್ದಾರೆ ಎಂಬ ಮಾಹಿತಿಯಿತ್ತು. ಆದರೆ ಧನುಷ್ ರವರ ಡೆಟ್ಸ್ ಹೊಂದಾಣಿಕೆಯಾಗದ ಕಾರಣ ಇದು ಸಾಧ್ಯವಾಗಲಿಲ್ಲವಂತೆ. ಇದೀಗ ಅದೇ ಕಥೆಯ ಚಿತ್ರದಲ್ಲಿ ಮಹೇಶ್ ಬಾಬು ಬಣ್ಣ ಹಚ್ಚಲಿದ್ದಾರಂತೆ. ಆದರೆ ಪ್ರಸ್ತುತ ಮಹೇಶ್ ಬಾಬು ಬ್ಯುಸಿಯಾಗಿದ್ದು, ಸರ್ಕಾರು ವಾರಿ ಪಾಠ ಚಿತ್ರದ ಬಳಿಕ ರಾಜಮೌಳಿ ನಿರ್ದೇಶನದಲ್ಲಿ ಬರಲಿರುವ ಚಿತ್ರವೊಂದರಲ್ಲಿ ಸಹ ಮಹೇಶ್ ಬಾಬು ನಟಿಸಲಿದ್ದಾರೆ. ಈ ಚಿತ್ರದ ಬಳಿಕವಷ್ಟೆ ಸುಧಾ ಕೊಂಗರ ರವರಿಗೆ ಮಹೇಶ್ ಬಾಬು ಡೇಟ್ಸ್ ದೊರೆಯಲಿದೆ ಎನ್ನಲಾಗಿದೆ.
ಇನ್ನೂ ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನದ ಸೂರರೈ ಪೊಟ್ರು ಸಿನೆಮಾ ಅಮೇಜಾನ್ ಪ್ರೈಂ ಒಟಿಟಿ ನಲ್ಲಿ ಬಿಡುಗಡೆಯಾಗಿದ್ದು, ಆಸ್ಕರ್ ಅವಾರ್ಡ್ಗೂ ಭಾಜನವಾಗಿದೆ. ಜೊತೆಗೆ ಸುಧಾ ದ್ರೋಹಿ, ಗುರು, ಇದುರು ಸುಟ್ರು ಮೊದಲಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದು, ಹಿಟ್ ನಿರ್ದೇಶಕರ ಸಾಲಿಗೆ ಸೇರಿದ್ದಾರೆ.
