ಬಾಹುಬಲಿ ಸಿನೆಮಾಗೂ ಮೊದಲೇ ಇಂಡಿಯಾದಲ್ಲಿ ಪ್ಯಾನ್ ಇಂಡಿಯಾ ಸಿನೆಮಾ ಬಂದಿತ್ತು ಎಂದ ನಟ….

ದೇಶದಲ್ಲಿ ಇದೀಗ ಪ್ಯಾನ್ ಇಂಡಿಯಾ ಸಿನೆಮಾಗಳದ್ದೆ ಸದ್ದು. ಬಹುತೇಕ ದೊಡ್ಡ ದೊಡ್ಡ ನಟರು ಪ್ಯಾನ್ ಇಂಡಿಯಾ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಜೆಟ್ ನಲ್ಲಿ ಸಿದ್ದವಾಗುತ್ತಿರುವ ಈ ಪ್ಯಾನ್ ಇಂಡಿಯಾ ಸಿನೆಮಾ ಕುರಿತು ನಟ ಕಮಲ್ ಹಾಸನ್ ಮಾತನಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನೆಮಾ ಕಳೆದ 1960 ಸಮಯದಲ್ಲೇ ಬಂದಿತ್ತು ಎಂದು ಹೇಳಿದ್ದಾರೆ.

ಸದ್ಯ ನಟ ಕಮಲ್ ಹಾಸನ್ ವಿಕ್ರಂ ಸಿನೆಮಾದ ಪ್ರಮೊಷನ್ ಕೆಲಸಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ವಿಕ್ರಂ ಸಿನೆಮಾದ ಪ್ರಮೋಷನ್ ನಿಮಿತ್ತ ದೆಹಲಿಗೆ ತೆರಳಿದ್ದ ಕಮಲ್ ಹಾಸನ್ ಅಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಪ್ಯಾನ್ ಇಂಡಿಯಾ ಸಿನೆಮಾಗಳ ಬಗ್ಗೆ ಸಹ ಮಾತನಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನೆಮಾಗಳು ಈ ಹಿಂದೆ ಸಹ ಬಂದಿತ್ತು. ಆದರೆ ಆಗ ಪ್ರಚಾರವಾಗಿರಲಿಲ್ಲ. ಪ್ಯಾನ್ ಇಂಡಿಯಾ ಸಿನೆಮಾ ತಂದಿದ್ದು ಬಾಹುಬಲಿ, ಆರ್‍.ಆರ್‍.ಆರ್‍ ಅಥವಾ ಕೆಜಿಎಫ್ ಅಲ್ಲ ಎಂದಿದ್ದಾರೆ. ಪ್ಯಾನ್ ಇಂಡಿಯಾ ಎಂಬುದು 1960 ಯಿಂದಲೇ ಪ್ರಾರಂಭವಾಗಿತ್ತು. ವಿ.ಶಾಂತಾರಾಮ್ ಎಂಬುವವರು ಪ್ಯಾನ್ ಇಂಡಿಯಾ ಸಿನೆಮಾವನ್ನು ಮಾಡಿದ್ದು. 1960 ರಲ್ಲಿ ಮೊಘಲ್ ಇ ಅಜಾಮ್ ಹಾಗೂ 1965 ರಲ್ಲಿ ಚೆಮ್ಮೀನ್ ಎಂಬ ಸಿನೆಮಾಗಳು ಬಿಡುಗಡೆಯಾಗಿದ್ದು. ಈ ಎರಡೂ ಸಿನೆಮಾಗಳೂ ಪ್ಯಾನ್ ಇಂಡಿಯಾ ಸಿನೆಮಾಗಳಾಗಿತ್ತು ಎಂದು ಹೇಳಿದ್ದಾರೆ.

ಆರ್‍.ಆರ್‍.ಆರ್‍ ಹಾಗೂ ಕೆಜಿಎಫ್ ಸಿನೆಮಾಗಳ ಬಳಿಕ ಪ್ಯಾನ್ ಇಂಡಿಯಾ ಸಿನೆಮಾ ಎಂದು ಹೇಳಿರುವುದು ಸರಿಯಲ್ಲ. ನಾವೆಲ್ಲರೂ ಬೇರೆ ಭಾಷೆಗಳನ್ನು ಮಾತನಾಡಿದರೂ ಸಹ ದೇಶ ಮಟ್ಟದಲ್ಲಿ ಎಲ್ಲರೂ ಒಂದೇ ಎಂದಿದ್ದಾರೆ. ಇನ್ನೂ ಇದೇ ವೇಳೆ ಕೆಜಿಎಫ್ ಹಾಗೂ ಆರ್‍.ಆರ್‍.ಆರ್‍ ಸಿನೆಮಾಗಳ ಬಾಕ್ಸ್ ಆಫೀಸ್ ಗಳಿಕೆಯ ಬಳಿಕ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂಬ ಚರ್ಚೆಗಳು ಜೋರಾಗಿ ಶುರುವಾಗಿದೆ. ಈ ಕುರಿತು ಸಹ ಮಾತನಾಡಿರುವ ಕಮಲ್ ಹಾಸನ್, ನಾನು ಭಾರತೀಯ, ನೀವು ಯಾರು, ನಾನು ಕಾಶ್ಮೀರಕ್ಕೆ ಹೋಗಬಹುದು, ನೀವು ಮಧುರೈಗೂ ಹೋಗಬುದು ಎಂದು ಹೇಳುವ ಮೂಲಕ ಎಲ್ಲಾ ಚರ್ಚೆಗಳಿಗೆ ನಾಂದಿ ಹಾಡಿದರು.

ಸುಮಾರು ಇನ್ನೂರು ಸಿನೆಮಾಗಳಲ್ಲಿ ನಟಿಸಿರುವ ಕಮಲ್ ಹಾಸನ್ ಕನ್ನಡ ಸೇರಿದಂತೆ ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಅವರನ್ನು ದೇಶದ ಸಿನಿರಂಗದ ಲೋಕನಾಯಕ ಎಂತಲೂ ಕರೆಯುತ್ತಾರೆ. ಇನ್ನೂ ಈಗಾಗಲೇ ವಿಕ್ರಂ ಸಿನೆಮಾದ ಶೂಟಿಂಗ್ ಮುಗಿದಿದ್ದು, ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಕಮಲ್ ಹಾಸನ್ ದೇಶ ಸುತ್ತುತ್ತಿದ್ದಾರೆ. ಸಿನೆಮಾ ಮೇಲೆ ಹೆಚ್ಚು ನಿರೀಕ್ಷೆಯಿದ್ದು, ಈ ಸಿನೆಮಾದ ಹಾಡೊಂದನ್ನು ಬ್ಯಾನ್ ಮಾಡುವಂತೆ ಇತ್ತೀಚಿಗೆ ಬಿಜೆಪಿ ಮುಖಂಡರಿಂದ ಆಗ್ರಹ ಸಹ ವ್ಯಕ್ತವಾಗಿತ್ತು.

Previous articleಲಂಡನ್ ನಲ್ಲಿ ಅಲ್ಲು ಅರ್ಜುನ್ ಕುಟುಂಬ ಸಮೇತ ಎಂಜಾಯ್… ಪೊಟೋಸ್ ವೈರಲ್…
Next articleಮೊದಲ ರೀಲ್ಸ್ ನಲ್ಲಿ ಕಾಣಿಸಿಕೊಂಡ ಕಿಚ್ಚ.. ಕುಣಿದು ಕುಪ್ಪಳಿಸಿದ ಕಿಚ್ಚನ ಫ್ಯಾನ್ಸ್….