ಬೆಂಗಳೂರು: ಕೆಜಿಎಫ್-೨ ಚಿತ್ರದ ಬಳಿಕ ಭಾರಿ ಬಜೆಟ್ ನಲ್ಲಿ ಮೂಡಿಬರಲಿರುವ ಹೊಂಬಾಳೆ ಫಿಲಂಸ್ ನ ಸಲಾರ್ ಚಿತ್ರದಲ್ಲಿ ಪ್ರಭಾಸ್ ನಾಯಕ ನಟನಾಗಿದ್ದು, ಪ್ರಭಾಸ್ ರವರ ಎದುರು ಖಳನಾಯಕನಾಗಿ ಜಾನ್ ಅಬ್ರಾಹಂ ನಟಿಸಲಿದ್ದಾರಂತೆ.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪಾನ್ ಇಂಡಿಯಾದಡಿ ಸಲಾರ್ ಚಿತ್ರ ಮೂಡಿಬರಲಿದ್ದು, ಈಗಾಗಲೇ ಪೊಸ್ಟರ್ ಮೂಲಕವೇ ಭಾರಿ ಕ್ರೇಜ್ ಕ್ರಿಯೇಟ್ ಮಾಡಿದೆ. ಈಗಾಗಲೇ ಹೈದರಾಬಾದ್, ಚೆನೈ ನಗರಗಳಲ್ಲಿ ಸಲಾರ್ ಚಿತ್ರದಲ್ಲಿ ನಟಿಸಲು ಕಲಾವಿದರಿಗಾಗಿ ಕಾಸ್ಟಿಂಗ್ ಕಾಲ್ ಸಹ ಆಯೋಜಿಸಲಾಗಿತ್ತು. ಶೀಘ್ರವೇ ಬೆಂಗಳೂರಿನಲ್ಲೂ ಸಹ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇದೀಗ ಸಲಾರ್ ಚಿತ್ರದಲ್ಲಿ ಖಳನಾಯಕ ಪಾತ್ರಕ್ಕಾಗಿ ಚಿತ್ರತಂಡ ಹುಡುಕಾಟ ನಡೆಸಿದೆ. ಪ್ರಭಾಸ್ ರನ್ನು ಎದುರಿಸಲು ಖಡಕ್ ವಿಲನ್ ಸಹ ಬೇಕಿದ್ದು, ಆ ಪಾತ್ರಕ್ಕಾಗಿ ಚಿತ್ರತಂಡ ತೀವ್ರ ಹುಡುಕಾಟ ನಡೆಸಿದ್ದು, ಬಾಲಿವುಡ್ ನ ಸ್ಟಾರ್ ನಟ ಜಾನ್ ಅಬ್ರಾಹಂ ರವರು ಸಲಾರ್ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತು ಸಲಾರ್ ಚಿತ್ರತಂಡವಾಗಲಿ ಅಥವಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಆಗಲಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಪ್ರಸ್ತುತ ಜಾನ್ ಅಬ್ರಾಹಂ ಸತ್ಯಮೇವ ಜಯತೆ ೨ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಸಲಾರ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಲು ಒಪ್ಪುತ್ತಾರ ಎಂಬ ಪ್ರಶ್ನೆ ಸಹ ಉದ್ಬವಿಸಿದೆ. ಒಂದು ವೇಳೆ ಜಾನ್ ರವರು ಒಪ್ಪಿದ್ದೇ ಆದರೇ ಸಲಾರ್ ಚಿತ್ರಕ್ಕೆ ಇನಷ್ಟು ಹೈಪ್ ಬರಲಿದೆ ಎನ್ನಲಾಗುತ್ತಿದೆ.
