Film News

ಹಿರಿಯ ನಟ ದ್ವಾರಕೀಶ್ ಅವರ ಪತ್ನಿ ವಿಧಿವಶ!

ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ಅವರು ಇನ್ನಿಲ್ಲ. ಎಚ್‌ಎಸ್‌ಆರ್ ಲೇಔಟ್ ನಲ್ಲಿರುವ ತನ್ನ ಮನೆಯಲ್ಲಿ ಶುಕ್ರವಾರ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜನವರಿಯಲ್ಲಿ ಅಂಬುಜಾ 80 ವರ್ಷ ತುಂಬಿತ್ತು.
ಅವರ ಜನ್ಮದಿನವನ್ನು ಬೆಂಗಳೂರಿನ ದೇವಸ್ಥಾನದಲ್ಲಿ ಸಸಿಗಳನ್ನು ನೆಟ್ಟು ಆಚರಿಸಲಾಯಿತು. ದ್ವಾರಕೀಶ್ ಅವರ ಇಬ್ಬರು ಹೆಂಡತಿಯರಲ್ಲಿ ಅಂಬುಜಾ ಒಬ್ಬರು. ಅಂಬುಜಾ ಅವರ ಕೋರಿ ಎರಡನೇ ಬಾರಿಗೆ ವಿವಾಹವಾದರು.

ಅಂಬುಜಾ ಅವರು 25 ವರ್ಷದಿಂದ ಅರ್ತರೈಟಿಸ್ ದಿಂದ ಬಳಲುತ್ತಿದ್ದರು.ಕಳೆದ ಮೂರು ವರ್ಷಗಳಿಂದ ಸ್ವಶಕೋಶ ತೊಂದರೆ ಕಾಣಿಸಿಕೊಂಡಿತ್ತು.ಇನ್ನು ಕೆಲವು ದಿನಗಳಿಂದ ಹುಷಾರು ತಪ್ಪಿದ್ದರು. ಬೆಳಿಗ್ಗೆ ತಿಂಡಿ ಮುಗಿಸಿ ಮಲಗಿದವರು ನಿದ್ರೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.ನಿನ್ನೆ ಸಂಜೆಯೇ ಅವರ ಅಂತ್ಯಕ್ರಿಯೆ ನಡೆದಿದೆ.

Trending

To Top