ಬೆಂಗಳೂರು: ಸ್ಯಾಂಡಲ್ ವುಡ್ ನ ನಟ ದುನಿಯಾ ವಿಜಯ್ ರವರು ಜನವರಿ 20 ರಂದು 46 ನೇ ವಸಂತಕ್ಕೆ ಕಾಲಿಡುತ್ತಿದ್ದು, ನನ್ನ ಹುಟ್ಟುಹಬ್ಬವನ್ನು ಆಚರಿಸಲು ಮಾಡುವ ಹಣದಲ್ಲಿ ಬಡವರಿಗೆ ಸಹಾಯ ಮಾಡಿ ಎನ್ನುವ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ.
ನಟ ದುನಿಯಾ ವಿಜಯ್ ರವರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು, ಪ್ರತೀ ವರ್ಷದಂತೆ ನನ್ನ ಹುಟ್ಟುಹಬ್ಬದಂದು ಅದ್ದೂರಿಯಾಗಿ ಕಟೌಟ್ ಹಾಕುವುದು, ಬ್ಯಾನರ್ ಹಾಕುವುದು ಯಾವುದು ಬೇಡ ಅದಕ್ಕಾಗುವ ಖರ್ಚಿನಲ್ಲಿ ನಿಮ್ಮ ಅಕ್ಕ-ಪಕ್ಕದಲ್ಲಿರುವ ಹಿರಿಯರಿಗೆ ಅಥವಾ ಬಡವರಿಗೆ ಬೆಡ್ ಶೀಟ್ ಕೊಡಿಸಿ ಚಳಿಗಾಲದ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದಿದ್ದಾರೆ.
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಫೆಸ್ ಬುಕ್ ನಲ್ಲಿ ಲೈವ್ ವಿಡೀಯೋದಲ್ಲಿ ಮನವಿ ಮಾಡಿದರು ದುನಿಯಾ ವಿಜಯ್ ಈ ವರ್ಷ ನನ್ನ ಹುಟ್ಟು ಹಬ್ಬ ಆಚರಣೆ ಮಾಡುವುದು ಬೇಡ, ಇನ್ನೂ ಕೊರೋನಾ ಇದೆ. ಕೊರೋನಾಗೆ ಇನ್ನೂ ಔಷಧ ದೊರೆತಿಲ್ಲ. ನಾನೂ ಕೂಡ ಕುಟುಂಬದ ಜೊತೆಗೆ ಹೊರಗಡೆ ಇದ್ದೇನೆ. ದಯಮಾಡಿ ಈ ಬಾರಿ ದೂರದ ಊರುಗಳಿಂದ ನಮ್ಮ ಮನೆಯ ಬಳಿ ಬರಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ಜೊತೆಗೆ ನೀವು ಇದ್ದ ಕಡೆಯಿಂದಲೇ ನನಗೆ ಆರ್ಶೀವಾದ ಮಾಡಿ ನಿಮ್ಮ ಪ್ರೀತಿಯಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದಿದ್ದಾರೆ. ಅಷ್ಟೇ ಅಲ್ಲದೇ ನನ್ನ ಹುಟ್ಟುಹಬ್ಬದಂದು ಸಲಗ ಸಿನೆಮಾದ ಟೈಟಲ್ ಹಾಡನ್ನು ಸಹ ಬಿಡುಗಡೆ ಮಾಡುತ್ತಿದ್ದು, ಈ ಹಾಡನ್ನು ನೋಡಿ ಖುಷಿ ಪಟ್ಟರೇ ಅದೇ ನನಗೆ ಸಂತೋಷ ಎಂದಿದ್ದಾರೆ.
ಇನ್ನೂ ದೊಡ್ಡ ನಾಗಸಾಧು ಒಬ್ಬರು ಹೊಸಪೇಟೆಯಲ್ಲಿ ಅಣ್ಣಪೂರ್ಣೇಶ್ವರಿ ವಿದ್ಯಾಪೀಠ ಎಂಬ ಪ್ರೌಢಶಾಲೆಯನ್ನು ನಡೆಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಮಕ್ಕಳು ಈ ಶಾಲೆಯಲ್ಲಿ 8 ರಿಂದ 10 ನೇ ತರಗತಿಯ ವರೆಗೂ ಉಚಿತವಾಗಿ ವಿದ್ಯಾಭ್ಯಾಸ ಪಡೆಯಬಹುದು. ಈ ಸಂಸ್ಥೆಯ ನಾನು ಸಹ ಇದ್ದೇನೆ ಎಂದಿದ್ದಾರೆ.
