Film News

ಸಾವಿನ ವದಂತಿ ಬಗ್ಗೆ ನಟ ದೊಡ್ಡಣ್ಣ ಹೇಳಿದ್ದೇನು ನೋಡಿ..

ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸ್ಯಾಂಡಲ್ ವುಡ್ ನ ಹಿರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು, ಈ ವದಂತಿ ಕುರಿತು ಸ್ವತಃ ದೊಡ್ಡಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ತಮ್ಮ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. ದೊಡ್ಡಣ್ಣ ಅವರು ಹೇಳಿದ್ದೇನು ನೋಡಿ..

“ಕನ್ನಡ ನಾಡಿನ ಎಲ್ಲಾ ನನ್ನ ತಂದೆ ತಾಯಿಗಳಿಗೆ ದೊಡ್ಡಣ್ಣನ ಭಕ್ತಿ ಪೂರ್ವಕವಾದ ನಮಸ್ಕಾರಗಳನ್ನ ಸಮರ್ಪಣೆ ಮಾಡುತ್ತಿದ್ದೇನೆ.ನಾನು ಈ ವಿಡಿಯೋ ಮಾಡುತ್ತಿರುವ ಕಾರಣ ಏನು ಅಂತ ಅಂದರೆ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ನನ್ನ ಫೋಟೋ ಹಾಕಿ ಆರ್.ಐ.ಪಿ ಅಂತ ಹಾಕಿದ್ದಾರೆ, ದೊಡ್ಡಣ್ಣ ನಿಧನರಾಗಿದ್ದಾರೆ ಅಂತ ಹಾಕಿದ್ದಾರೆ.

ಹಾಗಾಗಿ ನನಗೆ ನೂರಾರು ಫೋನ್ ಬರುತ್ತಿದೆ, ಮಾಧ್ಯಮ ಮಿತ್ರರು ಫೋನ್ ಮಾಡುತ್ತಿದ್ದಾರೆ.ಎಲ್ಲರಿಗೂ ಹೇಳಲು ಇಷ್ಟ ಪಡುತ್ತೀನಿ ನಾನು ಮನೆಯಲ್ಲೇ ಇದೀನಿ ಆರೋಗ್ಯವಾಗಿದ್ದೀನಿ, ಆರಾಮಗಿದ್ದೀನಿ ಯಾರು ಭಯ ಪಡುವಂಥದ್ದೇನಿಲ್ಲ.ಕನ್ನಡ ನಾಡಿನ ಎಲ್ಲಾ ತಂದೆ ತಾಯಿಯಂದಿರ ಆಶೀರ್ವಾದ ನನ್ನ ಮೇಲಿರುವವರೆಗೂ ನಿಮ್ಮ ದೊಡ್ಡಣ್ಣನಿಗೆ ಏನು ಆಗುವುದಿಲ್ಲ. ಆಯಸ್ಸು ಜಾಸ್ತಿ ಆಯಿತು, ಯಾವುದೋ ಒಂದು ಕಂಟಕ ಬಗೆ ಹರಿಯಿತು ಎಂದು ನಾನು ತಿಳಿದುಕೊಂಡಿದ್ದೇನೆ . ಈ ಮೂಲಕ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳುವುದಕ್ಕೆ ನಾನು ಇಷ್ಟಪಡುತ್ತೇನೆ..” ಎಂದಿದ್ದಾರೆ ಹಿರಿಯ ನಟ ದೊಡ್ಡಣ್ಣ.

Trending

To Top