ಚಂದನವನದಲ್ಲಿ ಹೊಸ ಲವ್ ಸ್ಟೋರಿ ಶುರು.. ಡಾಲಿ ಧನಂಜಯ್ ಹಾಗೂ ಅಮೃತಾ ನಡುವೆ ಪ್ರೇಮಾಯಣ ನಡೆಯುತ್ತಿದೆಯೇ?

ಸ್ಯಾಂಡಲ್ ವುಡ್ ನಲ್ಲಿ ಬ್ರೇಕ್ ಇಲ್ಲದೆ ಮುನ್ನುಗ್ಗುತ್ತಿರುವ ನಟ ಡಾಲಿ ಧನಂಜಯ್. ಇದೀಗ ಬಹುಬೇಡಿಕೆ ನಟರಲ್ಲಿ ಡಾಲಿ ಸಹ ಒಬ್ಬರಾಗಿದ್ದಾರೆ. ಆತನ ನಟನೆ ಹಾಗೂ ವ್ಯಕ್ತಿತ್ವಕ್ಕೆ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿಕೊಂಡಿದ್ದಾರೆ. ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಅವರ ಬಹುನಿರೀಕ್ಷಿತ ಹೆಡ್ ಬುಷ್ ಸಿನೆಮಾ ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೀಗ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್‍ ನಡುವೆ ಪ್ರೆಮಾಯಾಣ ನಡೆಯುತ್ತಿದೆ ಎಂಬ ಪ್ರಶ್ನೆ ಶುರುವಾಗಿದೆ.

ನಟ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್‍ ಖಾಸಗಿ ಮನರಂಜನಾ ವಾಹಿನಿಯೊಂದರಲ್ಲಿ ನಟಿಸಿದ್ದರು. ಗೋಲ್ಡನ್ ಗ್ಯಾಂಗ್ ಎಂಬ ಕಾರ್ಯಕ್ರಮದಲ್ಲಿ ಡಾಲಿ ಹಾಗೂ ಅಮೃತಾ ಅಯ್ಯಂಗಾರ್‍ ರವರಿಗೆ ಪ್ರಪೋಸ್ ಮಾಡಿದ್ದಾರೆ. ಅದೂ ಅಮೃತಾ ಮುಂದೆ ಮೊಣಕಾಲಿನ ಮೇಲೆ ಕುಳಿತು ರೊಮ್ಯಾಂಟಿಕ್ ಆಗಿ ಕವಿತೆನ್ನು ಹೇಳಿ ಪ್ರಪೋಸ್ ಮಾಡಿದ್ದಾರೆ. ಮಂಡಿಯೂರಿ ಬೇಡುವೆನು, ಹೃದಯ ಕಾಲಡಿ ಇಡುವೆನು, ತೆಗೆದು ಬಚ್ಚಿಟ್ಟುಕೋ, ಇಲ್ಲವೇ ತುಳಿದು, ಕಾಲ್ ತೊಳೆದುಕೋ, ಬೇಡ ಈ ಮೌನ, ಮಾಡು ತೀರ್ಮಾನ ಎಂಬ ಕವಿತೆನ್ನು ಹೇಳುವ ಮೂಲಕ ಎಲ್ಲರನ್ನೂ ಬೆರಗು ಗೊಳಿಸಿದ್ದಾರೆ. ಕವಿತೆಯ ಜೊತೆಗೆ ಅಮೃತಾಗೆ ರೋಸ್ ಕೊಡುವ ಮೂಲಕ ಪ್ರಪೋಸ್ ಮಾಡಿದ್ದು ವಿಶೇಷವಾಗಿತ್ತು. ಇನ್ನೂ ಅಮೃತಾ ಸಹ ಡಾಲಿಯಂತೆ ರೊಮ್ಯಾಂಟಿಕ್ ಆಗಿ ಬಡವ ರಾಸ್ಕೆಲ್ ಸಿನೆಮಾದ ಗಿಣಿಯೇ ನನ್ನ ಗಿಣಿಯೇ ಹಾಡನ್ನು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸದ್ಯ ಈ ಸನ್ನಿವೇಶದಿಂದ ಇವರಿಬ್ಬರ ನಡುವೆ ಪ್ರೇಮಾಯಣ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತು ಚಂದನವನದಲ್ಲಿ ದೊಡ್ಡ ಚರ್ಚೆ ಸಹ ಶುರುವಾಗಿದೆ. ಆದರೆ ನಟಿ ಅಮೃತಾ ಮಾತ್ರ ಈ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ನಾನು ಧನಂಜಯ್ ಇಬ್ಬರೂ ಎರಡ ಮೂರು ಸಿನೆಮಾಗಳಲ್ಲಿ ಜೋಡಿಯಾಗಿ ನಟಿಸಿದ್ದೇವೆ. ಧನಂಜಯ್ ನನಗೆ ತುಂಬಾ ಒಳ್ಳೆಯ ಸ್ನೇಹಿತ. ಸಿನೆಮಾ ಪ್ರಚಾರಕ್ಕೆ ಒಟ್ಟಾಗಿ ಹೋಗುತ್ತೇವೆ. ಅಂದ ಮಾತ್ರಕ್ಕೆ ನಾವು ನಮ್ಮನ್ನು ಲವರ್ಸ್ ಅನ್ನೊದು ಸರಿಯಲ್ಲ. ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ನಡೆದ ಸನ್ನಿವೇಶ ಕೇವಲ ಕಲ್ಪಿತವಾದ ಸನ್ನಿವೇಶ ಅಷ್ಟೆ. ಆದರೆ ಅಂತಹುದು ಏನು ಇಲ್ಲ. ಆದರೆ ಧನಂಜಯ್ ಅಭಿಮಾನಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ. ಸದ್ಯ ಈ ಸನ್ನಿವೇಶ ಇಬ್ಬರ ಬಗ್ಗೆ ದೊಡ್ಡ ಗಾಸಿಪ್ ಗಳಿಗೆ ಆಹಾರವಾಗಿ ಬಿಟ್ಟಿದ್ದಾರೆ. ಸದ್ಯ ಇನ್ನೂ ಧನಂಜಯ್ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಧನಂಜಯ್ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರದ ಶೂಟಿಂಗ್ ಸಹ ಮುಕ್ತಾಯವಾಗಿದ್ದು, ಇಡೀ ಸಿನೆಮಾದ ಶೂಟಿಂಗ್ ಬೆಂಗಳೂರಿನಲ್ಲೇ ನಡೆದಿದೆ. ಇನ್ನೂ ಬೆಂಗಳೂರಿನ ಭೂಗತ ದೊರೆ ಎಂ.ಪಿ.ಜಯರಾಜ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಈ ಸಿನೆಮಾಗೆ ಅಗ್ನಿ ಶ್ರೀಧರ್‍ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಬರೆದಿದ್ದಾರೆ.

Previous articleಮತ್ತೊಮ್ಮೆ ಬಿಕಿನಿ ಪೋಸ್ ಕೊಟ್ಟ ರಾಧಿಕಾ.. ಹಾಟ್ ಟ್ರೀಟ್ ಗೆ ಅಭಿಮಾನಿಗಳು ಫಿದಾ…!
Next articleಕೆಜಿಎಫ್ ಬೆಡಗಿಯ 10ನೇ ತರಗತಿ ಮಾರ್ಕ್ಸ್ ಕಾರ್ಡ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ …!