Film News

ಕಲಾವಿದರ ಮಕ್ಕಳಾಗಿ ಹುಟ್ಟುವುದು ವರ ಎಂದ ದರ್ಶನ್, ನಟ ದರ್ಶನ್ ಆ ರೀತಿ ಹೇಳಿದ್ದಾದರೂ ಏಕೆ?

ಚಾಲೆಂಜಿಂಗ್ ಸ್ಟಾರ್‍ ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರಾ ಸಿನೆಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಈ ಸಿನೆಮಾ ಬಿಡುಗಡೆಗೆ ಸಮಯ ಹತ್ತಿರ ಬರುತ್ತಿದ್ದಂತೆ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟುತ್ತಿದೆ. ಚಿತ್ರತಂಡ ಸಹ ಸಿನೆಮಾ ಪ್ರಮೋಷನ್ ಸಹ ಜೊರಾಗಿಯೆ ಮಾಡುತ್ತಿದೆ. ಈ ಹಾದಿಯಲ್ಲೇ ನಟ ದರ್ಶನ್ ಸೇರಿದಂತೆ ಚಿತ್ರತಂಡ ಸುದ್ದಿಗೋಷ್ಟಿ ನಡೆಸಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಾಟೇರಾ ಸಿನೆಮಾದ ಪ್ರಮೋಷನ್ ನಿಮಿತ್ತ ಚಿತ್ರತಂಡ ಸುದ್ದಿಗೋಷ್ಟಿಯನ್ನು ನಡೆಸಿದ್ದು, ಸುದ್ದಿಗೋಷ್ಟಿಯಲ್ಲಿ ಸಿನೆಮಾದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಎಲ್ಲಾ ಮಾತಾಡಿದ್ದಾರೆ ಯಾರೂ ಯಾರನ್ನೂ ಮೆಚ್ಚಿಸೋಕೆ ಈ ಮಾತುಗಳನ್ನು ಹೇಳಿಲ್ಲ. ಪ್ರತಿಯೊಬ್ಬರಿಗೂ ಸಿನೆಮಾದಲ್ಲಿ ಜಾಗವಿದೆ. ರಾಕ್ ಲೈನ್ ಸರ್‍ ರವರು ಸ್ವ ಮೇಕ್ ಸಿನೆಮಾ ಮಾಡಿದ್ದಾರೆ. ಅದೊಂದು ದೊಡ್ಡ ಕಷ್ಟದ ಕೆಲಸ ಎಂದೇ ಹೇಳಬಹುದು. ರಾಕ್ ಲೈನ್ ವೆಂಕಟೇಶ್ ರನ್ನು ದರ್ಶನ್ ಪ್ರೀತಿಯಿಂದ ತಾತ ಎಂದು ಕರೆದಿದ್ದಾರೆ. ಸಿನೆಮಾ ನೊಡಿ ನಮ್ಮ ತಾತ ಅಪ್ಪಿಕೊಂಡು ಕಥೆ ಹೇಳಿದ್ದಕ್ಕಿಂತ ಚೆನ್ನಾಗಿ ಮಾಡಿದ್ದೀರಾ ಎಂದು ಪ್ರಶಂಸೆ ಮಾಡಿದ್ದಾರೆ. ಕುರುಕ್ಷೇತ್ರ ಸಿನೆಮಾದ ಬಳಿಕ ಅವರು ಒಪ್ಪಿದ ಸಿನೆಮಾ ಎಂದರೇ ಅದು ಕಾಟೇರಾ. ಸಿನೆಮಾದಲ್ಲಿರುವ ಎಲ್ಲಾ ಹಿರಿಯರು ರಿಹಾರ್ಸಲ್ ಗೆ ಬಂದಿದ್ದರು. ಯಾರು ಯಾವ ಪಾತ್ರ ಮಾಡಬೇಕು ಅವರಿಗೆ ಆ ಪಾತ್ರ ಸಿಗುತ್ತದೆ. ಶ್ರುತಿ ಅಮ್ಮ ಕಣ್ಣಲ್ಲೇ ನಟಿಸಿ ತೊರಿಸಿದ್ದಾರೆ ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಕಲಾವಿದರ ಮಕ್ಕಳಾಗಿ ಹುಟ್ಟುವುದು ಶಾಪವಲ್ಲ, ಬದಲಿಗೆ ಅದು ವರ ಎಂದು ನಾಯಕಿ ಅರಾಧನೆಗೆ ಕಿವಿ ಮಾತು ಹೇಳಿದ್ದಾರೆ. ನನ್ನ ತಂದೆ ಒಂದು ಮಾತನ್ನು ಹೇಳಿದ್ದರು. ರಾಣಿ ಮಹಾರಾಣಿ ಸಿನೆಮಾ ಅನುಭವ ಹಂಚಿಕೊಂಡಿದ್ದರು. ನನಗೆ ಯಾರ ಮುಂದೆ ನಟಿಸೋಕು ಭಯವಿಲ್ಲ. ಮಾಲಾಶ್ರೀ ಜೊತೆ ನಟಿಸೋಕೆ ಭಯ ಅಂತ ಹೇಳಿದರು. ಮಾಸ್ತಿ, ಸುಧಾಕರ್‍, ತರುಣ್, ಪ್ರಕಾಶ್ ಎಲ್ಲರೂ ಒಂದು ಕಡೆ ಸೇರಿದಂತೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ. ಸಿನೆಮಾದಲ್ಲಿ ಮೂರು ಆಕ್ಷನ್ ದೃಶ್ಯಗಳಿವೆ. ಈ ಪೈಕಿ ಒಂದು ಫೈಟ್ ನಲ್ಲಿ ಎರಡೂ ಕೈ ಇರುತ್ತೆ, ಇನ್ನೋಂದು ಫೈಟ್ ನಲ್ಲಿ ಒಂದು ಕೈ ಮಾತ್ರ ಇದೆ, ಕೊನೆಯ ಫೈಟ್ ನಲ್ಲಿ ಎರಡೂ ಕೈ ಇಲ್ಲ. ಇಷ್ಟು ಸಾಕು ಸಿನೆಮಾ ಹೇಗಿರುತ್ತೆ ಎಂದು ಹೇಳೊಕೆ. ಡಿ.29 ರಂದು ನಾವು ಬರ್ತಿದ್ದೀವಿ. ನಮ್ಮ ಮನೆಗೆ ನಾವು ಬರೋಕೆ ಯಾಕೇ ಹೆದರಬೇಕು, ಯಾವ ಚಿತ್ರ ಬಂದರೂ ನಮಗೆ ಭಯ ಇಲ್ಲ. ಕಾಟೇರ ಪಕ್ಕಾ ಕನ್ನಡ ಸಿನೆಮಾ ಆಗಿದ್ದು, ಪ್ಯಾನ್ ಇಂಡಿಯಾ ಸಿನೆಮಾ ಮಾಡಿಲ್ಲ ಎಂದು ಹೇಳಿದ್ದಾರೆ.

Most Popular

To Top