Uncategorized

ಟಾಲಿವುಡ್ ನಿರ್ದೇಶಕ ಸುಕುಮಾರ್ ರವರಿಗೆ ಶುಭಾಷಯ ಕೋರಿದ ದರ್ಶನ್

ಬೆಂಗಳೂರು: ತೆಲುಗು ಸಿನಿರಂಗದ ಖ್ಯಾತ ನಿರ್ದೇಶಕ ಸುಕುಮಾರ್ ರವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ಶುಭಾಷಯ ತಿಳಿಸಿದ್ದು, ಅವರೊಂದಿಗಿರುವ ಪೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ನಿರ್ದೇಶಕ ಸುಕುಮಾರ್ ಹಾಗೂ ದರ್ಶನ್ ಇವರಿಬ್ಬರ ಹಳೇ ಪೊಟೋವೊಂದನ್ನು ಹಂಚಿಕೊಂಡ ದರ್ಶನ್ ಜನ್ಮದಿನದ ಶುಭಾಷಯಗಳು ಸುಕುಮಾರ್ ಅವರೇ, ನಿಮಗೆ ಮತಷ್ಟು ಯಶಸ್ಸು ಸಿಗಲಿ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೊಟೋ ಹಿಂದೆ ಭಾರಿ ಮಟ್ಟದಲ್ಲಿ ವೈರಲ್ ಆಗಿದ್ದು, ಇದೀಗ ಪುನಃ ವೈರಲ್ ಆಗುತ್ತಿದೆ. ದರ್ಶನ್ ಅಭಿನಯದ ಯಜಮಾನ ಚಿತ್ರದ ಶೂಟಿಂಗ್ ವೇಳೆ ಇವರಿಬ್ಬರೂ ಭೇಟಿಯಾಗಿದ್ದು, ಆ ಸಮಯದಲ್ಲಿ ತೆಗೆದ ಪೊಟೋ ಇದಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಇವರಿಬ್ಬರ ಪೊಟೋ ನೋಡಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನೆಮಾ ಸಹ ಬರಬಹುದೆಂದು ಚರ್ಚೆಗಳು ಶುರುವಾಗಿತ್ತಂತೆ.

ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಮಾರ್ಚ್ ೧೧ ರಂದು ತೆರೆ ಮೇಲೆ ಬರಲಿದೆ. ದರ್ಶನ್ ರವರ ಮುಂದಿನ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ದರ್ಶನ್ ಹಂಚಿಕೊಂಡ ಪೊಟೋ ದಿಂದಾಗಿ ದರ್ಶನ್ ತಮ್ಮ ಮುಂದಿನ ಚಿತ್ರ ಸುಕುಮಾರ್ ರವರೊಂದಿಗೆ ಮಾಡಬಹುದು ಎಂಬ ಚರ್ಚೆಗಳು ಪ್ರಾರಂಭವಾಗಿದೆ.

ನಿರ್ದೇಶಕ ಸುಕುಮಾರ್ ರವರು ರಂಗಸ್ಥಳಂ, ನಾನ್ನಕು ಪ್ರೇಮತೋ, ಆರ್ಯ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಸ್ಟಾರ್ ನಟ ಅಲ್ಲು ಅರ್ಜುನ್ ರವರ ನಟನೆಯ ಪುಷ್ಪ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸದ್ಯ ಈ ಚಿತ್ರದಲ್ಲಿ ಸುಕುಮಾರ್ ಬ್ಯುಸಿಯಾಗಿದ್ದಾರೆ.

Trending

To Top