ನಟ ದರ್ಶನ್ ಹುಟ್ಟುಹಬ್ಬಕ್ಕೆ ಹರಿದುಬಂದ ಶುಭಾಷಯಗಳ ಸುರಿಮಳೆ!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದಿಗೆ ೪೪ನೇ ವಸಂತಕ್ಕೆ ಕಾಲಿಡುತ್ತಿದ್ದು, ಗಣ್ಯರು, ಸಿನಿರಂಗದ ಪ್ರಮುಖರು, ಗೆಳೆಯರು ಸೇರಿದಂತೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.

ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ದರ್ಶನ್ ರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರುತ್ತಿದ್ದಾರೆ. ಹುಟ್ಟುಹಬ್ಬಕ್ಕೂ ಮುನ್ನವೇ ದರ್ಶನ್ ಅಭಿಮಾನಿಗಳು ಸೇರಿದಂತೆ ಅನೇಕ ನಟರು ದರ್ಶನ್ ರವರ ಕಾಮನ್ ಡಿ.ಪಿ ಬಿಡುಗಡೆ ಮಾಡಿ ಶುಭ ಕೋರಿದ್ದರು. ದರ್ಶನ್ ರವರಿಗೆ ಕೆಲವು ಗಣ್ಯರು ಶುಭಾಷಯಗಳನ್ನು ತಿಳಿಸಿದ್ದಾರೆ.

ಸಚಿವ ಶ್ರೀರಾಮುಲು ರವರು ದರ್ಶನ್ ರವರಿಗೆ ಟ್ವಿಟರ್ ಮೂಲಕ ಶುಭಾಷಯ ಕೋರಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟರು, ಅಭಿಮಾನಿಗಳ ಪ್ರೀತಿಯ ಶ್ರೀ ದರ್ಶನ್ ರವರಿಗೆ ಜನ್ಮದಿನದ ಹಾರ್ಧಿಕ ಶುಭಾಷಯಗಳು, ಮುಂದಿನ ನಿಮ್ಮ ಎಲ್ಲಾ ಸಿನೆಮಾಗಳು ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರವರು ಸರಳವಾಗಿ ಶುಭಾಷಯಗಳನ್ನು ಕೋರಿದ್ದಾರೆ. ನಟ ರಕ್ಷಿತ್ ಶೆಟ್ಟಿ ವಿಶ್ ಮಾಡಿದ್ದು, ನಿಮ್ಮ ಉದಾತ್ತತೆ ಹಾಗೂ ಜನಪರವಾದ ನಿಲುವು ಎಲ್ಲರಿಗೂ ಸ್ಪೂರ್ತಿ ನೀಡಲಿ, ಅದ್ಬುತವಾದ ವರ್ಷ ನಿಮಗೆ ಆಗಲಿ ಎಂದು ಶುಭಾಷಯಗಳನ್ನು ತಿಳಿಸಿದ್ದಾರೆ. ಅಂಬರೀಶ್ ಪುತ್ರ ಅಭಿಷೇಕ್ ಅಣ್ಣನಿಗೆ ಪ್ರೀತಿಯ ಶುಭಾಷಯಗಳನ್ನು ಕೋರಿದ್ದಾರೆ. ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್, ಸುಲ್ತಾನ, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ನನ್ನ ಪ್ರೀತಿಯ ಸೀನಿಯರ್ ರವರಿಗೆ ಹುಟ್ಟು ಹಬ್ಬದ ಶುಭಾಷಯಗಳು ಎಂದು ಶುಭ ಕೋರಿದ್ದಾರೆ.

ಅಷ್ಟೇ ಅಲ್ಲದೇ ದರ್ಶನ್ ಅವರ ಆಪ್ತ ಗೆಳೆಯ ಸೃಜನ್ ಲೋಕೇಷ್, ಸಚಿವ ಬಿ.ಸಿ.ಪಾಟೀಲ್, ಸಂಚಾರಿ ವಿಜಯ್, ಜಗ್ಗೇಶ್ ಸೇರಿದಂತೆ ಅನೇಕ ಗಣ್ಯರು, ಸಿನೆಮಾ ನಟರು ಶುಭಾಷಯಗಳನ್ನು ಕೋರಿದ್ದಾರೆ.

Previous articleರಾಬರ್ಟ್ ಟ್ರೈಲರ್ ಬಿಡುಗಡೆ: ಜೋರಾಯ್ತು ಡೈಲಾಗ್ ಗಳ ಅಬ್ಬರ
Next articleಬ್ರಹ್ಮಾಸ್ತ್ರ ಚಿತ್ರದ ಕುರಿತು ನಾಗಾರ್ಜುನ ಕ್ರೇಜಿ ಟ್ವೀಟ್ಸ್!