Film News

ರಾಬರ್ಟ್ ಬಿಡುಗಡೆ ವಿಚಾರ: ಫಿಲ್ಮಂ ಚೇಂಬರ್ ಗೆ ದೂರು ನೀಡಿದ ದಚ್ಚು

ಬೆಂಗಳೂರು: ತೆಲುಗು ರಾಜ್ಯಗಳಲ್ಲಿ ರಾಬರ್ಟ್ ಚಿತ್ರ ಬಿಡುಗಡೆ ಮಾಡಲು ಅಲ್ಲಿನ ವಿತರಕರು ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಫಿಲ್ಮಂ ಚೇಂಬರ್ ಗೆ ದೂರು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ದರ್ಶನ್, ಕನ್ನಡ ನಾಡಲ್ಲಿ ಎಲ್ಲಾ ಭಾಷೆಗಳ ಚಿತ್ರ ಬಿಡುಗಡೆಗೂ ಅವಕಾಶ ನೀಡುತ್ತೇವೆ. ಆದರೆ ನಮ್ಮ ಕನ್ನಡ ಚಿತ್ರಗಳನ್ನು ಆಂಧ್ರದಲ್ಲಿ ಬಿಡುಗಡೆ ಮಾಡಲು ಯಾಕೆ ಅಡ್ಡಿ ಪಡಿಸುತ್ತಿದ್ದಾರೆ. ನಾವು ಎಂಟ್ರಿ ಕೊಡುತ್ತಿದ್ದರೇ, ಅವರಿಗೆ ಹೆದರಿಕೆನಾ? ಕನ್ನಡ ಚಿತ್ರಗಳನ್ನು ಆಂದ್ರದಲ್ಲಿ ರಿಲೀಸ್ ಮಾಡಿದರೆ ಅವರಿಗೆ ಕಷ್ಟವಾಗುತ್ತೆ ಎಂದಾದ್ರೆ, ತೆಲುಗು ಚಿತ್ರಗಳು ಇಲ್ಲಿ ಬಿಡುಗಡೆಯಾಗೋದಿಲ್ವಾ? ನಾವು ಎಲ್ಲಿ ಹೋಗ್ಬೇಕು ಎಂದು ದರ್ಶನ್ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ನನ್ನ ಕಥೆ ಬಿಡಿ ನನ್ನದು ೫೦ ಚಿತ್ರಗಳು ಮುಗಿದಿದೆ. ನಮ್ಮ ಮುಂದಿನ ಯಂಗ್ ಹಿರೋಗಳ ಗತಿಯೇನು ಎಂಬ ಪ್ರಶ್ನೆಯನ್ನು ಸಹ ಹಾಕಿದ್ದಾರೆ.

ಇನ್ನೂ ಏಕಕಾಲದಲ್ಲಿ ಸಿನೆಮಾಗಳು ಬಿಡುಗಡೆ ಮಾಡಬಾರದೆಂಬ ನಿಯಮ ಇಲ್ಲಿಯವರೆಗೂ ಕಂಡಿಲ್ಲ. ಆದರೆ ಈ ನಿಯಮ ಇದೀಗ ಉದ್ಬವಿಸಿದೆ. ಈ ನೀತಿಯನ್ನು ಯಾರು ಒಪ್ಪುವಂತಿಲ್ಲ. ತೆಲುಗು ರಾಜ್ಯಗಳಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡದಿದ್ದರೇ, ಕರ್ನಾಟಕದಲ್ಲೂ ತೆಲುಗು ಚಿತ್ರಗಳ ರಿಲೀಸ್ ಗೆ ಅವಕಾಶ ನೀಡಬಾರದೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ.

ಮುಂಬರುವ ಮಾರ್ಚ್೧೧ ರಂದು ರಾಬರ್ಟ್ ಸಿನೆಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಒಂದೇ ಬಾರಿ ಬಿಡುಗಡೆಯಾಗಲಿದೆ. ಆದರೆ ರಾಬರ್ಟ್ ಬಿಡುಗಡೆಗೆ ತೆಲುಗು ರಾಜ್ಯಗಳಲ್ಲಿ ಅಡ್ಡಿಪಡಿಸಲಾಗುತ್ತಿದ್ದು, ಈ ಕುರಿತು ಫಿಲ್ಮಂ ಚೇಂಬರ್ ನಲ್ಲಿ ಹಲವು ನಿರ್ಮಾಪಕರು ಸೇರಿ ದೂರನ್ನು ನೀಡಿದ್ದಾರೆ.

Trending

To Top