Film News

ಟಾಲಿವುಡ್ ವಿರುದ್ದ ಗುಡುಗಿದ ಡಿ-ಬಾಸ್!

ಬೆಂಗಳೂರು: ರಾಬರ್ಟ್ ಸಿನೆಮಾ ಬಿಡುಗಡೆಗೆ ಸಂಬಂಧಿಸಿದಂತೆ ಟಾಲಿವುಡ್ ಸಿನಿರಂಗ ಅನುಸರಿಸುತ್ತಿರುವ ಧೋರಣೆ ಕುರಿತು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಿದ್ದಾರೆ. ಇನ್ನೂ ಈ ಕುರಿತು ಫಿಲಂ ಚೇಂಬರ್ ಗೆ ಸಹ ದೂರು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಇತರೆ ಭಾಷೆಯ ಸಿನೆಮಾಗಳನ್ನು ಬಿಡುಗಡೆ ಮಾಡಲು ಯಾವುದೇ ನಿಬಂಧನೆಗಳಾಗಲಿ, ತಕರಾರುಗಳಾಗಲಿ ಇಲ್ಲ. ಆದರೆ ಕನ್ನಡ ಸಿನೆಮಾಗಳನ್ನು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಕೆಲವೊಂದು ಅನಧಿಕೃತ ನಿಯಮಗಳನ್ನು ವಿಧಿಸಲಾಗಿದೆಯೆಂತೆ. ಇದರಿಂದ ರಾಬರ್ಟ್ ಚಿತ್ರ ಬಿಡುಗಡೆಗೆ ತೊಂದರೆಯಾಗುತ್ತಿದೆ ಎಂದು ದರ್ಶನ್ ಗರಂ ಆಗಿದ್ದಾರೆ ಎನ್ನಲಾಗಿದೆ.

ಇನ್ನೂ ರಾಬರ್ಟ್ ಚಿತ್ರ ಕನ್ನಡ ಹಾಗೂ ತೆಲುಗು ವರ್ಷನ್‌ಗಳಲ್ಲಿ ಮಾರ್ಚ್ ೧೧ ರಂದು ಬಿಡುಗಡೆಯಾಗಲಿದ್ದು, ತೆಲುಗಿನ ಮೂರು ಸಿನೆಮಾಗಳು ಸಹ ಇದೇ ದಿನ ಬಿಡುಗಡೆಯಾಗಲಿದೆಯಂತೆ, ಆದ್ದರಿಂದ ರಾಬರ್ಟ್ ಚಿತ್ರ ಬಿಡುಗಡೆಗೆ ತಡೆಯನ್ನು ಹಾಕಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಸಹ ಫೆ.೧೯ ರಂದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು, ಈ ಚಿತ್ರ ಬಿಡುಗಡೆಗೆ ಯಾವುದೇ ತೊಂದರೆಯಿಲ್ಲ. ರಾಬರ್ಟ್ ಚಿತ್ರ ಬಿಡುಗಡೆಗೆ ಮಾತ್ರ ತಡೆ ಹಾಕಲಾಗುತ್ತಿದೆಯೇ ಎಂಬ ಅನುಮಾನ ಸಹ ಹುಟ್ಟಿದೆ.

ಈ ಸಂಬಂಧ ಇಂದು ಫಿಲಂ ಚೇಂಬರ್ ನಲ್ಲಿ ಚರ್ಚೆಗಳು ನಡೆಯಲಿದ್ದು, ದರ್ಶನ್ ಸಹ ದೂರು ನೀಡಲಿದ್ದಾರೆ ಎನ್ನಲಾಗಿದೆ. ಜೊತೆಗೆ ಕನ್ನಡ ಸಿನೆಮಾ ರಂಗ ಪೂರ್ತಿ ದರ್ಶನ್ ರವರ ಬೆಂಬಲಕ್ಕೆ ನಿಲ್ಲಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

Trending

To Top