Film News

ನ್ಯೂ ಲುಕ್ನಲ್ಲಿ ಕಾಲಿವುಡ್ ಸ್ಟಾರ್ ಆರ್ಯ

ಚೆನೈ: ಕಬಾಲಿ ಚಿತ್ರದ ನಿರ್ದೇಶಕನ ಹೊಸ ಸಿನೆಮಾದಲ್ಲಿ ಕಾಲಿವುಡ್‌ನ ಖ್ಯಾತ ನಟ ಆರ್ಯ ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷದಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದ ಆರ್ಯ, ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿರಲಿಲ್ಲ. ಪ್ರಸ್ತುತ ಏಕಾಏಕಿ ಹೊಸ ಸಿನೆಮಾದೊಂದಿಗೆ ಹೊಸ ಲುಕ್‌ನೊಂದಿಗೆ ಹವಾ ಎಬ್ಬಿಸಿದ್ದಾರೆ ಎನ್ನಲಾಗುತ್ತಿದೆ.

ಕಾಲಿವುಡ್‌ನ ಬಹುಬೇಡಿಕೆ ನಟರಲ್ಲೊಬ್ಬರಾದ ಆರ್ಯ ಮೊದಲಿಗಿಂತಲೂ ಹೆಚ್ಚು ಕಸರತ್ತು ಮಾಡಿ, 6 ಪ್ಯಾಕ್ ಬೆಳೆಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾಲಿವುಡ್‌ನಲ್ಲಿ ಹರಿದಾಡುತ್ತಿದ್ದರೂ ಯಾವ ಚಿತ್ರಕ್ಕಾಗಿ ಅಂತ ತಿಳಿದಿರಲಿಲ್ಲ. ಪ್ರಸ್ತುತ ಈ ಪ್ರಶ್ನೆಗೆ ಉತ್ತರ ದೊರಕಿದ್ದು, ಅವರು ನಟಿಸಲಿರುವ ಚಿತ್ರ ಕಬಾಲಿ ಚಿತ್ರದ ಖ್ಯಾತಿಯ ನಿರ್ದೇಶಕ ರಂಜಿತ್ ರವರ ಐದನೇ ಸಿನೆಮಾ ಸರ್ಪಟ್ಟ ಪರಂಬರೈ.

ಸರ್ಪಟ್ಟ ಪರಂಬರೈ ಚಿತ್ರ ಬಾಕ್ಸಿಂಗ್ ಕುರಿತ ಕಥನವಾಗಿದ್ದು, ಬಾಕ್ಸರ್ ಪಾತ್ರದಲ್ಲಿ ಆರ್‍ಯ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿಯೇ ತಮ್ಮ ಬಾಡಿಯನ್ನು ಬಿಲ್ಡ್ ಮಾಡಿಕೊಂಡಿದ್ದಾರೆ. ಆರ್ಯ

ಈ ರೀತಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿ. ಡಿ.2 ರಂದು ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ನ್ನು ರೀಲಿಸ್ ಮಾಡಿದ್ದು, ಚಿತ್ರದಲ್ಲಿ ಆರ್ಯ ಕಬಿಲ ಎಂಬ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಆರ್ಯ ಜೊತೆಗೆ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದಂತಹ ಜಾನ್ ಕೊಕೆನ್, ಕಲೈಯರಸನ್, ಸಂತೋಷ್, ಕಾಳಿ ವೆಂಕಟ್ ಸೇರಿದಂತೆ ಹಲವರು ನಟಿಸಿದ್ದು, ದುಶಾರಾ ನಾಯಕಿಯಾಗಿ ಬಣ್ಣ ಹಚ್ಚಿಕೊಂಡಿದ್ದಾರೆ. ಸಂಗೀತ ಸಂಯೋಜನೆಯನ್ನು ಸಂತೋಷ್ ನಾರಾಯಣ್ ಮಾಡಿದ್ದು, ಛಾಯಾಗ್ರಹಣವನ್ನು ಮುರಳಿ ಮಾಡಿದ್ದಾರೆ.

Trending

To Top