ಪುಷ್ಪಾ-2 ಸಿನೆಮಾಗೆ ನಟ ಅಲ್ಲು ಅರ್ಜುನ್ ಪಡೆದುಕೊಳ್ಳಲಿದ್ದಾರಂತೆ ಬರೊಬ್ಬರಿ ನೂರು ಕೋಟಿ ಸಂಭಾವನೆ…!

ಟಾಲಿವುಡ್ ನಲ್ಲಿ ಕಳೆದ ವರ್ಷ ದೊಡ್ಡ ಸಕ್ಸಸ್ ಪಡೆದುಕೊಂಡ ಸಿನೆಮಾ ಎಂದರೇ ಅದು ಪುಷ್ಪಾ. ಪುಷ್ಪಾ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಲೂಟಿ ಹೊಡೆದಿತ್ತು. ಎಲ್ಲರೂ ಪುಷ್ಪಾ ಸಿನೆಮಾದತ್ತ ತಿರುಗಿ ನೋಡುವಂತೆ ಮಾಡಿತ್ತು. ಈ ಸಿನೆಮಾದಲ್ಲಿನ ಹಾಡುಗಳು ಡೈಲಾಗ್ ಗಳು ಇಂದಿಗೂ ಸಹ ಪ್ರಚಲಿತವಾಗಿದೆ. ಅದರಲ್ಲೂ ಸಿನೆಮಾದಲ್ಲಿನ ಅಲ್ಲು ಅರ್ಜುನ್ ನಟನೆ ಮಾತ್ರ ಎಲ್ಲರನ್ನೂ ಅಕರ್ಷಣೆ ಮಾಡಿತ್ತು. ಇದೀಗ ಸಿನೆಮಾದ ಮುಂದುವರೆದ ಭಾಗ ಪುಷ್ಪಾ-2 ಸಿನೆಮಾ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಕೊಂಡಿದೆ.

ಸದ್ಯ ಪುಷ್ಪಾ ಸಿನೆಮಾದ ಮುಂದುವರೆದ ಭಾಗದ ಮೇಲೆ ಎಲ್ಲರೂ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಪುಷ್ಪಾ ಸಿನೆಮಾದ ಅಭಿಮಾನಿಗಳೂ ಸಹ ಪುಷ್ಪಾ-2 ಸಿನೆಮಾಗಾಗಿ ಕಾದುಕುಳಿತಿದ್ದಾರೆ. ಸಿನೆಮಾದ ಅಪ್ಡೇಟ್ ಗಾಗಿ ಸಹ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನೆಮಾದ ಶೂಟಿಂಗ್ ಸಹ ಪ್ರಾರಂಭವಾಗಲಿದೆ. ಪುಷ್ಪಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್ ಪುಷ್ಪಾ ಭಾಗ 1 ರಲ್ಲಿ ಪಡೆದುಕೊಂಡ ಸಂಭಾವನೆಗಿಂತ ದುಪ್ಪಟ್ಟು ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನೂ ಪುಷ್ಪಾ -2 ಸಿನೆಮಾ ಶೂಟಿಂಗ್ ಸಹ ಆರಂಭವಾಗಿಲ್ಲ ಆಗಲೇ ಪುಷ್ಪಾ-2 ಸಿನೆಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಏಳು ನೂರು ಕೋಟಿ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸಿನೆಮಾದ ನಿರ್ದೇಶಕ ಹಾಗೂ ಹಿರೋ ಸಂಭಾವನೆ ಸಹ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ನಟ ಅಲ್ಲು ಅರ್ಜುನ್ ಗೆ ಪುಷ್ಪಾ ಸಿನೆಮಾ ದೊಡ್ಡ ಬ್ರೇಕ್ ಕೊಟ್ಟ ಸಿನೆಮಾ ಆಗಿದೆ. ಅಲ್ಲು ಅರ್ಜುನ್ ಸಿನೆಮಾ ಕೆರಿಯರ್‍ ನಲ್ಲಿ ದೊಡ್ಡ ಸಕ್ಸಸ್ ತಂದುಕೊಟ್ಟ ಸಿನೆಮಾ ಆಗಿದೆ. ಅಲ್ಲು ಅರ್ಜುನ್ ನಟಿಸಿದ ಸಿನೆಮಾಗಳ ಪೈಕಿ ಪುಷ್ಪಾ ಸಿನೆಮಾ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನೆಮಾ ಆಗಿದೆ ಪುಷ್ಪಾ. ಇನ್ನೂ ಪುಷ್ಪಾ ಮೊದಲನೆ ಭಾಗದಲ್ಲಿ ಸುಮಾರು 45 ಕೋಟಿ ಸಂಭಾವನೆಯನ್ನು ನಟ ಅಲ್ಲು ಅರ್ಜುನ್ ಪಡೆದುಕೊಂಡಿದ್ದರಂತೆ. ಜೊತೆಗೆ ಸಿನೆಮಾದ ಲಾಭಾಂಶದಲ್ಲೂ ಸಹ ಪಾಲು ಪಡೆದುಕೊಂಡಿದ್ದರು ಎನ್ನಲಾಗಿದೆ. ಆದ್ದರಿಂದ ಪುಷ್ಪಾ-2 ಸಿನೆಮಾಗೆ ಇದಕ್ಕಿಂತ ಹೆಚ್ಚಿನ ಮೊತ್ತದ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ ನಟ ಅಲ್ಲು ಅರ್ಜುನ್ ಪುಷ್ಪಾ-2 ಸಿನೆಮಾಗಾಗಿ ಬರೊಬ್ಬರಿ ನೂರು ಕೋಟಿ ಸಂಭಾವನೆ ಪಡೆದುಕೊಳ್ಳಲಿದ್ದಾರಂತೆ. ನಟ ಪ್ರಭಾಸ್ ಸಹ ಸಿನೆಮಾಗಳಿಗಾಗಿ ನೂರು ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಇದೀಗ ಅಲ್ಲು ಅರ್ಜುನ್ ಸಹ ಪ್ರಭಾಸ್ ರಿಗೆ ಸರಿ ಸಮನಾದ ಸಂಭಾವನೆ ಪಡೆಯವು ಮೂಲಕ ಪ್ರಭಾಸ್ ಗೆ ಸರಿಸಾಟಿಯಾದ ನಟ ಎಂದೆನ್ನಿಸಿಕೊಂಡಿದ್ದಾರೆ ಅಲ್ಲು ಅರ್ಜುನ್. ಅಷ್ಟೇಅಲ್ಲದೇ ಸಿನೆಮಾದ ನಿರ್ದೇಶಕ ಸುಕುಮಾರ್‍ ಸಹ ಪುಷ್ಪಾ-1 ಕ್ಕೆ 16 ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಪುಷ್ಪಾ-2 ಸಿನೆಮಾಗಾಗಿ ಸುಕುಮಾರ್‍ 65 ಕೋಟಿ ಸಂಭಾವನೆ ಪಡೆದುಕೊಳ್ಳಿದ್ದಾರೆ ಎನ್ನಲಾಗುತ್ತಿದೆ. ಸುಕುಮಾರ್‍ ಸಹ ಅವರ ವೃತ್ತಿ ಜೀವನದಲ್ಲಿ ಪಡೆದುಕೊಳ್ಳುತ್ತಿರುವ ಹೆಚ್ಚಿನ ಸಂಭಾವನೆ ಇದಾಗಲಿದೆ ಎಂದು ಹೇಳಲಾಗುತ್ತಿದೆ.

Previous articleರಜನಿಕಾಂತ್ ಹಾಗೂ ಶಿವಣ್ಣ ಕಾಂಬಿನೇಷನ್ ಸಿನೆಮಾದ ಬಿಗ್ ಅಪ್ಡೇಟ್…!
Next articleಹುಟ್ಟು ಹಬ್ಬದ ಸಂಭ್ರಮದಲ್ಲಿ ನಂದಮೂರಿ ಬಾಲಕೃಷ್ಣ, ಹುಟ್ಟಹಬ್ಬಕ್ಕಾಗಿ NBK107 ಟೀಸರ್ ಕೊಡುಗೆ…..!