Film News

ಬನ್ನಿ ಪುಷ್ಪ ಚಿತ್ರದ ಮೈಂಡ್ ಬ್ಲೋಯಿಂಗ್ ಲುಕ್ ವೈರಲ್!

ಹೈದರಾಬಾದ್: ಟಾಲಿವುಡ್ ನಿರ್ದೇಶಕ ಸುಕುಮಾರ್ ಹಾಗೂ ಮೆಗಾಫ್ಯಾಮಿಲಿಯ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಪುಷ್ಪಾ ಚಿತ್ರ ಈಗಾಗಲೇ ಟಾಲಿವುಡ್‌ನಲ್ಲಿ ಟ್ರೆಂಡಿಂಗ್ ಸೃಷ್ಟಿ ಮಾಡಿದೆ. ಇದೀಗ ನಟ ಬನ್ನಿ ಬಿಡಿ ಸೇದುವ ಪೊಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ ಆಗಿದ್ದು, ವೈರಲ್ ಆಗುತ್ತಿದೆ.

ನಟ ಅಲ್ಲುಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್‌ಲ್ಲಿ ತಯಾರುಗುತ್ತಿರುವ ಪುಷ್ಪಾ ಚಿತ್ರಕ್ಕಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಅಪ್ಡೇಟ್‌ಗಳಿಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಜೊತೆಗೆ ಇತ್ತೀಚಿಗಷ್ಟೆ ಚಿತ್ರದ ಸಾಂಗ್‌ವೊಂದರ ಶೂಟಿಂಗ್‌ಗೆ ಸಂಬಂಧಿಸಿದಂತೆ ಮೇಕಿಂಗ್ ವಿಡಿಯೋ ಸಹ ಲೀಕ್ ಆಗಿ ಸುದ್ದಿಯಲ್ಲಿತ್ತು. ಇದೀಗ ಮತ್ತೊಂದು ಪೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಹುಟ್ಟಿಸಿದೆ. ಏನು ಸಮಾಚಾರವಿಲ್ಲದೇ ಚಿತ್ರತಂಡ ಏಕೆ ಈ ಪೊಟೋ ಬಿಡುಗಡೆ ಮಾಡಿದೆ ಎಂದು ಶಾಕ್ ಆಗಿದ್ದಾರೆ ಅಭಿಮಾನಿಗಳು.

ಅಂದಹಾಗೆ ಈ ಪೊಟೋ ಅಧಿಕೃತವಾಗಿ ಪುಷ್ಪಾ ಚಿತ್ರದ್ದು ಅಲ್ಲ ಎನ್ನಲಾಗಿದೆ. ಈ ಪೊಟೋ ಬನ್ನಿ ಅಭಿಮಾನಿಗಳು ಕ್ರಿಯೇಟ್ ಮಾಡಿರುವ ಫ್ಯಾನ್ ಮೇಡ್ ಪೊಟೋ ಆಗಿದ್ದು, ಕ್ರೇಜಿಯಾಗಿದೆ. ಇತ್ತೀಚಿಗೆ ಅಭಿಮಾನಿಗಳಿಗೆ ತಮ್ಮ ನಟನ ಬಗ್ಗೆ ಸ್ವಲ್ಪ ಹಿಂಟ್ ಕೊಟ್ಟರೇ ಸಾಕು ಅವರದ್ದೇ ಆದ ಶೈಲಿಯಲ್ಲಿ ನಿರ್ದೇಶಕರಿಗಿಂತಲೂ ಮೊದಲೇ ಊಹೆ ಮಾಡಿಕೊಂಡು ಪೊಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಕೆಲವರಂತೂ ಚಿತ್ರತಂಡವೇ ಬಿಡುಗಡೆ ಮಾಡಿದೆ ಎಂದು ಭಾವಿಸುತ್ತಾರೆ.

ಇನ್ನೂ ಪುಷ್ಪಾ ಚಿತ್ರವನ್ನು ಆಗಸ್ಟ್ ಮಾಹೆಯ 13 ರಂದು ಬಿಡುಗಡೆ ಮಾಡಲಾಗಿದ್ದು, ಪಾನ್ ಇಂಡಿಯಾ ಸಿನೆಮಾ ಇದಾಗಿದೆ. ಜೊತೆಗೆ ಸುಮಾರು 10 ಭಾಷೆಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ.

Trending

To Top