Film News

ಪ್ರಿನ್ಸ್ ಮಹೇಶ್ ಬಾಬು ಪುತ್ರಿಗೆ ಗಿಫ್ಟ್ ನೀಡಿದ ಆರ್.ಆರ್.ಆರ್. ಸೀತಾ

ಹೈದರಾಬಾದ್: ಖ್ಯಾತ ಬಾಲಿವುಡ್ ನಟಿ ಆಲಿಯಾ ಭಟ್ ರಾಜಮೌಳಿ ನಿರ್ದೇಶನ ಆರ್.ಆರ್.ಆರ್ ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ, ಪ್ರಸ್ತುತ ಸೀತಾ ಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರಾ ಗೆ ಡ್ರೆಸ್ ವೊಂದು ಗಿಫ್ಟ್ ಆಗಿ ನೀಡಿದ್ದಾರೆ.

ಬಾಲಿವುಡ್ ಬೆಡಗಿ ಆಲಿಯಾ ಭಟ್ ವಿಶ್ವವ್ಯಾಪಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಈ ಅಭಿಮಾನಿಗಳ ಪೈಕಿ ತೆಲುಗು ಖ್ಯಾತ ನಟ ಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರಾ ಕೂಡ ಒಬ್ಬರಾಗಿದ್ದಾರೆ. ಶೂಟಿಂಗ್ ಸಲುವಾಗಿ ಆಲಿಯಾ ಭಟ್ ಹೈದರಾಬಾದ್ ನಲ್ಲಿದ್ದು, ಸಿತಾರಾಗೆ ಡ್ರೆಸ್ ವೊಂದನ್ನು ನೀಡಿದ್ದು, ಅದು ನನಗೆ ತುಂಬಾ ಇಷ್ಟವಾಗಿದೆ ಎಂದು ಇನ್ಸ್ಟಾಗ್ರಾಂ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಸ್ಟಾರ್ ಕಿಡ್ ಸಿತಾರ.

ಇನ್ನೂ 2018 ವರ್ಷದ ನ್ಯೂಯಾರ್ಕ್ ನಲ್ಲಿ ಆಲಿಯಾ ಮತ್ತು ಸಿತಾರಾ ಇಬ್ಬರೂ ಭೇಟಿಯಾಗಿದ್ದರು. ಅಲ್ಲಿಂದ ಇಬ್ಬರೂ ಫ್ರೆಂಡ್ಸ್ ಆಗಿಬಿಟ್ಟಿದ್ದಾರಂತೆ. ಶೂಟಿಂಗ್ ನಿಮಿತ್ತ ಹೈದಾರಾಬಾದ್ ಗೆ ಬಂದಿರುವ ಆಲಿಯಾ ತಮ್ಮ ಪುಟ್ಟ ಸ್ನೇಹಿತೆಗಾಗಿ ಈ ಗಿಫ್ಟ್ ನೀಡಿದ್ದಾರೆ.

ಇನ್ನೂ ಈ ಕುರಿತು ಸಿತಾರಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ನನ್ನ ನೆಚ್ಚಿನ ನಟಿಯಿಂದ ನನಗೆ ಈ ಗಿಫ್ಟ್ ಸಿಕ್ಕಿದ್ದು, ಇದು ತುಂಬಾ ಮುದ್ದಾಗಿದೆ, ಈ ಡ್ರೆಸ್ ನೀಡಿದ್ದಕ್ಕಾಗಿ ಆಲಿಯಾ ಭಟ್ ರವರಿಗೆ ಧನ್ಯವಾದಗಳು, ನನಗೆ ತುಂಬಾ ಇಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ. ಮುಖ್ಯವಾಗಿ ಈ ಡ್ರೆಸ್ ಬ್ರಾಂಡ್ ಸ್ವತಃ ಆಲಿಯಾ ಪ್ರಾರಂಭಿಸಿದ ಪರಿಸರ ಸ್ನೇಹಿ ಬ್ರಾಂಡ್ ಗೇ ಸೇರಿದ್ದು, ಆಲಿಯಾ ಹೊಸ ಬುಸಿನೆಸ್ ಗೆ ಸಿತಾರ ಶುಭ ಕೋರಿದ್ದಾರೆ.

Trending

To Top