Film News

ರಾಜಮೌಳಿ ಆರ್.ಆರ್.ಆರ್. ನಲ್ಲಿ ಆಲಿಯಾ ಭಟ್ ಎಂಟ್ರಿ

ಹೈದರಾಬಾದ್: ಬಹುನಿರೀಕ್ಷಿತ ಪ್ಯಾನ್ ಇಂಡಿಯಾದಡಿ ಬಿಡುಗಡೆಯಾಗಲಿರುವ ಬಿಗ್ ಬಜೆಟ್ ಚಿತ್ರ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರಕ್ಕೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಎಂಟ್ರಿ ಕೊಟ್ಟಿದ್ದಾರೆ.

ಈಗಾಗಲೇ ಟ್ರೈಲರ್ ಗಳ ಮೂಲಕ ಪೋಸ್ಟರ್ ಗಳ ಮೂಲಕ ಕ್ರೇಜ್ ಹೆಚ್ಚಿಸಿರುವ ಆರ್.ಆರ್.ಆರ್. ಚಿತ್ರದಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ರಾಮ್ ಚರಣ್ ರವರಿಗೆ ನಾಯಕಿಯಾಗಿ ಸೀತಾ ಪಾತ್ರದಲ್ಲಿ ನಟಿ ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇನ್ನೂ ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಸಿನೆಮಾ ಚಿತ್ರೀಕರಣ ಭರದಿಮದ ಸಾಗಿದ್ದು, ಆಲಿಯಾ ಭಟ್ ರವರನ್ನು ರಾಜಮೌಳಿ ನಮ್ಮ ಪ್ರೀತಿಯಾ ಸೀತಾಗೆ, ಆರ್.ಆರ್.ಆರ್. ಚಿತ್ರದ ಸೆಟ್ ಗೆ ಸ್ವಾಗತ ಎಂದು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ನಟಿ ಆಲಿಯಾ ತೆಲುಗು ಸಿನೆಮಾದಲ್ಲಿ ನಟಿಸುವಂತಹ ಮೊದಲ ಚಿತ್ರ ಆರ್.ಆರ್.ಆರ್ ಆಗಿದ್ದು, ಈ ಚಿತ್ರದಲ್ಲಿ ಆಲಿಯಾ ಆಯ್ಕೆಯಾಗಿರುವ ಬಗ್ಗೆ ವಿಚಾರ ತಿಳಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರಂತೆ. ಜೊತೆಗೆ ಆಲಿಯಾ ಭಟ್ ರವರು ಈ ಪಾತ್ರವನ್ನು ಹೇಗೆ ಪೋಷಿಸಲಿದ್ದಾರೆ ಎಂದೂ ಸಹ ಕೆಲವರು ಕುತೂಹಲದಿಂದ ಕಾದಿದ್ದಾರೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸಿನೆಮಾ ಚಿತ್ರೀಕರಣ ಸ್ಥಗಿತಗೊಂಡಿದ್ದು, ಲಾಕ್ ಡೌನ್ ತೆರವಿನ ನಂತರ ಚಿತ್ರೀಕರಣ ಪ್ರಾರಂಭವಾಗಿದೆ.

Trending

To Top