ಚೆನೈ: ಹಾಲಿವುಡ್ನ ಪಾಪ್ ಸಿಂಗರ್ ಸಂಗೀತ ಲೋಕದ ಕಿಂಗ್ ಎಂತಲೇ ಕರೆಯುವ ಮೈಕಲ್ ಜಾಕ್ಸನ್ ರವರೊಂದಿಗೆ ತೆಗೆಸಿಕೊಂಡ ಪೊಟೋ ವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ಈ ಪೊಟೋ ಬಹಳಷ್ಟು ಹಿಂದಿನದ್ದಾಗಿದೆ.
ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಪಾಪ್ ಸಿಂಗರ್ ಮೈಕೆಲ್ ಜಾಕ್ಸನ್ ನಿಧನವಾಗಿ ಸುಮಾರು ದಶಕವೇ ಕಳೆದಿದೆ. ಇವರ ಅಭಿಮಾನಿಗಳ ಪೈಕಿ ತಮಿಳು ನಟ ಅಜಿತ್ ಸಹ ಒಬ್ಬರು. ಸುಮಾರು ವರ್ಷಗಳ ಹಿಂದೆ ಅಜಿತ್ ಕುಮಾರ್ ಹಾಗೂ ಅವರ ಕುಟುಂಬ ಮೈಕೆಲ್ ಜಾಕ್ಸನ್ ರವರೊಂದಿಗೆ ತೆಗೆಸಿಕೊಂಡ ಪೊಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಜಿತ್ ಅಭಿಮಾನಿಗಳು ಈ ಪೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಇನ್ನೂ ಈ ಪೊಟೋ ಯಾವಾಗ ತೆಗೆಯಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ ಆದರೆ ಮೈಕೆಲ್ ಜಾಕ್ಸನ್ ರವರೊಂದಿಗೆ ಅಜಿತ್ ಇರುವ ಪೊಟೋ ನೋಡಿ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ ಎನ್ನಲಾಗಿದೆ. ಸದ್ಯ ಈ ಪೊಟೋ ವೈರಲ್ ಆಗುತ್ತಿದೆ.
ನಟ ಅಜಿತ್ ಕುಮಾರ್ ವಲಿಮೈ ಎಂಬ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಜಿತ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಬಹುತೇಕ ಚಿತ್ರೀಕರಣ ಸಹ ಮುಕ್ತಾಯವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕೆಲವೊಂದು ಪ್ರಮುಖ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲು ಚಿತ್ರತಂಡ ತೀರ್ಮಾನ ಮಾಡಿದ್ದು, ಮುಂದಿನ ಚಿತ್ರೀಕರಣ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಎನ್ನಲಾಗಿದೆ.
