Film News

ಕೆಜಿಎಫ್-2 ಚಿತ್ರದ ಖಡಕ್ ಪೋಟೊ ಶೇರ್ ಮಾಡಿದ ಯಶ್

ಬೆಂಗಳೂರು: ಬಹುನಿರೀಕ್ಷಿತ ಚಿತ್ರ ಕೆಜಿಎಫ್-೨ ಸಿನೆಮಾ ಬಿಡುಗಡೆಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಯಶ್ ಒಂದು ಸರ್ಪೈಸ್ ಕೊಟ್ಟಿದ್ದಾರೆ. ಖಡಕ್ ಲುಕ್‌ನ ಪೋಟೋವೊಂದನ್ನು ಶೇರ್ ಮಾಡಿ ಅಭಿಮಾನಿಗಳ ಕ್ರೇಜ್ ಮತಷ್ಟು ಹೆಚ್ಚಿಸಿದ್ದಾರೆ.

ಪ್ಯಾನ್‌ಇಂಡಿಯಾ ಸಿನೆಮಾವಾಗಿ ಬಿಡುಗಡೆಯಾಗಲಿರುವ ಹೊಂಬಾಳೆ ಫಿಲಂ ಬ್ಯಾನರ್‌ನಡಿ ಮೂಡಿಬರುತ್ತಿರುವ ಕೆಜಿಎಫ್-೨ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ಸಹ ಹೈದರಾಬಾದ್‌ನಲ್ಲಿ ಚಿತ್ರೀಕರಣವಾಗುತ್ತದೆ. ಇನ್ನೂ ಯಶ್ ಹುಟ್ಟುಹಬ್ಬದಂದು ಚಿತ್ರದ ಮೊದಲ ಟೀಸರ್ ಸಹ ಬಿಡುಗಡೆ ಮಾಡಲಾಗುವುದು ಎಂದು ಈ ಹಿಂದೆ ಚಿತ್ರ ತಂಡ ಸಹ ಅನೌನ್ಸ್ ಮಾಡಿತ್ತು. ಇದೀಗ ಯಶ್ ಬ್ಲಾಕ್ ಕೋಟ್ ಧರಿಸಿ, ಅದಕ್ಕೆ ಹೋಲುವಂತಹ ಕನ್ನಡಕ ಧರಿಸಿ ಕೈಯಲ್ಲಿ ಗನ್ ಹಿಡಿದು ಖಡಕ್ ಪೋಸ್ ನೀಡಿ ರಾಕಿಂಗ್ ಸ್ಟಾರ್ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದ್ದಾರೆ.

ಇನ್ನೂ ಈ ಚಿತ್ರಕ್ಕೆ ಹೆಡಿಂಗ್ ಕೊಟ್ಟಿರುವ ಯಶ್ ಎಲ್ಲಾ ಒಳ್ಳೆಯ ವಿಚಾರಗಳು ಕೊನೆಗೊಳ್ಳುತ್ತವೆ, ಇದು ಕೆಜಿಎಫ್ ಚಿತ್ರದ ಕೊನೆಯ ಶೂಟಿಂಗ್ ಆಗಿರಬಹುದು ಆದರೆ ವಿಲನ್ ಎಂದಿಗೂ ಮುಂದುವರೆಯುತ್ತಾನೆ ಎಂದಿರುವುದು ಅಭಿಮಾನಿಗಳಲ್ಲಿ ಮತಷ್ಟು ಕಾತುರ ಮೂಡಿಸಿದ್ದಾರೆ.

Trending

To Top