Film News

ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್: ಆಚಾರ್ಯ ಟೀಸರ್ ಬಿಡುಗಡೆ ದಿನಾಂಕ ಬಹಿರಂಗ

ಹೈದರಾಬಾದ್: ಬಹುನಿರೀಕ್ಷಿತ ಸಿನೆಮಾ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇದೀಗ ಚಿತ್ರತಂಡದಿಂದ ಮೆಗಾ ಫ್ಯಾನ್ಸ್ ಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

ಮೆಗಾಸ್ಟಾರ್ ಅಭಿನಯದ ಆಚಾರ್ಯ ಚಿತ್ರದ ಟೀಸರ್ ದಿನಾಂಕವನ್ನು ಘೋಷಣೆ ಮಾಡುವ ಮೂಲಕ ಮೆಗಾ ಅಭಿಮಾನಿಗಳ ದಿಲ್ ಖುಷ್ ಮಾಡಿದೆ ಚಿತ್ರತಂಡ. ಜ.29, 2021 ರ ಸಂಜೆ 4.05 ನಿಮಿಷಕ್ಕೆ ಆಚಾರ್ಯ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರ ಶೂಟಿಂಗ್ ಪ್ರಾರಂಭವಾದಾಗಿನಿಂದ ಚಿರಂಜೀವಿ ಯವರ ಪೋಸ್ಟರ್ ಒಂದು ಬಿಟ್ಟರೇ ಇತರೇ ಯಾವುದೇ ಅಪ್ಡೇಟ್ ಬಹಿರಂಗವಾಗಿರಲಿಲ್ಲ. ಇದೀಗ ಟೀಸರ್ ಮೂಲಕ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ನೀಡಲಾಗುತ್ತಿದೆ.

ಟೀಸರ್ ಬಿಡುಗಡೆ ಕುರಿತಂತೆ ನಟ ಚಿರಂಜೀವಿ ಹಾಗೂ ನಿರ್ದೇಶಕ ಕೊರಟಾಲ ಶಿವ ಇವರಿಬ್ಬರ ನಡುವೆ ಫನ್ನಿ ಟ್ವೀಟ್ ನಡೆದಿದೆ. ಟೀಸರ್ ನೀವು ರಿಲೀಸ್ ಮಾಡುತ್ತೀರೋ, ಇಲ್ಲ ನಾನೇ ಲೀಕ್ ಮಾಡಬೇಕೆ ಎಂದು ಚಿರು ಕೊರಟಾಲ ಶಿವ ಕಾಲೆಳಿದ್ದಾರೆ. ಇದಕ್ಕೆ ಉತ್ತರಿಸಿದ ಶಿವ ರಿಲೀಸ್ ಡೇಟ್ ರಿವೀಲ್ ಮಾಡಿ ಹ್ಯಾಷ್ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಚಿರು ಸಹ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ಆಚಾರ್ಯ ಚಿತ್ರದಲ್ಲಿ ಬಹುಬೇಡಿಕೆ ನಟಿ ಕಾಜಲ್ ಅಗರ್ವಾಲ್ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಖಳನಾಯಕನಾಗಿ ಸೋನು ಸೂದ್ ಮತ್ತೊಬ್ಬ ಖಳನಾಯಕನಾಗಿ ಸ್ಯಾಂಡಲ್‌ವುಡ್‌ನ ಭಜರಂಗಿ ಚಿತ್ರದ ಲೋಕಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Trending

To Top