Film News

ಆಚಾರ್ಯ ಚಿತ್ರದ ನ್ಯೂ ಪೋಸ್ಟರ್ ರಿಲೀಸ್: ವೈರಲ್

ಹೈದರಾಬಾದ್: ಬಹುನಿರೀಕ್ಷಿತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರ ಪ್ರಸಕ್ತ ವರ್ಷದ ಮೇ ಮಾಹೆಯಲ್ಲಿ ತೆರೆಗೆ ಬರಲಿದ್ದು, ಶೂಟಿಂಗ್ ಕೆಲಸಗಳು ಭರದಿಂದ ಜರುಗುತ್ತಿದೆ. ಇದೀಗ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವ ರಾಮ್ ಚರಣ್ ತೇಜ್ ರವರ ಹೊಸ ಪೋಸ್ಟರ್ ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬಿಡುಗಡೆಯಾದ ಪೋಸ್ಟರ್ ನಲ್ಲಿ ರಾಮ್ ಚರಣ್ ಭುಜದ ಮೇಳೆ ಮೆಗಾಸ್ಟಾರ್ ಚಿರಂಜೀವಿ ಕೈ ಹಾಕಿದ್ದಾರೆ. ಅವರು ಮುಂದೆ ಎ.ಕೆ.47 ನಂತಹ ಗನ್ ಸಹ ಒಂದಿದೆ. ಈ ಪೋಸ್ಟರ್ ಗಮನಿಸಿದರೇ ಸಿನೆಮಾದ  ದೃಶ್ಯವೊಂದರಲ್ಲಿ ಇಬ್ಬರ ಪೈಟಿಂಗ್ ಸೀನ್ ಇದಾಗಲಿದೆ ಎನ್ನಬಹುದಾಗಿದೆ. ಅಷ್ಟೇ ಅಲ್ಲದೇ ಈ ಪೋಸ್ಟರ್‌ಗೆ ರಾಮ್ ಚರಣ್ ತಂದೆಯೊಂದಿಗೆ ಮಾಡುತ್ತಿರುವ ಪ್ರತಿಯೊಂದು ಮೂಮೆಂಟ್ ಎಂಜಾಯ್ ಮಾಡುತ್ತಿದ್ದೇನೆ ಎಂದು ಟ್ವೀಟ್ ಸಹ ಮಾಡಿದ್ದು, ತನ್ನ ತಂದೆಯೊಂದಿಗೆ ಸಿನೆಮಾ ಕೆಲಸಗಳಲ್ಲಿನ ಅನುಭವವನ್ನು ಒಂದು ವಾಕ್ಯದಲ್ಲಿ ತಿಳಿಸಿದ್ದಾರೆ.

ಆಚಾರ್ಯ ಚಿತ್ರದಲ್ಲಿ ಮೊದಲಿಗೆ ಚರಣ್ ಪಾತ್ರ ಕೇವಲ 30 ನಿಮಿಷಗಳ ಅತಿಥಿ ಪಾತ್ರ ಮಾತ್ರ ಎಂದುಕೊಂಡಿದ್ದರು. ಆದರೆ ಚಿರಂಜೀವಿಯವರ ಸಲಹೆ ಮೇರೆಗೆ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದು, ಸ್ಟೂಡೆಂಟ್ ಲೀಡರ್ ಆಗಿ ಚರಣ್ ಪಾತ್ರ ಪೋಷಣೆ ಮಾಡಲಿದ್ದಾರೆ. ಸಿನೆಮಾದ ಎರಡನೇ ಭಾಗದಲ್ಲಿ ಚರಣ್ ಕಾಣಿಸಿಕೊಳ್ಳಲಿದ್ದು, ಸಿನೆಮಾ ಮುಕ್ತಾಯದ ವರೆಗೂ ಚರಣ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾನೆ ಎನ್ನಲಾಗಿದೆ. ಮೂಲಗಳ ಪ್ರಕಾರ ಚರಣ್ ಪಾತ್ರ 1 ಗಂಟೆಗೂ ಹೆಚ್ಚಿನ ಸಮಯ ಚಿತ್ರದಲ್ಲಿರುತ್ತಾರಂತೆ.

ಇನ್ನೂ ಚರಣ್ ಹಾಗೂ ಚಿರು ಇಬ್ಬರೂ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳಲಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಇನ್ನೂ ಕೇವಲ ಆಕ್ಷನ್ ಸೀನ್ ಮಾತ್ರವಲ್ಲದೇ, ಇಬ್ಬರೂ ಸ್ಪೇಷಲ್ ಸಾಂಗ್ ಒಂದಕ್ಕೆ ಸ್ಟೆಪ್ಸ್ ಸಹ ಹಾಕಲಿದ್ದಾರೆ ಎನ್ನಲಾಗಿದೆ. ಇನ್ನೂ ಆಚಾರ್ಯ ಚಿತ್ರ ಮೇ.೧೪ ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Trending

To Top