ಟಾಲಿವುಡ್ ನಲ್ಲಿ ಬಹುನಿರೀಕ್ಷೆ ಹುಟ್ಟಿಸಿದ ಸಿನೆಮಾ ಮೆಗಾಸ್ಟಾರ್ ಅಭಿನಯದ ಆಚಾರ್ಯ. ಸಿನೆಮಾದಲ್ಲಿ ಬರುವ ದೇವಾಲಯದ ಸೆಟ್ ಗಾಗಿಯೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು. ಆದರೆ ಈ ಸಿನೆಮಾ ಮಕಾಡೆ ಮಲಗಿ ಸಿನೆಮಾ ವಿತರಕರಿಗೆ ಬಹಳ ನಷ್ಟ ತಂದುಕೊಟ್ಟಿದೆ. ಇತ್ತೀಚಿಗೆ ಡಿಸ್ಟ್ರಿಬ್ಯೂಟರ್ ಒಬ್ಬರೂ ಸಹ ಸಿನೆಮಾದಿಂದ ನಷ್ಟವಾಗಿದೆ ನಷ್ಟ ತುಂಬಿಕೊಡಿ ಎಂದು ಬರೆದ ಪತ್ರ ಸಹ ಸಖತ್ ವೈರಲ್ ಆಗಿತ್ತು.
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸಿನೆಮಾ ಎಂದರೇ ದೊಡ್ಡ ಮಟ್ಟದಲ್ಲೇ ನಿರೀಕ್ಷೆಯಿರುತ್ತದೆ. ಆದರೆ ಆಚಾರ್ಯ ಸಿನೆಮಾ ಮಾತ್ರ ದೊಡ್ಡ ಮಟ್ಟದಲ್ಲೇ ನಷ್ಟ ತಂದುಕೊಟ್ಟಿದೆ. ಇನ್ನೂ ಈ ಸಿನೆಮಾದಲ್ಲಿ ನಟ ಚಿರಂಜೀವಿ ಹಾಗೂ ರಾಮ್ ಚರಣ್ ಇಬ್ಬರೂ ನಟಿಸಿದ್ದಾರೆ. ಈ ಕಾರಣದಿಂದ ಸಿನೆಮಾದ ಮೇಲೆ ದೊಡ್ಡ ಮಟ್ಟದಲ್ಲೇ ಕ್ರೇಜ್ ಹೆಚ್ಚಿಸಿಕೊಂಡಿದ್ದರು. ಆದರೆ ಸಿನೆಮಾ ಬಿಡುಗಡೆಯಾದ ಬಳಿಕ ಅಂದುಕೊಂಡ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ಸಿನಿಮಾ ವಿತರಕರು ತುಂಬಾ ನಷ್ಟ ಅನುಭವಿಸಿದ್ದಾರೆ.
ಇತ್ತೀಚಿಗಷ್ಟೆ ಸಿನೆಮಾ ವಿತರಕರು ನಮಗೆ ಸಿನೆಮಾದಿಂದ ದೊಡ್ಡ ಮಟ್ಟದಲ್ಲೇ ನಷ್ಟಾಗಿದೆ. ಸಿನೆಮಾ ಕೊಂಡ ಅರ್ಧದಷ್ಟು ಹಣ ಸಹ ಬಂದಿಲ್ಲ. ನಮಗೆ ನಷ್ಟ ಪರಿಹಾರ ನೀಡಬೇಕೆಂದು ಸಿನೆಮಾದ ನಿರ್ಮಾಪಕ ರಾಮ್ ಚರಣ್ ಹಾಗೂ ನಟ ಚಿರಂಜೀವಿ ರವರಿಗೆ ಪತ್ರ ಸಹ ಬರೆದಿದ್ದರು. ಇನ್ನೂ ಇದಕ್ಕೆ ಸ್ಪಂಧಿಸಿದ ಚಿರಂಜೀವಿ ಮತ್ತು ರಾಮ್ ಚರಣ್ ಸಿನೆಮಾದಿಂದ ಆದ ನಷ್ಟವನ್ನು ತುಂಬಿಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಕೆಲವು ವಿತರಕರಿಗೆ ಮಾತ್ರ ನಷ್ಟ ತುಂಬಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಚಿರಂಜೀವಿ ಯವರು ಅಮೇರಿಕಾ ಪ್ರವಾಸದಲ್ಲಿದ್ದಾರೆ. ಕುಟುಂಬದೊಂದಿಗೆ ಅಮೇರಿಕಾದಲ್ಲಿ ಕಾಲ ಕಳೆಯುತ್ತಿದ್ದಾರೆ. ಆಚಾರ್ಯ ವಿತರಕರು ನಷ್ಟದ ಕುರಿತು ಪತ್ರ ಬರೆದಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಹಾಯ ಮಾಡುವ ನಿಟ್ಟಿನಲ್ಲಿ ಚಿರಂಜೀವಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ವಿತರಕರು ಎಲ್ಲೆಲ್ಲಿ ಎಷ್ಟು ನಷ್ಟ ಅನುಭವಿಸಿದ್ದಾರೆ ಎಂಬ ಮಾಹಿತಿ ಪಡೆದು ಹೆಚ್ಚು ನಷ್ಟ ಕಂಡ ವಿತರಕರಿಗೆ ಸಹಾಯ ಮಾಡಲು ಚಿರು ಹಾಗೂ ಚರಣ್ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಿನೆಮಾದ ಒಟ್ಟು ಬಜೆಟ್ 132 ಕೋಟಿ ಯಾಗಿದ್ದು ಅರ್ಧದಷ್ಟು ಸಹ ಕಲೆಕ್ಷನ್ ಮಾಡಿಲ್ಲ. ಅನೇಕ ಚಿತ್ರಮಂದಿರಗಳಲ್ಲಿ ಸಿನೆಮಾ ಸಹ ತೆಗೆದು ಹಾಕಿದ್ದಾರೆ. ಸದ್ಯ ಚಿರಂಜೀವಿ ಅಮೇರಿಕಾದಿಂದ ವಾಪಸ್ಸಾದ ಬಳಿಕ ವಿತರಕರ ನಷ್ಟ ಪರಿಹಾರದ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ.