Cinema

ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಪುಣ್ಯ ಎಂದು ಡಿಬಾಸ್ ಗೆ ಹೇಳಿದ ಅಭಿಷೇಕ್ ಅಂಬರೀಷ್!

ಇಂದು ಆಗಸ್ಟ್ 11ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಜರ್ನಿ ಆರಂಭವಾಗಿ 23 ವರ್ಷ ಪೂರ್ಣವಾಗಲಿದೆ. 23 ವರ್ಷಗಳಲ್ಲಿ ಅವರ ಜೇವನದಲ್ಲಿ ಆಗಿರುವ ಬದಲಾವಣೆಗಳು ಅಪಾರ. ಇಂದು ದರ್ಶನ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ದರ್ಶನ್ ಆಚಾರ ಈ 23 ವರ್ಷಗಳ ಸಾಧನೆಯನ್ನು ಅವರ ಅಭಿಮಾನಿಗಳು ಟ್ವಿಟರ್ ಟ್ರೆಂಡ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. 23 ವರ್ಷದ ಸಾಧನೆಗೆ #23ofBossism ಎನ್ನುವ ಹ್ಯಾಶ್ ಟ್ಯಾಗ್ ಶುರು ಮಾಡಿ ಪೋಸ್ಟ್ ಮಾಡುತ್ತಿದ್ದಾರೆ ನಟ ದರ್ಶನ್ ಅವರ ಅಭಿಮಾನಿಗಳು. ಈ ಸಂಭ್ರಮಕ್ಕೆ ಕಾಮನ್ ಡಿಪಿ ಗಳನ್ನು ಸ್ಯಾಂಡಲ್ ವುಡ್ ನ ನಟರು ಹಾಗೂ ನಿರ್ದೇಶಕರಿಂದ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಅವರು ದರ್ಶನ್ ಅವರ ಫೋಟೋ ಒಂದನ್ನು ಪೋಸ್ಟ್ ಮಾಡಿ, ಅಣ್ಣನ ಬಗ್ಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ.
“ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ. 23 ವರ್ಷಗಳಲ್ಲಿ ನೀವು ಮಾಡಿದ ಅತ್ಯುತ್ತಮ ಕೆಲಸ, ಸಾಧನೆಗೆ ಅಭಿನಂದನೆಗಳು. ನಿಮ್ಮನ್ನು ಅಣ್ಣಾ ಎಂದು ಕರೆಯುವುದು ಗೌರವ ಮತ್ತು ಹೆಮ್ಮೆ ತಂದುಕೊಡುತ್ತೆ. ಇಂದಿನ ಸಂಭ್ರಮ ನಿಮ್ಮ ಎಲ್ಲ ಪ್ರೀತಿಯ ಅಭಿಮಾನಿಗಳಿಗೆ ಖುಷಿ ನೀಡಿದೆ. ನಿಮ್ಮಂತ ಸೀನಿಯರ್ ಇನ್ನೊಬ್ಬರು ಇಲ್ಲ..” ಎಂದು ಪೋಸ್ಟ್ ಮಾಡಿ, ಅಣ್ಣನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ ಅಭಿಷೇಕ್. ಅಭಿಷೇಕ್ ಮಾತ್ರವಲ್ಲದೇ ನಿರ್ದೇಶಕ ತರುಣ್, ನೆನಪಿರಲಿ ಪ್ರೇಮ್ ಸೇರಿದಂತೆ ಅನೇಕರು ದರ್ಶನ್‍ ಅವರ ಸಾಧನೆಯನ್ನು ನೆನೆದು ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಎಸ್.ನಾರಾಯಣ್ ನಿರ್ದೇಶನ ‘ಮಹಾಭಾರತ’ ಸಿನಿಮಾದಲ್ಲಿ ದರ್ಶನ ಅವರು ಮೊದಲ ಸಲ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ 1997 ಆಗಸ್ಟ್ 11 ರಂದು ತೆರೆಕಂಡಿತ್ತು. ಇಂದು ಈ ಸಿನಿಮಾ ಬಿಡುಗಡೆಯಾಗಿ 23 ವರ್ಷ ಆಗಲಿದೆ. ಇದರ ನಂತರ ‘ದೇವರ ಮಗ’, ‘ಎಲ್ಲರ ಮನೆ ದೋಸೆನೂ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ನಟಿಸಿದ್ದರು ದರ್ಶನ್. 2002ರಲ್ಲಿ ‘ಮೆಜೆಸ್ಟಿಕ್’ ಸಿನಿಮಾ ಮೂಲಕ ಮೊದಲ ಸಾರಿ ನಾಯಕನಾಗಿ ನಟಿಸಿದರು.ಇಂದು ಆಗಸ್ಟ್ 11ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಜರ್ನಿ ಆರಂಭವಾಗಿ 23 ವರ್ಷ ಪೂರ್ಣವಾಗಲಿದೆ. 23 ವರ್ಷಗಳಲ್ಲಿ ಅವರ ಜೇವನದಲ್ಲಿ ಆಗಿರುವ ಬದಲಾವಣೆಗಳು ಅಪಾರ. ಇಂದು ದರ್ಶನ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ದರ್ಶನ್ ಆಚಾರ ಈ 23 ವರ್ಷಗಳ ಸಾಧನೆಯನ್ನು ಅವರ ಅಭಿಮಾನಿಗಳು ಟ್ವಿಟರ್ ಟ್ರೆಂಡ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.

Trending

To Top