(video)ಈ ಅಭಿಮಾನಿಯ ಮಾತನ್ನು ‘ಅಂಬಿ’ ಒಮ್ಮೆ ಕೇಳಬೇಕಿತ್ತು! ಕಣ್ಣೀರು ಬರುವ ವಿಡಿಯೋ

c1
c1

ಇವನು ನೆಚ್ಚಿನ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪಕ್ಕಾ ಅಭಿಮಾನಿ! ಇವನ ಅಂಗಡಿಯಲ್ಲಿ ಕಾಣಿಸಿವುದು ಬರಿ ಅಂಬಿ ಫೋಟೋಗಳು, ಅಂಬಿ ಕುರಿತಾದ ಲೇಖನಗಳು, ಅಂಬಿಯ ಚಿತ್ರಗಳ ಪೋಸ್ಟರ್ ಗಳು. ಈ ಅಭಿಮಾನಿಯೇ ಅಂಗಡಿಯಲ್ಲಿ ಅಂಬಿಯ ವರ್ಣನೆ ಪದಗಳು ಕಾಣುತ್ತವೆ. ಈ ಅಭಿಮಾನಿಯೇ ಹೆಸರು ಪರಮೇಶ್! ಅಂಬಿಗೋಸ್ಕರ ಡೈಲಾಗ್ ಗಳು ಬರೆದಿದ್ದರು ಈ ಅಭಿಮಾನಿ. ಅಂಬಿಯ ಪಕ್ಕಾ ಅಭಿಮಾನಿಯೇ ಮಾತುಗಳನ್ನು ನೀವು ಕೇಳಲೇಬೇಕು ಕಣ್ರೀ! (video)ಈ ಅಭಿಮಾನಿಯ ಮಾತನ್ನು ‘ಅಂಬಿ’ ಒಮ್ಮೆ ಕೇಳಬೇಕಿತ್ತು! ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ, ಈ ಕೆಳಗಿನ ವಿಡಿಯೋ ನೋಡಿರಿ
ನಮ್ಮ ರೆಬೆಲ್ ಸ್ಟಾರ್ ಅಂಬಿ ಗೆ ಅಂಬಿನೇ ಸಾಟಿ ಕಣ್ರೀ! ಅಂಬಿಯನ್ನು ರಿಪ್ಲೇಸ್ ಮಾಡಲು ಯಾವ ನಟ ಯಾವ ವ್ಯಕ್ತಿ ಯಿಂದ ಕೂಡ ಸದ್ಯ ಇಲ್ಲ! ಅಂಬಿ ನಡೆದು ಬಂದಿದ್ದೆ ದಾರಿ, ಅವರು ಇಟ್ಟಿದ್ದೆ ಹೆಜ್ಜೆ ಕಣ್ರೀ! ಅಂಬಿ ಅವರ ಈ ಅದ್ಭುತ ಕೊನೆಯ ಸಂದರ್ಶನ ನೀವು ನೋಡಲೇ ಬೇಕು ಕಣ್ರೀ! ಕಣ್ಣೀರು ಬರುತ್ತೆ! ರೆಬಲ್ ಸ್ಟಾರ್ ಅಂಬರೀಷ್ ಅವರ ನಿಜವಾದ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಎಂದು ಅವರು ಜನಿಸಿದ್ದು 29 ಮೇ 1952 ಮಂಡ್ಯ ಜಿಲ್ಲೆಯ ದೊಡ್ಡ ಅರಸೀಕೆರೆ. ತಂದೆ ಹುಚ್ಚೇಗೌಡ ಮತ್ತು ತಾಯಿ ಪದ್ಮಮ್ಮ. ತಮ್ಮ ಪ್ರಾಥಮಿಕ ವಿದ್ಯಾಬ್ಯಾಸ ವನ್ನೂ ಮಂಡ್ಯದಲ್ಲಿ ಮುಗಿಸಿಕೊಂಡು,ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದರು ಅಂಬರೀಶ್ ಅವರು, 1991 ರಲ್ಲಿ ಕನ್ನಡದ ನಟಿ ಸುಮಲತಾ ಅವರನ್ನು ಮದುವೆ ಆದರು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಚಿತ್ರರಂಗಕ್ಕೆ 1972 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು ಅಂಬಿ ಅವರು, ಹಾಗೂ ಈ ಸಿನಿಮಾದಲ್ಲಿ ಅವರು ಖಳ ನಾಯಕನ ಪಾತ್ರ ನಿರ್ವಹಿಸಿ ಹೆಸರು ಮಾಡಿದರು. ಅಮರ್ ಅಕ್ಬರ್ ಆಂಥೋನಿ, ಹೃದಯ ಹಾಡಿತು ಪಡುವಾರಳ್ಳಿ ಪಾಂಡವರು, ಮಸಣದ ಹೂವು, ರಂಗನಾಯಕಿ ಹೀಗೆ ಪ್ರಸಿದ್ಧ ಕನ್ನಡ ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ನಟಿಸಿ ಕನ್ನಡ ಚಿತ್ರ ರಂಗದ ರೆಬಲ್ ಸ್ಟಾರ್ ಆದರೂ.
ಮಂಡ್ಯದ ಗಂಡು, ಕಲಿಯುಗದ ಕರ್ಣ ಎಂಬ ಬಿರುದು ಗಳನ್ನು ತಮ್ಮ ಮುಡಿಗೆರಿಸಿ ಕೊಂಡರು. ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಶ್ ಅವರನ್ನು ಗುರುತಿಸಿ 2013ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು… ಇನ್ನು ಅವರ ರಾಜಕೀಯ ಕ್ಷೇತ್ರ: ಚಿತ್ರರಂಗದಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ರೆಬಲ್ ಅಂಬಿ ಅವರು, ಜನತಾದಳದ ಮೂಲಕ ರಾಜಕೀಯ ಪ್ರವೇಶ ಮಾಡಿದರು. ನಂತರ ಅವರು ನೆಲೆ ನಿಂತದ್ದು ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ. ಹಾಗೂ ಅವರು ಇಲ್ಲಿಯ ವರೆಗೂ ಶಾಸಕ, ಸಂಸದ, ರಾಜ್ಯ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ಹೀಗೆ ಎರಡೂ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಅವರು ಅಸಂಖ್ಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ, ಮತ್ತು ಅವರ ಒಬ್ಬನೇ ಮಗನಾದ ಅಭಿಷೇಕ್ ಅವರು ಕೂಡ ಸಿನೆಮಾ ರಂಗಕ್ಕೆ ಕಾಲಿಟ್ಟಿದ್ದಾರೆ.

Previous article(video)ದಿ ವಿಲನ್ ಚಿತ್ರದ ಟಿಕ್ ಟಿಕ್ ಹಾಡಿನ HD ವಿಡಿಯೋ ಬಿಡುಗಡೆ ಆಗಿ ವೈರಲ್ ಆಗಿದೆ, ವಿಡಿಯೋ ನೋಡಿ
Next article(video)ತಮ್ಮ ಮತ್ತು ಅಂಬಿ ಅವರ ಮಧ್ಯೆ ಇದ್ದ ಗೆಳೆತನದ ಬಗ್ಗೆ ಮಾತಾಡಿದ ಅನಿಲ್ ಕುಂಬ್ಳೆ! ವಿಡಿಯೋ ನೋಡಿ