HomeNewsಅಂಬರೀಷ್ ಅವರ ಮಗ ಅಭಿಷೇಕ್ ಹೇಗಿದ್ದವರು ಈಗ ಇಷ್ಟು ಸ್ಮಾರ್ಟ್ ಹೇಗೆ ಆಗಿದ್ದಾರೆ ಗೊತ್ತ?

ಅಂಬರೀಷ್ ಅವರ ಮಗ ಅಭಿಷೇಕ್ ಹೇಗಿದ್ದವರು ಈಗ ಇಷ್ಟು ಸ್ಮಾರ್ಟ್ ಹೇಗೆ ಆಗಿದ್ದಾರೆ ಗೊತ್ತ?

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರನಾದ ಅಭಿಷೇಕ್ ಅಂಬರೀಷ್ ಅವರು ಸದ್ಯ ತಮ್ಮ ಮೊಟ್ಟ ಮೊದಲ ಕನ್ನಡ ಚಿತ್ರ ಅಮರ್ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಅಂಬಿ ಅವರ ನಿಧನದ ಸಮಯದಲ್ಲಿ ಶೂಟಿಂಗ್ ಕೆಲವು ದಿನಗಳ ಕಾಲ ಸ್ಥಗಿತ ಗೊಂಡಿತ್ತು ಆದರೆ ಈಗ ಮತ್ತೆ ಶುರು ಆಗಿದೆ. ನಮ್ಮ ಅಭಿಷೇಕ್ ಅಂಬರೀಷ್ ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಬಹಳ ದಪ್ಪಗಿದ್ದರು. ದೂರದ ಅಮೇರಿಕಾದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಅಭಿಷೇಕ್ ಅವರಿಗೆ ಸಿನೆಮಾಗಳ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ತಮ್ಮ education , ಫ್ರೆಂಡ್ಸ್, ಪಾರ್ಟಿ ಮಾಡಿಕೊಂಡು ಜೀವನದಲ್ಲಿ ಆರಾಮಾಗಿ ಎಂಜಾಯ್ ಮಾಡುತ್ತಿದ್ದರು. ಆದರೆ ತಮ್ಮ ವಿದ್ಯಾಭ್ಯಾಸ ಮುಗಿಸಿದ ಅಭಿಷೇಕ್ ಅವರು ಭಾರತಕ್ಕೆ ವಾಪಾಸ್ ಆದರು, ಸ್ವಲ್ಪ ದಿನಗಳ ಕಾಲ ಮನೆಯಲ್ಲಿ ತಂದೆ ತಾಯಿ ಜೊತೆ ಕಾಲ ಕಳೆದರು. ಅಭಿಷೇಕ್ ಅಂಬರೀಷ್ ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ಹೇಗಿದ್ದರೂ ಗೊತ್ತ? ಈ ಕೆಳಗಿನ ಫೋಟೋಗಳು ನೋಡಿರಿ
ಇದಾದ ನಂತರ ಎಂದೂ ಇಲ್ಲದ ಆಸೆ ಒಂದು ಅಭಿಷೇಕ್ ಅವರಿಗೆ ಬಂತು. ಅದೇ ತಾನು ಕೂಡ ತಂದೆ ಯಂತೆ ಒಬ್ಬ ನಟನಾಗಬೇಕು ಅಂತ. ಇದಕ್ಕಾಗಿ ಅಭಿಷೇಕ್ ಅಂಬರೀಷ್ ಅವರು ಸುಮಾರು 1 ವರ್ಷಗಳ ಕಾಲ ಕಷ್ಟ ಪಟ್ಟು ಜಿಮ್ ಮಾಡಿ ತಮ್ಮ ದೇಹದ ತೂಕವನ್ನು ಇಳಿಸಿಕೊಂಡರು. ಸುಮಾರು 1 ವರ್ಷಗಳ ಕಾಲ ಅಭಿಷೇಕ್ ಅವರು ಅನ್ನವನ್ನು ಮುಟ್ಟದೆ, ಕಟ್ಟು ನಿಟ್ಟಾಗಿ ಊಟ ಮಾಡಿ ತಮ್ಮ ದೇಹವನ್ನು tone ಮಾಡಿಕೊಂಡರು. ಒಂದು ಕಾಲದಲ್ಲಿ ಅಭಿಷೇಕ್ ಅವರು ಬರೋಬ್ಬರಿ 110 KG ಇದ್ದರು. ತಮ್ಮ ತೂಕವನ್ನು ಇಳಿಸಿದ ನಂತರ ಅಭಿಷೇಕ್ ಅವರು ತಮ್ಮ ತಂದೆ ತಾಯಿಗೆ ನಾನು ಸಿನಿಮಾ ದಲ್ಲಿ ನಟನೆ ಮಾಡಬೇಕು ಎಂದೂ ಹೇಳಿದ್ದಾರೆ, ಇದಕ್ಕೆ ಆಶ್ಚರ್ಯ ದಿಂದ ಅಂಬಿ ದಂಪತಿ ಖುಷಿ ಪಟ್ಟು ಒಪ್ಪಿಗೆ ಕೊಟ್ಟಿದ್ದರು.
ಇದಾದ ನಂತರ ಅಭಿಷೇಕ್ ಅಂಬರೀಷ್ ಅವರು ಬರೋಬ್ಬರಿ 6 ತಿಂಗಳ ಕಾಲ ಸಿನಿಮಾ ನಟನೆ ತರಬೇತಿ ಯನ್ನು ಪಡೆದರು. ನಟನೆ ತರಬೇತಿ ಆದ ಮೇಲೆ ಸಿನಿಮಾ ಡಾನ್ಸ್ ತರಬೇತಿ ಯನ್ನು ನಮ್ಮ ಬೆಂಗಳೂರಿನಲ್ಲೇ ಪಡೆದರು. ಇದಾದ ನಂತರ ಅಭಿಷೇಕ್ ಅವರು ಫೈಟಿಂಗ್ ತರಬೇತಿ ಯನ್ನು ಪಡೆದರು. ಈಗ ಅಭಿಷೇಕ್ ಅಂಬರೀಷ್ ಅವರು ಕನ್ನಡದ ಒಬ್ಬ ಸಕತ್ HANDSOME HUNK ಎಂದೇ ಹೇಳಬಹುದು. ತನ್ನ ಮೊದಲ ಚಿತ್ರ ಅಮರ್ ಚಿತ್ರಕ್ಕಾಗಿ ಬಹಳಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಅಮರ್ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್ ಅಂಬರೀಷ್ ಅವರ ಈ ಸಾಧನೆಯನ್ನು ಮೆಚ್ಚಲೇ ಬೇಕು! ಅಂಬರೀಷ್ ಅವರು ನಿಧನ ರಾದಮೇಲೆ ಕೇವಲ ಒಂದೇ ವಾರ ರೆಸ್ಟ್ ಮಾಡಿ ಪುನಃ ಚಿತ್ರೀಕರಣ ಶುರು ಮಾಡಿದರು ಅಭಿಷೇಕ್ ಅಂಬರೀಷ್. ಇವರ ಹಾರ್ಡ್ ವರ್ಕ್ ಗೆ ಒಂದು ಸಲಾಂ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

You May Like

More