ತಂದೆಯ ಆದರ್ಶಗಳನ್ನು ಶಿಸ್ತಾಗಿ ಪಾಲಿಸುತ್ತಿರುವ ಅಂಬಿ ಮಗ ಅಭಿಷೇಕ್! ಇವರಿಗೆ ಒಂದು ಸಲಾಂ

amar4
amar4

ನಿಮಗೆಲ್ಲ ಗೊತ್ತಿರೋ ಹಾಗೆ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಮ್ಮೆನ್ನೆಲ್ಲ ಆಗಲಿ ಸುಮಾರು 3 ವಾರಗಳೇ ಕಳೆದಿವೆ. ಅಂಬಿ ಅವರ ಮಡದಿ ಸುಮಲತಾ, ಮಗ ಅಭಿಷೇಕ್, ಹಾಗು ಕನ್ನಡಿಗರು ಇನ್ನೂ ಈ ನೋವಿನಿಂದ ಆಚೆ ಬರಲು ಸಾಧ್ಯ ವಾಗುತ್ತಿಲ್ಲ. ಇತ್ತೀಚಿಗೆ ಅಷ್ಟೇ ಅಂಬಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಕೂಡ ನಡೆಯಿತು. ಅದಾದ ನಂತರ ಅಂಬರೀಷ್ ಅವರ ಆಸ್ತಿಯನ್ನು ಮಗನಾದ ಅಭಿಷೇಕ್ ಅವರು ಶ್ರೀರಂಗಪಟ್ಟಣದ ನದಿಯಲ್ಲಿ ವಿಸರ್ಜನೆ ಮಾಡಿದರು. ಇದಲ್ಲದೆ ಬೆಂಗಳೂರಿನಲ್ಲಿ ಅಂಬಿ ಅಭಿಮಾನಿಗಳಿಗೆ ಸ್ವತಃ ತಾವೆ ಬಡಿಸಿ ಅವರಿಗೆಲ್ಲ ಅನ್ನ ದಾನ ಮಾಡಿದರು.
ಈಗ ಅಭಿಷೇಕ್ ಅವರು ತಮ್ಮ ತಂದೆ ಅಂಬರೀಷ್ ಅವರ ಎಲ್ಲಾ ಕಾರ್ಯಗಳನ್ನು ಮಾಡಿ ಮುಗುಸಿ ಮತ್ತೆ ತಮ್ಮ ಹೊಸ ಚಿತ್ರ ಅಮರ್ ಶೂಟಿಂಗ್ ಗೆ ವಾಪಾಸ್ ಆಗಿದ್ದಾರೆ. ಎಲ್ಲಾ ಕಾರ್ಯಗಳನ್ನು ಮುಗಿಸಿ ಕೇವಲ ಮೂರು ದಿನ ರೆಸ್ಟ್ ತೆಗೆದುಕೊಂಡು ಅಭಿಷೇಕ್ ಅವರು ಶೂಟಿಂಗ್ ಗೆ ಬಂದಿದ್ದಾರೆ. ಇದೆ ಪರಿಸ್ಥಿತಿ ಅಂಬಿ ಅವರಿಗೆ ಕೂಡ ಆಗಿತ್ತು. ಅಂಬಿ ಅವರು ಪಡುವಾರಳ್ಳಿ ಪಾಂಡವರು ಎಂಬ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಂಬಿ ಅವರ ತಂದೆ ಹುಚ್ಚೇಗೌಡ್ರು ನಿಧಾನ ರಾಗಿದ್ದರು. ಅಂಬಿ ಅವರು ಕೂಡ ಕೆಲವೇ ಕೆಲವು ದಿನಗಳ ಬಳಿಕ ಮತ್ತೆ ಚಿತ್ರೀಕರಣಕ್ಕೆ ವಾಪಾಸ್ ಆಗಿದ್ದರು. ಈಗ ಮಗ ಅಭಿಷೇಕ್ ಕೂಡ ತಂದೆಯಂತೆ ಕೆಲಸವೇ ಮೊದಲು ಎನ್ನುವಂತೆ ತಮ್ಮ ಶೂಟಿಂಗ್ ಗೆ ವಾಪಾಸ್ ಆಗಿದ್ದಾರೆ.
ಸದ್ಯ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಗ ಅಭಿಷೇಕ್ ಅವರು amar ಚಿತ್ರದ ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಶೂಟಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಅಮರ್ ಚಿತ್ರದ ಕೆಲವು ಆಕ್ಷನ್ ಸೀನ್ ಗಳಲ್ಲಿ ನಟಿಸುತ್ತಿದ್ದಾರೆ. ಅಮರ್ ಚಿತ್ರದ ಶೂಟಿಂಗ್ ಇನ್ನೇನು ಮುಗಿಯುವ ಹಂತದಲ್ಲಿ ಇದೆ, ಚಿತ್ರ ಮುಂದಿನ ವರ್ಷ ತೆರೆ ಕಾಣಲಿದೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.

Previous article(video)1 ಕೋಟಿ ವೆಚ್ಚದ ಸೆಟ್ ನಲ್ಲಿ ರಾಧಿಕಾ ಸಕತ್ ಅಘೋರಿ ಡಾನ್ಸ್! ವಿಡಿಯೋ ವೈರಲ್
Next articleKGF ಸಿನಿಮಾದಲ್ಲಿ ಬರುವ ಆ ಪುಟ್ಟ ಹುಡುಗ ಯಾರು ಗೊತ್ತಾ! ಒಂದು ಮಾತಿನಿಂದ ಜಗತ್ತು ಗೆದ್ದ ಹುಡುಗ