Film News

ಆನ ಮಹಿಳಾ ಸೂಪರ್ ಹೀರೋ ಸಿನೆಮಾ ಶೂಟಿಂಗ್ ಮುಕ್ತಾಯ

ಬೆಂಗಳೂರು: ಮೊದಲ ಮಹಿಳಾ ಸೂಪರ್ ಹೀರೋ ಸಿನೆಮಾ ಎಂದು ಕರೆಯಲಾಗುತ್ತಿರುವ ಅದಿತಿ ಪ್ರಭುದೇವ ನಟನೆಯ ಆನ ಚಲನಚಿತ್ರ ಶೂಟಿಂಗ್ ಮುಕ್ತಾಯವಾಗಿದೆ ಎನ್ನಲಾಗಿದೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಆರಂಭವಾದ ಆನ ಚಿತ್ರದ ಶೂಟಿಂಗ್ ಒಂದೂವರೆ ತಿಂಗಳಲ್ಲಿ ಮುಕ್ತಾಯವಾಗಿದೆ. ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದು, ವಿಭಿನ್ನ ಪಾತ್ರವನ್ನು ಅದಿತಿ ಪ್ರಭುದೇವ ಪೋಷಿಸಿದ್ದಾರೆ.

ಇನ್ನೂ ಈ ಚಿತ್ರವನ್ನು ಮನೋಜ್ ಪಿ ನಡುಲಮನೆ ನಿರ್ದೇಶಿಸುತ್ತಿದ್ದು, ಈ ಸಿನೆಮಾ ಕುರಿತು ಬೇರೆ ಹೆಚ್ಚಿನ ಮಾಹಿತಿ ತಿಳಿಸಿರಲಿಲ್ಲ. ಬದಲಿಗೆ ಪೋಸ್ಟರ್ ಬಿಡುಗಡೆಯ ವೇಳೆ ಮಾತ್ರ ಬೆಂಕಿಯ ಜ್ವಾಲೆಗೆ ಧುಮುಕುವವರು ಯಾರು, ಸುನಾಮಿ ಅಲೆಗಳ ಎದುರು ನಿಲ್ಲೋವ್ರು ಯಾರು, ಮಿಂಚಿನ ವೇಗವನ್ನು ಮೀರಿಸುವವರು ಯಾರು, ಅವಳ ಶಕ್ತಿಯನ್ನು ತಡೆಯೋರು ಯಾರು, ಆಕೆ ಬರುತ್ತಿದ್ದಾಳೆ ಆನ ಎಂದು ಪೋಸ್ಟರ್ ಹಾಕಿದ್ದರಷ್ಟೆ.

ನಟಿ ಅದಿತಿ ಪ್ರಭುದೇವ ಬ್ರಹ್ಮಾಚಾರಿ ಸಿನೆಮಾ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂಭತ್ತನೇ ದಿಕ್ಕು, ಓಲ್ಡ್ ಮಂಕ್, ತೋತಾಪುರಿ, ಚಾಂಪಿಯನ್, ಗಜಾನನ ಗ್ಯಾಂಗ್, ತ್ರಿಬಲ್ ರೈಡಿಂಗ್ ಸೇರಿದಂತೆ ಹಲವು ಸಿನೆಮಾಗಳಲ್ಲಿ ಅದಿತಿ ಕಾಣಿಸಿಕೊಳ್ಳುತ್ತಿದ್ದಾರೆ.

Trending

To Top