Film News

ನನ್ನನ್ನು ವೇಶ್ಯೆ ಎಂದು, ರೇಪ್ ಮಾಡುವುದಾಗಿ ಬೆದರಿಕೆ ಬಂದಿತ್ತು ಎಂದ ನಿರ್ದೇಶಕನ ಪುತ್ರಿ!

ಮುಂಬೈ: ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ರವರ ಪುತ್ರಿ ಆಲಿಯಾ ಕಶ್ಯಪ್ ರವರಿಗೆ ಕೆಲವು ದಿನಗಳ ಹಿಂದೆಯಷ್ಟೆ ರೇಪ್ ಮಾಡುವುದಾಗಿ, ಕೊಲೆ ಮಾಡುವುದಾಗಿ ಹಾಗೂ ವೇಶ್ಯೆ ಎಂದು ಬೆದರಿಕೆ ಬಂದಿತ್ತು ಎನ್ನಲಾಗಿದೆ.

ಈ ಕುರಿತು ಆಲಿಯಾ ಕಶ್ಯಪ್ ತಮ್ಮ ಯೂಟೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಮಹಿಳೆಯರ ಒಳ ಉಡುಪಿನ ಜಾಹಿರಾತೊಂದರಲ್ಲಿ ಆಲಿಯಾ ಕಾಣಿಸಿಕೊಂಡಿದ್ದಕ್ಕೆ ಅಂತರ್ಜಾಲದಲ್ಲಿ ನೆಟ್ಟಿಗರು ಮನಬಂದಂತೆ ಟ್ರೋಲ್ ಮಾಡಿದ್ದಾರೆ. ಜೊತೆಗೆ ಕೆಟ್ಟದಾಗಿ ಸಹ ಕಾಮೆಂಟ್ಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಭಾರತೀಯ ಯುವತಿಯಾಗಿ ಇಂತಹ ಜಾಹಿರಾತಿನಲ್ಲಿ ನಟಿಸಲು ನಾಚಿಕೆ ಇಲ್ಲವೇ ಎಂದು ಕೆಲವರು ಟೀಕಿಸಿದ್ದಾರೆ. ಆದರೆ ಇದಕ್ಕೆ ಆಲಿಯಾ ತಲೆ ಕೆಡಿಸಿಕೊಂಡಿಲ್ಲ. ಇನ್ನೂ ಕೆಲವರಂತೂ ಕೆಟ್ಟದಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವರಂತೂ ವೇಶ್ಯೆ ಎಂತಲೂ ಸಹ ಕಾಮೆಂಟ್ಸ್ ಮಾಡಿದ್ದಾರಂತೆ.

ನಾನು ತುಂಬಾ ಸೆನ್ಸೆಟೀವ್ ವ್ಯಕ್ತಿ. ಪ್ರತಿಯೊಂದು ಚಿಕ್ಕ ವಿಷಯವೂ ಸಹ ನನ್ನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತೀ ದಿನ ಈ ಕೆಟ್ಟ ಕಾಮೆಂಟ್‌ಗಳನ್ನು ನೋಡಿ ಅಳುತ್ತಿದೆ. ಕೆಲವರು ಕೊಲೆ ಬೆದರಿಕೆ ಹಾಕಿದರೆ, ಕೆಲವರು ರೇಪ್ ಮಾಡುವುದಾಗಿ ಬೆದರಿಸಿದ್ದರು. ಅಷ್ಟೇ ಅಲ್ಲದೇ ನನ್ನನ್ನು ವೇಶ್ಯೆ ಎಂತಲೂ ಸಹ ಕರೆದು, ನಿನ್ನ ರೇಟ್ ಎಷ್ಟು ಎಂದು ಮೆಸೇಜ್ ಮಾಡಿದ್ದರು. ಇದರಿಂದ ನಾನು ತುಂಬಾ ವಿಚಲಿತಳಾಗಿಬಿಟ್ಟಿದೆ ಎಂದು ಕಹಿ ಘಟನೆಯ ಬಗ್ಗೆ ನೋವನ್ನು ತೋಡಿಕೊಂಡಿದ್ದಾರೆ.

ಸದ್ಯ 20 ವರ್ಷದ ಆಲಿಯಾ ಕಶ್ಯಪ್ ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತನ್ನ ವಿರುದ್ದ ಕೆಟ್ಟದಾಗಿ ಕಾಮೆಂಟ್ಸ್ ಮಾಡುವಂತಹ ನೆಟ್ಟಿಗರನ್ನು ಬ್ಲಾಕ್ ಮಾಡುತ್ತಾರಂತೆ. ನನ್ನ ಮೊಬೈಲಿನಲ್ಲಿ ಕೆಟ್ಟ ಕಾಮೆಂಟ್‌ಗಳಿಗೆ ಜಾಗವಿಲ್ಲ ಎಂದು ಆಲಿಯಾ ಹೇಳಿದ್ದಾರೆ.

Trending

To Top