ಸರ್ಕಾರು ವಾರಿ ಪಾಟ ಸಿನೆಮಾದ ಒಂದು ದೃಶ್ಯ ವಿವಾದಕ್ಕೆ ಗುರಿಯಾಗಿದೆ…

ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಿನೆಮಾ ಸೂಪರ್‍ ಡೂಪರ್‍ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಿದೆ. ಸಿನೆಮಾ ಬಿಡುಗಡೆಯಾದ ಕೆಲ ದಿನಗಳಲ್ಲೇ ಬರೊಬ್ಬರಿ ಇನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಿರುವ ಈ ಸಿನೆಮಾದಲ್ಲಿನ ಒಂದು ದೃಶ್ಯ ಇದೀಗ ವಿವಾದಕ್ಕೆ ಕಾರಣವಾಗಿದೆ.

ಹೌದು ಸರ್ಕಾರು ವಾರಿ ಪಾಟ ಸಿನೆಮಾದಲ್ಲಿ ನಟ ಮಹೇಶ್ ಬಾಬು ಬಲವಂತವಾಗಿ ನಟಿ ಕೀರ್ತಿ ಸುರೇಶ್ ರವರನ್ನು ತಮ್ಮ ಪಕ್ಕದಲ್ಲಿ ಮಲಗುವಂತೆ ಒತ್ತಾಯ ಮಾಡುತ್ತಾನೆ. ಬಳಿಕ ಆಕೆಯ ಮೇಲೆ ಮಹೇಶ್ ಬಾಬು ಕಾಲನ್ನು ಹಾಕುತ್ತಾನೆ. ಇದೀಗ ಈ ದೃಶ್ಯ ವಿವಾದಕ್ಕೆ ಕಾರಣವಾಗಿದೆ. ಈ ಸೀನ್ಸ್ ಕೆಟ್ಟದಾದ ಸಂದೇಶವನ್ನು ರವಾನಿಸುತ್ತದೆ ಎಂದು ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಸಿನೆಮಾದಲ್ಲಿ ಮಹಿಳೆಯನ್ನು ಕೀಳಾಗಿ ನೋಡಿದ್ದಾರೆ ಎಂದು ವಿವಾದಗಳು ಸೃಷ್ಟಿಯಾಗಿದೆ. ಇನ್ನೂ ಸಿನೆಮಾದ ನಿರ್ದೇಶಕ ಪರಶುರಾಮ್ ಸಹ ಈ ದೃಶ್ಯದ ವಿಚಾರವಾಗಿ ನೀಡಿರುವ ಹೇಳಿಕೆ ಮತಷ್ಟು ವಿವಾದವನ್ನು ಸೃಷ್ಟಿ ಮಾಡಿದೆ.

ಇನ್ನೂ ಈ ದೃಶ್ಯದ ಕುರಿತು ಮಾದ್ಯಮಗಳು ನಿರ್ದೇಶಕ ಪರಶುರಾಮ್ ರವರನ್ನು ಪ್ರಶ್ನೆ ಮಾಡಿದ್ದು, ಇದಕ್ಕೆ ಉತ್ತರಿಸಿದ ಅವರು, ಈ ದೃಶ್ಯದಲ್ಲಿ ತಪ್ಪು ಏನಿದೆ. ತಾಯಿಯೊಂದಿಗೆ ಒಬ್ಬ ಮಗು ಮಲಗಲು ಇಚ್ಚೆ ಪಟ್ಟಂತೆ ಅಲ್ಲಿ ಸಿನೆಮಾದ ನಾಯಕ ನಾಯಕಿಯ ಪಕ್ಕ ಮಲಗಿದ್ದಾನೆ. ಆ ದೃಶ್ಯ ಅಸಹ್ಯಕರವಾಗಿದೆ ಅಂದುಕೊಂಡಿದ್ದರೇ ಮಹೇಶ್ ಬಾಬು ರವರೇ ದೃಶ್ಯದಲ್ಲಿ ನಟಿಸಲು ತಿರಸ್ಕರಿಸುತ್ತಿದ್ದರು. ಜೊತೆಗೆ ಕಥೆಯಿಂದ ಆ ದೃಶ್ಯಗಳನ್ನು ತೆಗೆದು ಹಾಕಲು ಹೇಳುತ್ತಿದ್ದರು. ಸಮಸ್ಯೆಯಿಲ್ಲದೇ ಸಿನೆಮಾದಲ್ಲಿ ನಾಯಕ ಹಾಗೂ ನಾಯಕಿ ಇಬ್ಬರೂ ದೃಶ್ಯದಲ್ಲಿ ನಟಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಪರಶುರಾಮ್ ರವರ ಈ ಹೇಳಿಕೆಗೆ ನೆಟ್ಟಿಗರಿಂದ ತೀ‌ವ್ರ ಆಕ್ಷೇಪ ವ್ಯಕ್ತವಾಗಿದೆ.

ನಿರ್ದೇಶಕ ಪರಶುರಾಂ ರವರ ಹೇಳಿಕೆಗೆ ವಿಭಿನ್ನ ರೀತಿಯ ಕಾಮೆಂಟ್ ಗಳು ಬರುತ್ತಿವೆ. ಸಿನೆಮಾದಲ್ಲಿ ಕೆಟ್ಟದಾದ ದೃಶ್ಯಗಳನ್ನು ಚಿತ್ರೀಕರಣ ಮಾಡಿರುವುದಲ್ಲದೇ, ಅದನ್ನು ಕೆಟ್ಟ ವಿಧಾನದಲ್ಲಿ ಸಮಜಾಯಿಷಿ ಕೊಡುತ್ತಿದ್ದೀರಿ. ನಟಿಯನ್ನು ಪ್ರೇಯಸಿಗೆ ಹೋಲಿಕೆ ಮಾಡುವುದನ್ನು ಬಿಟ್ಟು ತಾಯಿಗೆ ಹೋಲಿಸುತ್ತಿದ್ದೀರಿ ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಸಿನೆಮಾದಲ್ಲಿ ನಾಯಕಿಯನ್ನು ಭೋಗದ ವಸ್ತುವನ್ನಾಗಿ ತೋರಿಸಲಾಗುತ್ತಿದೆ. ನಾಯಕ ಮಾಡುವ ಎಲ್ಲಾ ಅನಾಚಾರಗಳಿಗೂ ಹಿರೋಯಿಸಂ ಎಂಬ ಮುದ್ರೆ ಹಾಕುತ್ತಾರೆ. ಅದರಲ್ಲೂ ಕೆಲವು ಸಿನೆಮಾಗಳಲಂತೂ ವಿಲನ್ ಗಳಿಗಿಂತ ಹಿರೋಗಳೇ ಹಿರೋಯಿನ್ ಗಳೊಂದಿಗೆ ಕೆಟ್ಟದಾಗಿ ನಟಿಸುತ್ತಾರೆ ಎಂಬ ಕೆಲವೊಂದು ಉದಾಹರಣೆಗಳನ್ನೂ ಸಹ ನೀಡಿದ್ದಾರೆ ನೆಟ್ಟಿಗರು.

Previous articleಹಾಟ್ ಪೊಟೋಗಳೊಂದಿಗೆ ಹಲ್ ಚಲ್ ಸೃಷ್ಟಿಸಿದ ನಟಿ ಸೋನಂ…….
Next articleಹ್ಯಾಟ್ರಿಕ್ ಸೋಲಿನ ಬಗ್ಗೆ ನನಗೆ ಬೇಸರ ಇಲ್ಲ ಎಂದ ಬ್ಯೂಟಿ ಪೂಜಾ ಹೆಗಡೆ….