Saturday, May 21, 2022
HomeEntertainment800 ವರ್ಷಗಳ ಹಳೆ ಮನೆಯ ಫೋಟೋ ಶೇರ್ ಮಾಡಿದ ಶುಭಾ ಪೂಂಜಾ! ಈ ಮನೆಯ ವಿಶೇಷತೆ...

800 ವರ್ಷಗಳ ಹಳೆ ಮನೆಯ ಫೋಟೋ ಶೇರ್ ಮಾಡಿದ ಶುಭಾ ಪೂಂಜಾ! ಈ ಮನೆಯ ವಿಶೇಷತೆ ಏನು ಗೊತ್ತಾ?

ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ 800 ವರ್ಷ ಪರಂಪರೆ ಹೊಂದಿರುವ ತಮ್ಮ ಮನೆಯ ಫೋಟೋವನ್ನ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಶುಭಾ ಪೂಂಜಾ ತಮ್ಮ ಬಹು ಕಾಲದ ಗೆಳೆಯ ಸುಮಂತ್ ಜೊತೆ ತಮ್ಮ ಪ್ರೀತಿಯ ಊರು ಮಜ್ಜಳಗಟ್ಟು ಬಿಡುವಿನಲ್ಲಿರುವ ಮನೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸದ್ಯ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಮದುವೆಯ ಕೆಲವೊಂದಿಷ್ಟು ಫೋಟೋಗಳನ್ನ ಅಂಚಿಕೊಳ್ಳುತ್ತಾ ತಮ್ಮ ಸಿಹಿ ಕ್ಷಣಗಳನ್ನ ಮೆಲುಕು ಹಾಕುತ್ತಿರುತ್ತಾರೆ. ಇತ್ತೀಚೆಗೆ ಶುಭಾ ಪೂಂಜಾ ತಾವು ವಿವಾಹವಾದ ಮನೆಯ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಮ್ಮ ಮನೆಯ ಕುರಿತು ಮಾಹಿತಿಯನ್ನ ನೀಡಿದ್ದಾರೆ. ನನ್ನ ಮನೆ ಮಜ್ಜಲಗಟ್ಟು ಬೀಡು.

ನಾನು ಮದುವೆಯಾದ ಮನೆಯನ್ನ ತೋರಿಸುವಂತೆ ಸಾಕಷ್ಟು ಜನ ಕೇಳಿದರು. ಇದು ನನ್ನ ಅಜ್ಜಿಯ ಮನೆ ಇದು 800 ವರ್ಷಗಳ ಪರಂಪರೆಯೊಂದಿರುವ ಮನೆಯಾಗಿದೆ. ಈ ಮನೆಯಲ್ಲಿ ನಾನು ಬೆಳೆದಿದ್ದು, ನಾನು ಈ ಮನೆಯಲ್ಲಿಯೇ ಮದುವೆಯಾಗಬೇಕು ಎಂದುಕೊಂಡಿದ್ದೆ ಎಂದು ಬರೆದುಕೊಂಡಿದ್ದಾರೆ.

- Advertisement -

You May Like

More