Film News

80ರ ದಶಕದ ಕಂಪ್ಯೂಟರ್ ಗಳ ಹುಡುಕಾಟದಲ್ಲಿದೆ ಕೆ.ಜಿ.ಎಫ್ 2 ತಂಡ…

ರಾಕಿ ಭಾಯ್ ರೀಎಂಟ್ರಿ ‘ಕೆ.ಜಿ.ಎಫ್ ಚಾಪ್ಟರ್-2’ ಒಂದಲ್ಲ ಒಂದು ಕಾರಣದಿಂದ ಸಖತ್ ಸುದ್ದಿಯಲ್ಲಿದೆ.
‘ಹಳೆಯ’ ಸುದ್ದಿ ಅಂದರೆ ಸಿಕ್ಕಾಪಟ್ಟೆ ಹಳೆಯದು ಅಂತಲೇ ಅಂದ್ಕೊಳಿ. ಏಕೆಂದರೆ ಇದೀಗ ಕೆ.ಜಿ.ಎಫ್ ಚಿತ್ರತಂಡಕ್ಕೆ ಹಳೆಯ ಕಂಪ್ಯೂಟರ್​ಗಳು ಬೇಕಾಗಿವೆಯಂತೆ.
ಇಪ್ಪತ್ತೈದು-ಮೂವತ್ತು ವರ್ಷಗಳ ಹಳೆಯ ಕಂಪ್ಯೂಟರ್​ಗಳನ್ನು ಚಿತ್ರೀಕರಣದಲ್ಲಿ ಬಳಸಲು ಪ್ರಶಾಂತ್ ನೀಲ್ ಮತ್ತು ತಂಡ ಹುಡುಕಾಡುತ್ತಿದೆ ಎಂಬ ಸುದ್ದಿ ಗಾಂಧಿನಗರಲ್ಲಿದೆ.
ಅಷ್ಟಕ್ಕೂ ಪಳೆಯುಳಿಕೆಯಂತಿರುವ ಇಂತಹ ಕಂಪ್ಯೂಟರ್​ಗಳು ಯಾಕೆಂದರೆ…ಚಿತ್ರದಲ್ಲಿ ಬರುವ ಸನ್ನಿವೇಶಗಳು. ಹೌದು, ಕೆಜಿಎಫ್ ಹೊಸ ಚಾಪ್ಟರ್ ​ 80ರ ರಾಜಕೀಯ ಕಥೆಯನ್ನು ಹೇಳಲಿದೆ.
1980ರ ಕಥೆಯನ್ನು ಹೊಂದಿರುವುದರಿಂದ ಚಿತ್ರದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೋಲುವ ಪಾತ್ರವೊಂದು ಮೂಡಿ ಬರಲಿದೆ. ಆ ರೋಲ್​ನಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳುವುದು ಕನ್ಫರ್ಮ್​ ಕೂಡ ಆಗಿದೆ.
ಹೀಗಾಗಿ ಇದೇ ಸಮಯದಲ್ಲಿ ಸರ್ಕಾರಿ ಕಛೇರಿಗಳಲ್ಲಿ ಬಳಕೆಯಲ್ಲಿದ್ದ ಹಳೆಯ ಮಾದರಿಯ ಕಂಪ್ಯೂಟರ್​ಗಳ ಮತ್ತೆ ಜೋಡಿಸಿ ಕಥೆ ಹೇಳುವ ಪ್ರಯತ್ನದಲ್ಲಿದ್ದಾರೆ ಪ್ರಶಾಂತ್ ನೀಲ್.
ಇನ್ನು ಚಾಪ್ಟರ್​- 1ನಲ್ಲೇ ರಾಜಕೀಯ ನಾಯಕರು ಮತ್ತು ವಿಲನ್​ಗಳು ಕೆಜಿಎಫ್ ಚಿನ್ನದ ಗಣಿಯ ಹಿಂದೆ ಬಿದ್ದಿರುವುದನ್ನು ತೋರಿಸಲಾಗಿದೆ.
ಇದರ ನಡುವೆ ಮಾಜಿ ಪ್ರಧಾನಿಯನ್ನು ಹೋಲುವ ಪಾತ್ರ ಮತ್ತು ಅಧೀರನ ಎಂಟ್ರಿ ಚಿತ್ರದ ಕಥೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ರಾಕಿ ಭಾಯ್​ಯ ರಿ ಎಂಟ್ರಿಯನ್ನು ಡಿಫೆರೆಂಟ್​ ಆಗಿ ತೋರಿಸುವ ಪ್ರಯತ್ನದಲ್ಲಿರುವ  ‘ಕೆಜಿಎಫ್ ಚಾಪ್ಟರ್​ 2’ ಚಿತ್ರತಂಡ ದಿನ ಕಳೆದಂತೆ ಸಿನಿಪ್ರಿಯರ ನಿರೀಕ್ಷೆಯನ್ನು ಹೆಚ್ಚಿಸುತ್ತಿರುವುದಂತು ಸುಳ್ಳಲ್ಲ.

Trending

To Top