ಬೆಂಗಳೂರು: ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕುರಿತಂತೆ ನಿರ್ಮಾಣವಾಗುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನೆಮಾದ ಕೊನೆಯ ಹಂತದ ಶೂಟಿಂಗ್ ಕಾಶ್ಮೀರದಲ್ಲಿ ಮಾಡುತ್ತಿದೆ ಎಂಬ ಮಾಹಿತಿ ಹೊರಬಂದಿದೆ.
ಸ್ಯಾಂಡಲ್ ವುಡ್ ನ ಸಿಂಪಲ್ ಆಗಿ ಒಂದು ಲವಸ್ಟೋರಿ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಲನಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಕೊನೆಯ ಹಂತದ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ಮಾಡುತ್ತಿದೆ. ಲಾಕ್ ಡೌನ್ ತೆರವಿನ ಬಳಿಕ ಅಕ್ಟೋಬರ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭ ಮಾಡಿರುವ ಚಾರ್ಲಿ ತಂಡ ಬೆಂಗಳೂರು ಸೇರಿದಂತೆ ಕೊಡೈಕೆನಾಲ್ ನಲ್ಲಿ ಚಿತ್ರೀಕರಣ ಮುಗಿಸಿದ್ದು, ಇದೀಗ ಕಾಶ್ಮೀರ ಸೇರಿದೆ. ಕಳೆದ ನವೆಂಬರ್ 26 ರಿಂದಲೇ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಈ ವಿಷಯವನ್ನು ಚಾರ್ಲಿ ತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ಕಾಶ್ಮೀರದಲ್ಲಿನ ಪೊಟೋವೊಂದನ್ನು ಶೇರ್ ಮಾಡಿದೆ.
ಮುಂದಿನ 2021 ವರ್ಷದಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಕುರಿತು ನಿರ್ದೇಶಕ ಕಿರಣ್ ರಾಜ್ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಚಿತ್ರತಂಡ ಕಾಶ್ಮೀರದಿಂದ ಶಿಮ್ಲಾದವರೆಗಿನ ಕೊನೆಯ ಹಂತದ ಮೊದಲನೇ ಭಾಗದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ್ದೇವೆ. ಆದಷ್ಟೂ ಶೀಘ್ರವಾಗಿ ಚಿತ್ರೀಕರಣ ಮುಗಿಸಿ ಸಿನೆಮಾ ತಂಡ ಕರ್ನಾಟಕಕ್ಕೆ ವಾಪಸ್ಸು ಆಗಲಿದೆಯಂತೆ.
ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಅಭಿಮಾನಿಗಳಲ್ಲಿ ಬೇರೂರಿದ್ದು, 777 ಚಾರ್ಲಿ ಚಿತ್ರ ಯಾವ ಮಟ್ಟಿಗೆ ಅಭಿಮಾನಿಗಳೊಂದಿಗೆ ಬೆರೆಯಲಿದೆ ಎಂಬ ಕುತೂಹಲ ಮನೆ ಮಾಡಿದೆ. ಇನ್ನೂ ಈ ಚಿತ್ರದಲ್ಲಿ ತಮಿಳು ಭಾಷೆಯ ಖ್ಯಾತ ನಟ ಬಾಬಿ ಸಿಂಹ ಅಭಿನಯಿಸಿದ್ದು, ಚಿತ್ರ ತಂಡದಿಂದ ಅನೇಕ ಪೊಟೋಗಳು ರಿಲೀಸ್ ಆಗಿದೆ.
